ಬೆಳಗ್ಗೆ ಯಾರನ್ನೋ ಬಂಧಿಸ್ತೀರಾ? ಸಂಜೆಗೆ ಅವರಿಗೆ ಜಾಮೀನು ಸಿಗುತ್ತೆ, ನೀವು ಅದ್ಯಾವ ತನಿಖೆ ನಡೆಸ್ತಾ ಇದ್ದೀರಾ? : ಮಾಜಿ ಸಿಎಂ ಸಿದ್ದು

ಬೆಂಗಳೂರು: ತಮ್ಮ ವಿರುದ್ಧ ನಡೆದಿದೆ ಎನ್ನಲಾದ ನಕಲಿ ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ತನಿಖೆ ತೃಪ್ತಿಕರವಾಗಿ ಸಾಗದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ತನಿಖೆಯ ಮಂದಗತಿಯ ಬಗ್ಗೆ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ, “ಏನ್ ತನಿಖೆ ಮಾಡ್ತಿದ್ದೀರಾ ನೀವು? ಬೆಳಗ್ಗೆ ಯಾರನ್ನೋ ಬಂಧಿಸ್ತೀರಾ, ಸಂಜೆ ವೇಳೆಗೆ ಅವರಿಗೆ ಜಾಮೀನು ಸಿಗುತ್ತೆ. ಅದ್ಯಾವ ರೀತಿ ನೀವು ತನಿಖೆ ನಡೆಸ್ತಾ ಇದ್ದೀರಾ?” ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾದ ದಿನದಿಂದಲೂ ಸಿದ್ದರಾಮಯ್ಯ ಅವರು ತನಿಖೆಯ ದಿನಂಪ್ರತಿ ಬೆಳವಣಿಗೆಗಳ ಮಾಹಿತಿ ಪಡೆಯುತ್ತಿದ್ದಾರೆ. ಎಂದಿನಂತೆ ನಿನ್ನೆ ಕೂಡ ಪ್ರಕರಣದ ಪ್ರಗತಿ ವರದಿ ನೀಡಲು ತಮ್ಮನ್ನು ಭೇಟಿ ಮಾಡಿದ ಸಿಸಿಬಿ ಅಧಿಕಾರಿಗಳ ತಂಡವನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಇನ್ನು ನೀವು ಏನು ತಾನೇ ಮಾಡ್ತೀರಾ? ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯಬೇಕು. ಯಾವುದೇ ಲೋಪವಿಲ್ಲದೆ ಆದಷ್ಟು ಬೇಗ ಪ್ರಕರಣದ ಪ್ರಮುಖ ಆರೋಪಿಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಿ”“ಪ್ರಕರಣ ನಡೆದು ಇಷ್ಟು ದಿನಗಳಾದರೂ ಇದರ ಹಿಂದಿರುವ ಪ್ರಮುಖ ಕಿಂಗ್‌ಪಿನ್‌ಗಳನ್ನು ಇದುವರೆಗೂ ಅರೆಸ್ಟ್ ಮಾಡಿಲ್ಲ. ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

Share it :

Leave a Reply

Your email address will not be published. Required fields are marked *