ಬೆಂಗಳೂರು : ನಮ್ಮದು ಹೈಕಮಾಂಡ್ ಪಕ್ಷ. ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದಿದ್ದರೂ, ಎರಡನೇ ಪಟ್ಟಿಯಲ್ಲಿ ಸಿಗುವ ವಿಶ್ವಾಸವಿದೆ ಎಂದು ಡಿಕೆ ಸುರೇಶ್ ಭೇಟಿ ಬಳಿಕ ಮಾಜಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಬಲಿಗರ ಪ್ರತಿಭಟನೆ ಸಹಜ, ನನಗೇನೂ ಬೇಸರವಿಲ್ಲ ನಾನು ಯಾವತ್ತೂ ಬೇಜಾರ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಇದೇ ಸಮಯದಲ್ಲಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಐದೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.





