ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ – ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ

ನವದೆಹಲಿ: ಯೋಗ ಗುರು ಬಾಬಾ ರಾಮದೇವ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ಮಹಿಳೆಯರ ಬಗ್ಗೆ ಅವರು ನೀಡಿರುವ ಹೇಳಿಕೆಗಳ ಬಗ್ಗೆ “ಆಲೋಚಿಸಬೇಕು ಎಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ಕೇಸರಿ ನಿಲುವಂಗಿ ಧರಿಸಿದ ಗುರು “ಸಭ್ಯತೆಯ ಎಲ್ಲಾ ಮಿತಿಗಳನ್ನು” ಮೀರಿದ್ದಾರೆ
ತಾನು ರಾಮದೇವ್‌ಗಿಂತ “ಉತ್ತಮ ವ್ಯಕ್ತಿತ್ವ” ಹೊಂದಿದ್ದೇನೆ ಎಂದು ಹೇಳಿದ್ದರು. ಅಲ್ಲದೆ ‘ಬಾಬಾ ಜೀ, ನನ್ನ ಯೌವನ ಅಥವಾ ಬೆಡ್‌ರೂಂ ಬಗ್ಗೆ ಹಗಲುಗನಸು ಕಾಣಬೇಡಿ’ ಎಂದು ತಿರುಗೇಟು ನೀಡಿದ್ದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕರನ್ನು “ಜನರೇಷನ್ ಗಟರ್” ಎಂದು ಟೀಕಿಸಿದ್ದ ಕಂಗನಾ ರಣಾವತ್ ಅವರನ್ನು ಯೋಗ ಗುರು ಬಾಬಾ ರಾಮದೇವ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ‘ಆಕೆಯ ಹಿಂದಿನ ಚಟುವಟಿಕೆಗಳು ಹೇಗಿದ್ದವು?’ ಎಂದು ಪ್ರಶ್ನಿಸಿದ್ದರು. ಇದು ಇಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಇನ್‌ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ, ರಾಮ್‌ದೇವ್ ಅವರಿಗಿಂತ ತಾನು ‘ಉತ್ತಮ ವ್ಯಕ್ತಿತ್ವ’ವನ್ನು ಹೊಂದಿದ್ದೇನೆ ಎಂದು ರಣಾವತ್ ಪ್ರತಿಪಾದಿಸಿದ್ದಾರೆ.

ನನಗೆ ಚಾರಿತ್ರ್ಯದ ಕುರಿತು ಪಾಠ ಮಾಡಬೇಡಿ. ತುಮ್ಸೇ ತೋ ಬಹುತ್ ಜ್ಯಾದಾ ಬೆಹ್ತರ್ ಹೈ ಮೇರಾ ಕ್ಯಾರೆಕ್ಟರ್ (ನನ್ನ ಚಾರಿತ್ರ್ಯವು ನಿಮ್ಮ ಚಾರಿತ್ರ್ಯಕ್ಕಿಂತ ಉತ್ತಮವಾಗಿದೆ) ಮೋ ವಂಚನೆಯನ್ನು ಇಲ್ಲಿ ಪತ್ತೆಹಚ್ಚಲಾಗಿದೆ’ ಎಂದು ಕಂಗನಾ ತಿಳಿಸಿದ್ದಾರೆ.

ಕಂಗಾನರ ಹೇಳಿಕೆಗಳನ್ನು ಟೀಕಿಸಿದ್ದ ಬಾಬಾ ರಾಮ್‌ದೇವ್ ಅವರು, ‘ದೇಶದ ಯುವಕರನ್ನು ‘ಜನರೇಷನ್ ಗಟರ್’ ಎಂದು ಟೀಕಿಸುವುದು ಅವರ ‘ಕೆಟ್ಟ ಮನಸ್ಥಿತಿಯನ್ನು’ ತೋರಿಸುತ್ತದೆ. ಆಕೆ ಯಾರು? ಅವಳ ಹಿಂದಿನ ಚಟುವಟಿಕೆಗಳು ಹೇಗಿದ್ದವು?. ನಾನು ಅಂತಹ ಜನರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದಿದ್ದ ಅವರು ಕಂಗನಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

‘ಬಾಬಾ ಜೀ, ನನ್ನ ಜವಾನಿ ಅಥವಾ ಮಲಗುವ ಕೋಣೆಯ ಬಗ್ಗೆ ಹಗಲುಗನಸು ಕಾಣಬೇಡಿ. ಕೇವಲ ವದಂತಿಗಳು ಮತ್ತು ಗಾಸಿಪ್‌ಗಳ ಆಧಾರದ ಮೇಲೆ ಯಾರು ಬೇಕಾದರೂ ಊಹೆಗಳನ್ನು ಮಾಡಬಹುದು ಎಂದರು.

ಆದರೆ, ಕೇವಲ ವದಂತಿಗಳು ಅಥವಾ ಊಹೆಗಳಲ್ಲದೆ, ದೃಢವಾದ ಸಂಗತಿಗಳ ಆಧಾರದ ಮೇಲೆ ಉತ್ಪನ್ನಗಳ ಪರಿಣಾಮಕಾರಿತ್ವದ ಕುರಿತಾದ ಸುಳ್ಳು ಅಥವಾ ಮೋಸದ ಹೇಳಿಕೆಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನನ್ನ ಹೆಸರನ್ನು ಎಂದಿಗೂ ಪ್ರಸ್ತಾಪಿಸಿಲ್ಲ’ ಎಂದು ರಾಮ್‌ದೇವ್ ಮತ್ತು ಅವರ ಪತಂಜಲಿ ಬ್ರ್ಯಾಂಡ್ ಸುತ್ತಲಿನ ಅನೇಕ ವಿವಾದಗಳನ್ನು ಉಲ್ಲೇಖಿಸಿ ಬಿಜೆಪಿ ಸಂಸದರು ವ್ಯಂಗ್ಯವಾಡಿದ್ದಾರೆ.

ಬಾಬಾ ರಾಮದೇವ್ ಬಗ್ಗೆ ಹೇಳುವುದಾದರೆ, ಅವರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಮಹಿಳೆಯ ಬಗ್ಗೆ ಅವರು ಮಾಡಿರುವ ಕಾಮೆಂಟ್‌ಗಳು ಸಮಾಜವೇ ನಾಚಿಕೆಪಡುವಂತಿವೆ. ಅವರು ತಾವು ಧರಿಸುವ ಕೇಸರಿ ನಿಲುವಂಗಿಗಳನ್ನು ಅವಮಾನಿಸಿದ್ದಾರೆ” ಎಂದು ಕಂಗನಾ ಕಿಡಿ ಕಾರಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post