ಶ್ರೀರಂಗಪಟ್ಟಣದ ಸಮರ್ಪಣ ಟ್ರಸ್ಟ್ 23 ಅಕ್ಟೋಬರ್ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಿ ಸ್ವತಂತ್ರ ಹೋರಾಟದ ವೀರ ಮಹಿಳಾಮಣಿಗೆ ನಮನ ಸಲ್ಲಿಸಿದೆ. ಕಿತ್ತೂರು ನಮ್ಮದು! ನಿಮಗೇಕೆ ಕೊಡಬೇಕು ಕಪ್ಪ?”ಒಂದು ವಾಕ್ಯವಲ್ಲ, ಅದು ಇಡೀ ಭಾರತದ ಆತ್ಮಾಭಿಮಾನದ ಘರ್ಜನೆಯಾಗಿದೆ.
ಕನ್ನಡ ನಾಡು ವೀರರ ಬೀಡು, ಆದರೆ ವೀರವನಿತೆಯೊಬ್ಬಳು ಕುದುರೆಯೇರಿ, ಕೈಯಲ್ಲಿ ನಗ್ನ ಖಡ್ಗ ಹಿಡಿದು ಸಾಮ್ರಾಜ್ಯವನ್ನೇ ನಡುಗಿಸಿದಳು ಎಂದರೆ ಅದು ಕಿತ್ತೂರು ರಾಣಿ ಚೆನ್ನಮ್ಮ ಮಾತ್ರ. ಶೌರ್ಯ, ಸ್ವಾಭಿಮಾನ, ಸ್ವಾತಂತ್ರ್ಯದ ಮೂರು ಸಾಕಾರ ಮೂರ್ತಿಯೇ ಅವರಾಗಿದ್ದರು.ದಾಖಲೆಗಳ ಹಿನ್ನೆಲೆಯಲ್ಲಿ ಒಂದು ಮಹಾ ಸಾಮ್ರಾಜ್ಯದ ಪತನ ಮತ್ತು ಇನ್ನೊಂದು ಪುಟ್ಟ ಸಂಸ್ಥಾನದ ಮಹಾ ಪ್ರತಿರೋಧ.ಇತಿಹಾಸವನ್ನು ಕೊಂಡಿ ಕಳಚಿ ನೋಡಲಾಗುವುದಿಲ್ಲ. ರಾಣಿ ಚೆನ್ನಮ್ಮನ ಹೋರಾಟದ ಬೇರು ಶ್ರೀರಂಗಪಟ್ಟಣದಲ್ಲಿದೆ.
4 ಮೇ 1799: ಕಾವೇರಿ ದಡದ ಶ್ರೀರಂಗಪಟ್ಟಣದ ಕೋಟೆ ಕುಸಿಯಿತು. ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಹುತಾತ್ಮರಾದರು. ಆ ದಿನ ದಕ್ಷಿಣ ಭಾರತದ ಭಾಗ್ಯದ ಬಾಗಿಲು ಬ್ರಿಟಿಷರಿಗೆ ತೆರೆಯಿತು. ಮೈಸೂರನ್ನು ಗೆದ್ದ ಈಸ್ಟ್ ಇಂಡಿಯಾ ಕಂಪನಿ, ಒಡೆಯರನ್ನು ಕೈಗೊಂಬೆ ಮಾಡಿ, ಮುಂದಿನ 25 ವರ್ಷಗಳಲ್ಲಿ ಪುಟ್ಟ ಪುಟ್ಟ ಸಂಸ್ಥಾನಗಳನ್ನು ನುಂಗಲು ಆರಂಭಿಸಿತು. ಅದರ ಮೊದಲ ಬಲಿಪಶು ಕಿತ್ತೂರು.
