7ನೇ ತಿಂಗಳಿಗೆ ಕಾಲಿಟ್ಟ US-Iran ಸಂಘರ್ಷ: ಇನ್ನು ಅವರ ಆಟ ನಡೆಯಲ್ಲ- ಟ್ರಂಪ್

ವಾಷಿಂಗ್ಟನ್: ಇತ್ತೀಚೆಗೆ ಜಗತ್ತನ್ನೇ ಆತಂಕಕ್ಕೆ ನೂಕಿರುವ ಅಮೆರಿಕಾ-ಇರಾನ್ ಯುದ್ಧ ಮುಂಬರುವ ನವೆಂಬರ್ ಮಧ್ಯಾವಧಿ ಚುನಾವಣೆಯ ನಂತರ “ತಕ್ಷಣವೇ” ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ,

ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆಯಲಿರುವ ರಿಪಬ್ಲಿಕನ್ ಸಮಾವೇಶಕ್ಕೆ ಹೊರಡುವ ಮುನ್ನ ಮಾತನಾಡಿದ ಅಧ್ಯಕ್ಷ ಟ್ರಂಪ್, ಚುನಾವಣೆಯ ಮೇಲೆ ಪ್ರಭಾವ ಬೀರಲು ಅವರು ಹತಾಶರಾಗಿದ್ದಾರೆ. ದುರ್ಬಲ ವ್ಯಕ್ತಿಗಳ ಗುಂಪು ಅಧಿಕಾರಕ್ಕೆ ಬರಬೇಕು, ನಂತರ ಅವರನ್ನು ಹಾಗೆಯೇ ಬಿಟ್ಟು ತಮ್ಮ ಪರಮಾಣು ಅಸ್ತ್ರವನ್ನು ಹೊಂದಲು ಅವಕಾಶ ನೀಡಬೇಕು ಎಂಬುದು ಅವರ ಉದ್ದೇಶ ಎಂದರು.

ಚುನಾವಣೆ ಮುಗಿದ ತಕ್ಷಣ ಯುದ್ಧ ಅಂತ್ಯಗೊಳ್ಳಲಿದೆ. ಏಕೆಂದರೆ ಅವರು ಇನ್ನು ಹೆಚ್ಚು ಕಾಲ ತಡೆದುಕೊಳ್ಳಲು ಸಾಧ್ಯವಿಲ್ಲ ಈ ನಡುವೆ ಯುದ್ಧದ ತೀವ್ರತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $100 ದಾಟಿದ್ದು, ಜಗತ್ತಿನಾದ್ಯಂತ ಇಂಧನ ದರ ಏರಿಕೆಯಾಗಿದೆ.ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇರಾನ್ ಇನ್ನು ಹೆಚ್ಚು ದಿನ ಯುದ್ಧವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರುವ ಏಕೈಕ ಉದ್ದೇಶದಿಂದ ಟೆಹ್ರಾನ್ ಈ ಸಂಘರ್ಷವನ್ನು ಉದ್ದೇಶಪೂರ್ವಕವಾಗಿ ಎಳೆಯುತ್ತಿದೆ. ಹೀಗಾಗಿ, ನವೆಂಬರ್ ಚುನಾವಣ ಮುಗಿದ ತಕ್ಷಣವೇ ಈ ಯುದ್ಧ ಕೊನೆಗೊಳ್ಳಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವೆಂಬರ್ ಚುನಾವಣೆಯವರೆಗೆ ತೈಲ ಬೆಲೆಯಲ್ಲಿ ಯಾವುದೇ ದೊಡ್ಡ ಇಳಿಕೆ ಕಂಡುಬರುವುದಿಲ್ಲ. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಬೆಲೆಗಳು ಭಾರೀ ಪ್ರಮಾಣದಲ್ಲಿ ಕುಸಿಯಲಿವೆ,” ಎಂದು ಭರವಸೆ ನೀಡಿದ್ದಾರೆ.

ಯುದ್ಧ ಆರಂಭವಾದ ಸಂದರ್ಭದಲ್ಲಿ ಕೆಲವೇ ವಾರಗಳಲ್ಲಿ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ಟ್ರಂಪ್‌ ಹೇಳಿದ್ದರು. ಆದರೆ ಇದೀಗ ಸಂಘರ್ಷ ಏಳನೇ ತಿಂಗಳಿಗೆ ಕಾಲಿಟ್ಟಿದೆ.

ಅಮೆರಿಕ-ಇಸ್ರೇಲ್‌ ಯುದ್ಧದಿಂದ ಗಲ್ಫ್‌ ಪ್ರದೇಶದಿಂದ ಹಾರ್ಮುಜ್‌ ಜಲಸಂಧಿ ಮೂಲಕ ಸಾಗುತ್ತಿದ್ದ ತೈಲದ ಪ್ರಮಾಣದಲ್ಲಿ ಭಾರಿ ಕುಸಿತ ಉಂಟಾಗಿದೆ. ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ಪೆಟ್ರೋಲಿಯಂ ಪೂರೈಕೆಯ ಸುಮಾರು ಶೇ.20ರಷ್ಟು ಈ ಜಲಮಾರ್ಗದ ಮೂಲಕ ಸಾಗುತ್ತಿತ್ತು.

ಕಳೆದ ವಾರ ಟ್ರಂಪ್‌ ಈ ಸಂಘರ್ಷವನ್ನು “ಸಣ್ಣ ವಿಷಯ” ಎಂದು ಬಣ್ಣಿಸಿದ್ದರು. ಆದರೆ, ಯುದ್ಧದಿಂದ ಇಂಧನ ಬೆಲೆ ಮತ್ತು ಹಣದುಬ್ಬರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಇದರ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಆಡಳಿತ ಪಕ್ಷದವರೇ ವ್ಯಕ್ತಪಡಿಸುತ್ತಿದ್ದಾರೆ.

ಕೇವಲ ಕೆಲವು ವಾರಗಳಲ್ಲಿ ಮುಗಿಯಬೇಕಿದ್ದ ಈ ಮಿಲಿಟರಿ ಕಾರ್ಯಾಚರಣೆಯು ಈಗ 7ನೇ ತಿಂಗಳಿಗೆ ಕಾಲಿಟ್ಟಿದೆ. ಯುಎಸ್ ಮಿಲಿಟರಿ ಯೋಜಿತ ಸಮಯಕ್ಕಿಂತ ಮುಂದಿದೆ ಮತ್ತು ಇರಾನ್‌ನ ಬಹುತೇಕ ಪ್ರಮುಖ ನೆಲೆಗಳನ್ನು ಧ್ವಂಸಗೊಳಿಸಿದೆ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others