ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನನಲ್ಲಿ ಬಂಧಿಯಾಗಿರುವ ದರ್ಶನ್‌ ಬಗ್ಗೆ ಇದೀಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ. ನಾನು ಸೆಲೆಬ್ರಿಟಿ ಇನ್​ಚಾರ್ಜ್ ಅಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ, ಜೈಲು ಆಡಳಿತ ಮತ್ತು ಕೈದಿಗಳ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡಿ ಮಾತನಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸನ್ನಡತೆ ಆಧಾರದಲ್ಲಿ 24 ಕೈದಿಗಳು ಬಿಡುಗಡೆ ಮಾಡಲಾಗಿದೆ ಎಂದರು. ಇನ್ನು ಜೈಲಿನ ಆಡಳಿತ ವೈಖರಿ ಬಗ್ಗೆ ಮಾಹಿತಿಯನ್ನ ಪಡೆದಿದ್ದೇನೆ ಎಂದರು.

ಕೊಲೆ ಆರೋಪಿ ಪವಿತ್ರಾ ಗೌಡಗೆ ರಾಜಾತಿಥ್ಯ ಆರೋಪ ವಿಚಾರವಾಗಿ ಮಾತನಾಡಿದ ಅವರು, ಜೈಲಿನಲ್ಲಿ ಯಾರಿಗೂ ಕೂಡ ವಿಶೇಷ ಆತಿಥ್ಯ ನೀಡುತ್ತಿಲ್ಲ. ಆ ರೀತಿ ಕಂಡು ಬಂದರೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಸಾಕಷ್ಟು ವಿಚಾರಣಾಧೀನ ಕೈದಿಗಳನ್ನ ಭೇಟಿ ಮಾಡಿ ಮಾತನಾಡಿದೆ. ಸಣ್ಣಪುಟ್ಟ ಕ್ರೈಂ ಮಾಡಿ ಆರ್ಥಿಕ ನೆರವಿಲ್ಲದೆ ಜೈಲಲ್ಲಿದ್ದಾರೆ. ಅಂತಹವರಿಗೆ ಕಾನೂನು, ಆರ್ಥಿಕ ನೆರವು ಬಗ್ಗೆ ಚಿಂತನೆ ಮಾಡಲಾಗುವುದು. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.

ಸಣ್ಣ-ಪುಟ್ಟ ತಪ್ಪು ಮಾಡಿದವರು ಸಹ ಜೈಲ್‌ ನಲ್ಲಿ ಇದ್ದಾರೆ ಇತ್ತ ವಿಐಪಿಗಳು ತಪ್ಪು ಮಾಡಿ ಸೇರೆ ಮನೆ ಸೇರಿದ್ದಾರೆ ಎಲ್ಲರಿಗೂ ಜೈಲ್‌ನಲ್ಲಿ ಸಮಾನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Share it :

One Response

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post