ಟೀಕೆಗಳಿಂದ ತೆರೆ ಮೇಲೆ ಕಾಣಿಸಿಕೊಂಡ ಚಿತ್ರ ಇದೀಗ ಸಿನಿ ಲೋಕದಲ್ಲಿ ಸದ್ದು ಮಾಡುತ್ತಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ವಿಶ್ವಾದ್ಯಂತ ಮೊದಲ ದಿನವೇ ಬರೋಬ್ಬರಿ 140 ಕೋಟಿಗೂ ಅಧಿಕ ಗಳಿಕೆ ಮಾಡಿದ್ದು, ರಿಲೀಸ್ ಆದ ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರಿದ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಟಾಕ್ಸಿಕ್’ ಪಾತ್ರವಾಗಿದೆ. ಈ ಸಾಲಿನಲ್ಲಿ ಮೊದಲ ದಿನ 146 ಕೋಟಿ ರೂ. ಗಳಿಸಿದ್ದ ‘ಧುರಂಧರ್ 2’ ಮೊದಲ ಸ್ಥಾನದಲ್ಲಿದ್ದರೆ, ‘ಟಾಕ್ಸಿಕ್’ ಎರಡನೇ ಸ್ಥಾನ ಪಡೆದುಕೊಂಡಿದೆ ಎನ್ನುವ ಮಾಹಿತಿ ಬೆಳಕಿಗೆ ಬಿದ್ದಿದೆ.
ಬೆಂಗಳೂರು ನಗರವೊಂದರಲ್ಲೇ 34 ಪ್ರಮುಖ ಕೇಂದ್ರಗಳಲ್ಲಿ ಸಿನಿಮಾಗೆ ಹೌಸ್ಫುಲ್ ಓಪನಿಂಗ್ ಸಿಕ್ಕಿದ್ದು, ಮಲ್ಟಿಪ್ಲೆಕ್ಸ್ಗಳಲ್ಲೂ ಶೇ.55ಕ್ಕೂ ಹೆಚ್ಚು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ‘ಕೆಜಿಎಫ್ 2’ ಮೂಲಕ ಈ ರೀತಿಯ ಬಿಗ್ ಓಪನಿಂಗ್ ದಾಖಲಾಗಿತ್ತು. ಇದೀಗ 4 ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿರುವ ಯಶ್, ತಮ್ಮದೇ ದಾಖಲೆಯನ್ನು ಮುಂದುವರಿಸಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ.
. ಯಾವುದೇ ಪ್ರೀಮಿಯರ್ ಅಥವಾ ಸೆಲೆಬ್ರಿಟಿ ಶೋಗಳಿಲ್ಲದೆ ನೇರವಾಗಿ ಆರು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಬಹುತೇಕ ಫ್ಯಾನ್ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ. ಭಾರತದಲ್ಲಿ ಈ ಚಿತ್ರ 120.75 ಕೋಟಿ ರೂ., ವಿದೇಶಗಳಲ್ಲಿ 20 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ.
‘ಟಾಕ್ಸಿಕ್’ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಉತ್ತಮ ಆರಂಭವನ್ನು ಪಡೆಯುವ ನಿರೀಕ್ಷೆಯಿತ್ತು. ಇಲ್ಲಿಯವರೆಗಿನ ಇದರ ಗಳಿಕೆಯು ಅತ್ಯದ್ಭುತವಾಗಿದ್ದು, ಭಾರತದಾದ್ಯಂತ ಮತ್ತು ವಿವಿಧ ಭಾಷೆಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಆದರೆ, ಈ ನಿರೀಕ್ಷೆಗಳನ್ನು ಮೀರಿ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ.
ಕನ್ನಡ ವರ್ಸನ್ ಸ್ವಲ್ಪ ಹಿಂದಿದ್ದರೂ, ಮಧ್ಯಾಹ್ನ 3 ಗಂಟೆಯ ವೇಳೆಗೆ ₹14 ಕೋಟಿ ಗಳಿಕೆಯನ್ನು ದಾಟಿತು. ಬೆಳಗಿನ ಪ್ರದರ್ಶನಗಳಲ್ಲಿ ಶೇ. 85ರಷ್ಟು ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿದ್ದವು. ತೆಲುಗು ವರ್ಸನ್ ನಲ್ಲಿಯೂ ಅತ್ಯುತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಆದರೆ ತಮಿಳು ಮತ್ತು ಮಲಯಾಳಂ ವರ್ಸನ್ ತುಸು ಹಿಂದುಳಿದಿವೆ.
ಮೂಲ ಕನ್ನಡ ವರ್ಸನ್ ಮುಂಚೂಣಿಯಲ್ಲಿ ಭಾರತದಾದ್ಯಂತ ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿ ತುಳುಕಿದವು. ಸಂಜೆ 4 ಗಂಟೆಯ ವೇಳೆಗೆ ದೇಶಾದ್ಯಂತ ₹72.84 ಕೋಟಿ ನಿವ್ವಳ ಗಳಿಕೆಯನ್ನು ಕಂಡಿದೆ ಎಂದು ‘ಸ್ಯಾಕ್ನಿಲ್ಕ್’ ವರದಿ ಮಾಡಿದೆ. ಇದರಲ್ಲಿ ಹಿಂದಿ ವರ್ಸನ್ ನಲ್ಲಿ ₹40 ಕೋಟಿ ಇತ್ತು.
ಓಪನಿಂಗ್ ಡೇ ಅಂತ್ಯದ ವೇಳೆಗೆ ₹80 ಕೋಟಿಗಳ ಗಡಿಯನ್ನು ದಾಟಲಿದೆ ಎಂದು ಅನೇಕ ಟ್ರೇಡ್ ತಜ್ಞರು ಅಂದಾಜಿಸಿದ್ದಾರೆ. ಆದಾಗ್ಯೂ, ಇದು ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಮೊದಲ ದಿನದ ₹116 ಕೋಟಿಗಳ ಸಾರ್ವಕಾಲಿಕ ಕನ್ನಡ ಚಲನಚಿತ್ರೋದ್ಯಮದ ದಾಖಲೆಯನ್ನು ಮುಟ್ಟಲು ವಿಫಲವಾಗಲಿದೆ.
‘ಟಾಕ್ಸಿಕ್’ Toxic ಚಿತ್ರದ ಮುಂಗಡ ಬುಕಿಂಗ್ಗಳು ದಾಖಲೆಗಳನ್ನು ಮುರಿದ ರೀತಿಯಿಂದಲೇ ಈ ಭಾರಿ ಪ್ರತಿಕ್ರಿಯೆ ಸ್ಪಷ್ಟವಾಗಿತ್ತು. ‘ಟಾಕ್ಸಿಕ್’ 18 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳನ್ನು ಮಾರಾಟ ಮಾಡಿತ್ತು ಮತ್ತು ಮೊದಲ ದಿನಕ್ಕೆ ₹60 ಕೋಟಿಗೂ ಸ್ವಲ್ಪ ಕಡಿಮೆ ಮೊತ್ತದ ಗಳಿಕೆಯನ್ನು ಕಂಡಿತ್ತು ಎನ್ನಲಾಗಿದೆ.





