ಪ್ರಪಂಚದ ಎಲ್ಲಾ ಜ್ಞಾನ ಒಂದೇ ಸುೂರಿನಡಿ ತರುವ ತವಕ ನನ್ನದು : ಎಂ ಅಂಕೇಗೌಡ

ಶ್ರೀರಂಗಪಟ್ಟಣ: ಪ್ರಪಂಚದ ಎಲ್ಲಾ ಜ್ಞಾನವನ್ನು ಒಂದೇ ಸೂರಿ ನುಡಿ ತರುವ ತವಕ ನನ್ನದು. ಅರ್ಧ ಶತಮಾನದ ಪರಿಶ್ರಮದಿಂದ ಹಂಚುವ ಪುಸ್ತಕ ಮನೆ ಸ್ಥಾಪನೆಗಾಗಿ 2026ರ ಅನ್ಸಂಗ್ ಹೀರೋಸ್ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ನನಗೆ ಸಿಕ್ಕಿದೆ ಎಂದು ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡ ತಿಳಿಸಿದರು.

ಶ್ರೀರಂಗಪಟ್ಟಣದ ಸಂಜಯ ಪ್ರಕಾಶನ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನನ್ನದೊಂದು ಬಯಕೆ ಇದೆ, ಇತಿಹಾಸ ಪುಟಗಳಲ್ಲಿ ಸಾವಿರ ವರ್ಷಗಳ ಹಿಂದೆ ನಮ್ಮ ನಳಂದ ವಿಶ್ವವಿದ್ಯಾನಿಲಯದಲ್ಲಿ ಧರ್ಮಗಂಜ್ ಎಂಬ ಮೂರು ಅಂತಸ್ತಿನ ಗ್ರಂಥಾಲಯ ಇತ್ತು. ಜಗತ್ತಿನ ಮೂಲೆ ಮೂಲೆಯಿಂದ ಸಂಗ್ರಹಿಸಿದ ಹಸ್ತಪ್ರತಿಗಳು ಸುತ್ತು ಬೂದಿಯಾಯಿತು. ಅಂತಹದ್ದೇ ರೀತಿಯ ಗ್ರಂಥಾಲಯದ ಜ್ಞಾನ ದೀಪವನಚ್ಚಬೇಕು. ಹರಳಹಳ್ಳಿ ಗ್ರಾಮದ ಪುಸ್ತಕದ ಮನೆಯನ್ನು ಪ್ರತಿರೂಪವಾಗಿ ಬೆಳೆಸಬೇಕು.ಇಟ್ಟಿಗೆ ಸಿಮೆಂಟ್ ಕಟ್ಟಡದ ಜ್ಞಾನ ವಿಶ್ವವಿದ್ಯಾನಿಲಯವಾಗಲು ಸಾರ್ವಜನಿಕರ ಸಹಕಾರದಿಂದ.ಶ್ರೀರಂಗಪಟ್ಟಣದ ಹಿರಿಯ ಗಾಂಧಿವಾದಿ ಡಾ.ಬಿ.ಸುಜಯ್‌ಕುಮಾರ್ ಮಾತನಾಡಿ, ಸಾಮಾನ್ಯ ರೈತ ಕುಟುಂಬದ ವ್ಯಕ್ತಿ 20 ಲಕ್ಷಕ್ಕೂ ಹೆಚ್ಚು ವಸ್ತುಗಳು ಸಂಗ್ರಹಿಸಿದ್ದು ಸಾಮಾನ್ಯ ಸಾಧನೆಯಲ್ಲ, ಪ್ರಶಸ್ತಿಗಿಂತ ಮುಖ್ಯವಾದದ್ದು ಅವರು ನಿರ್ಮಾಣ ಮಾಡಿದ ಪುಸ್ತಕದ ಮನೆ. ಮಹಾತ್ಮ ಗಾಂಧಿ ಹೇಳಿದ್ದು ಹೀಗೆ ಶಿಕ್ಷಣ ಎಂದರೆ ಹೃದಯ ಮತ್ತು ಮನಸ್ಸನ್ನು ಒಟ್ಟಿಗೆ ಕಟ್ಟುವುದು. ಇಂತಹ ಹೇಳಿಕೆಯ ಮಾತಿಗೆ ಜೀವಂತ ರೂಪವನ್ನು ಕೊಟ್ಟ ವ್ಯಕ್ತಿಯನ್ನು ನಾವು ಸನ್ಮಾನಿಸುತ್ತಿರುವುದು ನಮ್ಮ ಮಂಡ್ಯ ಜಿಲ್ಲೆಯ ಹಿರಿಮೆ ಎಂದು ಹೇಳಿದರು.

ಸಂಜಯ ಪ್ರಕಾಶನದ ವತಿಯಿಂದ ಪದ್ಮಶ್ರೀ ಪುರಸ್ಕೃತ ಪುಸ್ತಕದ ಮನೆ ಎಂ ಅಂಕೇಗೌಡರನ್ನು ಪ್ರೀತಿಪೂರ್ವಕ ಗೌರವಗಳೊಂದಿಗೆ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್ ಎಂ ಶಿವಕುಮಾರ್ , ಯುವ ಬರಹಗಾರ ಬಳಗದ ಸಂಸ್ಥಾಪಕರಾದ ಸತೀಶ್ ಜವರೇಗೌಡ,ಮಹಿಳಾ ಸಾಂತ್ವನದ ಸಂಸ್ಥಾಪಕಿ ಶೀಲಾ ನಂಜುಂಡಯ್ಯ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆ ಖಜಾಂಚಿ ಆಯುಬ್, ಶ್ರೀರಂಗನಾಯಕಿ ಸ್ತ್ರೀ ಸಮಾಜದ ಸದಸ್ಯರಾದ ಸುಮಂಗಲ, ಸುಧಾ, ಶಿಕ್ಷಕಿ ಎಚ್ ಜೆ ಶೀಲಾ, ಕನ್ನಡ ಪ್ರಾಧ್ಯಾಪಕ ಶಿವಕುಮಾರ್ ಕಾರೆಪುರ, ಡಾ. ಬಿ ಕೆ ರಾಮು, ಪ್ರಾಧ್ಯಾಪಕ ಬ್ಯಾಡರಹಳ್ಳಿ ಧನಂಜಯ್, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ, ಪತ್ರಕರ್ತರಾದ ಗಣಂಗೂರು ನಂಜೇಗೌಡ, ವಕೀಲ ಎಸ್ ಆರ್ ಸಿದ್ದೇಶ್, ಚಿಕ್ಕತಮ್ಮೆಗೌಡ, ಸದಾನಂದ, ಸುರೇಶ್ ಭಾಗಿಯಾಗಿದ್ದರು.

Share it :

Leave a Reply

Your email address will not be published. Required fields are marked *