ಯಾರು 10 ವರ್ಷದಿಂದ ಇಲ್ಲಿ ಇಲ್ಲವೋ ಅವರನ್ನ ಹೊರಗೆ ಹಾಕ್ತೀವಿ: ಪರಮೇಶ್ವರ್‌

ಬೆಂಗಳೂರು: ಶಿವಾಜಿ ನಗರದಲ್ಲಿ ಮಾಡ್ತಿರೋ ಫುಟ್‌ಪಾತ್‌ ತೆರವಿಗೆ ಜನರು ಸಹಕಾರ ಕೊಡಬೇಕು ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.

ಶಿವಾಜಿ ನಗರದಲ್ಲಿ ಫುಟ್‌ಪಾತ್ ತೆರವು ಮಾಡಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣ ವಿಚಾರಕ್ಕೆ ಮಾತನಾಡಿದ ಅವರು, ಹಲ್ಲೆ ಮಾಡಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ದೇಶದಲ್ಲಿ ಕಾನೂನು ಇಲ್ಲವಾ?ಶಿವಾಜಿ ನಗರದಲ್ಲಿ ತೆರವು ಮಾಡಲು ಹೋದಾಗ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಯಾರೇ ಆದ್ರು ಹಲ್ಲೆ ಮಾಡೋಕೆ ಅಧಿಕಾರ ಇಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ತಾರೆ ಎಂದರು.

ನಮ್ಮ 10 ಮಾನದಂಡದ ಒಳಗೆ ಇದ್ದರೆ ‌ಮಾತ್ರ ನಾವು ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡ್ತೀವಿ. ಇಲ್ಲದೇ ಹೋದ್ರೆ ನಾವು ಸರ್ಟಿಫಿಕೇಟ್ ಕೊಡಲ್ಲ. ಮಾನದಂಡದ ಅನ್ವಯ ಮಾತ್ರವೇ ಸರ್ಟಿಫಿಕೇಟ್ ಕೊಡ್ತೀವಿ, ಯಾರು 10 ವರ್ಷದಿಂದ ಇಲ್ಲಿ ಇಲ್ಲವೋ ಅವರನ್ನ ಹೊರಗೆ ಹಾಕ್ತೀವಿ. ನಾವು ಪೌರತ್ವ ಕೊಡ್ತಿಲ್ಲ. ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡ್ತಾ ಇದ್ದೇವೆ. ಪೌರತ್ವ ಮತ್ತು ಶಾಶ್ವತ ನಿವಾಸ ಪತ್ರ ಎಂದರೇನು ಅಂತ ಬಿಜೆಪಿ ಅವರು ಮೊದಲು ತಿಳಿದುಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಫುಟ್‌ಪಾತ್ ತೆರವಿಗೆ ಜನ ಸಹಕಾರ ಕೊಡಬೇಕು. ಫುಟ್‌ಪಾತ್ ಅಂದರೆ ಏನು? ಫುಟ್‌ಪಾತ್ ಅನ್ನು ಅಂಗಡಿ ಪಾತ್ ಮಾಡಿದ್ರೆ ಹೇಗೆ? ಅಂತ ಪ್ರಶ್ನೆ ಮಾಡಿದ್ದಾರೆ.

ಪೌರತ್ವ ಪ್ರಮಾಣ ಪತ್ರ ಕೊಡೋದು ಕೇಂದ್ರ ಸರ್ಕಾರ ನಾವಲ್ಲ.ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ ಅಕ್ರಮ ಬಾಂಗ್ಲಾ ಮತ್ತು ಪಾಕಿಸ್ತಾನ ಪ್ರಜೆಗಳಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನೇ ಹಿಂದೆ ಸದನದಲ್ಲಿ ಬಾಂಗ್ಲಾದೇಶ ಸೇರಿ ಬೇರೆ ಬೇರೆ ವಿದೇಶದಿಂದ ಅಕ್ರಮವಾಗಿ ಇಲ್ಲಿಗೆ ಬಂದಿದ್ದಾರೆ ಉತ್ತರ ಕೊಟ್ಟಿದ್ದೆ. ಈ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಟ್ಟರೆ ನಮ್ಮವರು ಯಾರು ಅಂತ ಗೊತ್ತಾಗುತ್ತದೆ. ಬಾಂಗ್ಲಾದೇಶದವರಿಗೆ ಕೊಡಲು ಆಗುತ್ತದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post