UT Khader: ಯುವಸಮೂಹ, ವಿದ್ಯಾರ್ಥಿಗಳ ನೋವಿನಲ್ಲಿ ದುಡ್ಡು ಮಾಡಬೇಡಿ- ಪಿಜಿ ಗಳಲ್ಲಿ ಕಳಪೆ ಆಹಾರ ನೀಡಿದ್ರೆ ಕ್ಷಮೆ ಇಲ್ಲ : ಖಾದರ್‌ ಖಡಕ್‌ ಎಚ್ಚರಿಕೆ

ಬೆಂಗಳೂರು: ಇನ್ನು ಮುಂದೆ ಪಿಜಿ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿ ಬಿದ್ದರೆ ಕ್ಷಮಾಪಣೆ ಇಲ್ಲ, ಖಾಸಗಿ ಹಾಸ್ಟೆಲ್ ಕೂಡ ಪರಿಶೀಲನೆ ಮಾಡ್ತೇವೆ ಎಂದು ಸಚಿವ ಯು.ಟಿ ಖಾದರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, 30 ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ತಯಾರು ಮಾಡುವ ಕಡೆ ತಪಾಸಣೆ ಮಾಡಿದ್ದೇವೆ, ಎಲ್ಲಿಂದ ಆಗಾರ ಪದಾರ್ಥಗಳು ಸರಬರಾಜು ಆಗುತ್ತವೆ ಅನ್ನೋದನ್ನೂ ತಪಾಸಣೆ ಮಾಡಿದ್ದೇವೆ. ರಾಜ್ಯದಲ್ಲಿ 30 ಟೀಂ ತಯಾರು ಮಾಡಿ, 60ಕ್ಕೂ ಹೆಚ್ಚು 3 ಸ್ಟಾರ್, 5 ಸ್ಟಾರ್, 8 ವೇರ್ ಹೌಸ್, 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ.

ರಾಜ್ಯಕ್ಕೆ ಫಾರಿನ್ ಕಂಪನಿ ಚಾಕೊಲೆಟ್‌ಗಳು ಬರುತ್ತವೆ, ಶುಗರ್‌ನಲ್ಲಿ ಭಾರೀ ವ್ಯತ್ಯಾಸ ಇದೆ. ಸೆಂಟ್ರಲ್ ಆಕ್ಟ್‌ನಲ್ಲಿ ಚೇಂಜ್ ಆಗಬೇಕು. ಕೇಂದ್ರ ಆಹಾರ ಸಚಿವರಿಗೆ ಸಚಿವರಿಗೆ ಮಾಹಿತಿ ಕೊಡ್ತೇವೆ. ಇನ್ನೂ ಈಗಾಗಲೇ ಕಳಪೆ ಆಹಾರದೊಂದಿಗೆ ಸಿಕ್ಕಿಬಿದ್ದಿರುವ ಹೋಟೆಲ್‌ಗಳಿಗೆ ನೋಟಿಸ್ ಜೊತೆಗೆ 5 ಲಕ್ಷದ ವರೆಗೂ ದಂಡ ಹಾಕ್ತೇವೆ. ದಂಡ ಹಾಕಿ ಕ್ರಮ ವಹುಸುತ್ತೇವೆ, ಕ್ಷಮಿಸುವ ಮಾತೇ ಇಲ್ಲ ಎಂದು ತಿಳಿಸಿದರು.

ಕೂಲ್ ಡ್ರಿಂಕ್ಸ್ ಬೇರೆ ಕಡೆಗಳಲ್ಲಿ ಬೇರೆ, ಇಲ್ಲಿ ಬಂದಾಗ ಅದರ ರುಚಿಯೇ ಬೇರೆ. ಸೆಂಟ್ರಲ್ ಫುಡ್ ಸೇಫ್ಟಿ ನಿಯಮ ಬದಲಾಗಬೇಕು. ಬೇರೆ ದೇಶದ ಕ್ವಾಲಿಟಿ ಕೂಡ ಇಲ್ಲಿ ಅದೇ ಆಗಿರಬೇಕು. ಇದಕ್ಕಾಗಿ ಅಂತಾರಾಷ್ಟ್ರೀಯ ಆಲ್ ಇಂಡಿಯಾ ಫುಡ್ ಸೇಫ್ಟಿ ಕಾನ್ಕ್ಲೇವ್ ಮಾಡ್ತೀವಿ ಎಂದು ಹೇಳಿದರು.

ಪಿಜಿ ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿ ಬಿದ್ದರೆ ಕ್ಷಮಾಪಣೆ ಇಲ್ಲ. ಖಾಸಗಿ ಹಾಸ್ಟೆಲ್ ಕೂಡ ಪರಿಶೀಲನೆ ಮಾಡ್ತೇವೆ. ಬಸ್ ಸ್ಟಾಪ್ ಹೋಟೆಲ್‌, ಮದುವೆ ಮನೆ ಕೂಡ ಪರಿಶೀಲನೆ ಮಾಡ್ತೇವೆ. ರೈಲ್ವೇ ಕ್ಯಾಂಟೀನ್ ಮೇಲೂ ಪರಿಶೀಲನೆ ಮಾಡ್ತೇವೆ. ಫ್ಲೈಟ್ ನಲ್ಲೂ ಕೊಡುವ ಆಹಾರದ ಬಗ್ಗೆಯೂ ಪರಿಶೀಲನೆ ಮಾಡ್ತೇವೆ. ಅದಕ್ಕಾಗಿ ನ್ಯಾಷನಲ್ ಪ್ರಾಕ್ಟೀಸ್ ಟೀಂ ಸೆಟ್ ಮಾಡ್ತೇವೆ ಎಂದರು.

ಪಿಜಿ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ಯುವಸಮೂಹ, ವಿದ್ಯಾರ್ಥಿಗಳ ನೋವಿನಲ್ಲಿ ದುಡ್ಡು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರಲ್ಲದೇ, ಪಿಜಿಗಳು ಮತ್ತೆ ತಪ್ಪು ಮಾಡಿದ್ರೆ ಕ್ಷಮಿಸುವ ಮಾತೇ ಇಲ್ಲ. ಖಾಸಗಿ ಹಾಸ್ಟೆಲ್‌ಗಳನ್ನೂ ಚೆಕ್ ಮಾಡ್ತೇವೆ ಎಂದು ಹೇಳಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others