ಚೆನ್ನಮ್ಮ ಜನಿಸಿದ್ದು 1778 ಅಕ್ಟೋಬರ್ 23 ಬೆಳಗಾವಿಯ ಕಾಕತಿಯಲ್ಲಿ. ಲಿಂಗಾಯತ ಮನೆತನದ ಆ ಹೆಣ್ಣುಮಗಳು ಕುದುರೆ ಸವಾರಿಯಲ್ಲಿ ಗಂಡು ಮಕ್ಕಳನ್ನೇ ಮೀರಿಸುತ್ತಿದ್ದಳು, ಕತ್ತಿ ಹಿಡಿದರೆ ಮಿಂಚು. 15ನೇ ವಯಸ್ಸಿಗೆ ಕಿತ್ತೂರು ದೇಸಾಯಿ ಮಲ್ಲಸರ್ಜರ ರಾಣಿಯಾದಳು. 1816ರಲ್ಲಿ ಮಲ್ಲಸರ್ಜ, 1824ರಲ್ಲಿ ಅವರ ಮಗ ಶಿವಲಿಂಗರುದ್ರ, ಮತ್ತು ಚೆನ್ನಮ್ಮನ ಸ್ವಂತ ಮಗನೂ ಅಸುನೀಗಿದರು. ರಾಜ್ಯ ಅನಾಥವಾಯಿತು.
ಆಗ ಚೆನ್ನಮ್ಮ ಮಾಡಿದ್ದು ಧರ್ಮ ಸಮ್ಮತವಾದದ್ದು ಶಿವಲಿಂಗಪ್ಪ ಎಂಬ 8 ವರ್ಷದ ಬಾಲಕನನ್ನು ದತ್ತು ತೆಗೆದುಕೊಂಡಳು.
ಆದರೆ ಧಾರವಾಡದ ಕಲೆಕ್ಟರ್ ಜಾನ್ ಥ್ಯಾಕರೆಗೆ ಧರ್ಮ ಬೇಕಿರಲಿಲ್ಲ, ಖಜಾನೆ ಬೇಕಿತ್ತು. ಆತ “ಡಾಕ್ಟ್ರಿನ್ ಆಫ್ ಲ್ಯಾಪ್ಸ್” – ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕರಾಳ ಕಾನೂನಿನ ನೆಪ ಹೇಳಿದ. ಗಮನಿಸಿ, ಈ ಕಾನೂನು ಅಧಿಕೃತವಾಗಿ ಲಾರ್ಡ್ ಡಾಲ್ಹೌಸಿ ಜಾರಿಗೆ ತಂದಿದ್ದು 1848ರಲ್ಲಿ, ಆದರೆ ಅದರ ಅಣಕು ಪ್ರಯೋಗ ನಡೆದಿದ್ದು 1824ರಲ್ಲೇ ಕಿತ್ತೂರಿನ ಮೇಲೆ ಇದು ಇತಿಹಾಸದ ದೊಡ್ಡ ದಾಖಲೆಯಾಗಿದೆ.
ಅಂದು ಬ್ರಿಟಿಷ್ ಸಾಮ್ರಾಜ್ಯವೇ ತಲೆಬಾಗಿದ ದಿನ – ಅಕ್ಟೋಬರ್ 23, 1824.ಸುಮಾರು 20,000 ಆಧುನಿಕ ಬಂದೂಕುಧಾರಿ ಬ್ರಿಟಿಷ್ ಸೈನ್ಯ ಕಿತ್ತೂರು ಕೋಟೆ ಸುತ್ತುವರಿದಿತ್ತು. ಎದುರು 3,000 ಕನ್ನಡಿಗರು, ಕೈಯಲ್ಲಿ ಖಡ್ಗ, ಈಟಿ. ಜೊತೆಗೆ ಒಬ್ಬ ತಾಯಿಯಾಗಿದ್ದರು.
ಆದರೆ ಯುದ್ಧದ ಫಲಿತಾಂಶ ಜಗತ್ತನ್ನೇ ಬೆಚ್ಚಿಬೀಳಿಸಿತು. ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ತಂತ್ರ, ಅಮಟೂರು ಬಾಳಪ್ಪನ ಕೆಚ್ಚು, ಮತ್ತು ಮುಂದೆ ನಿಂತು ಖಡ್ಗ ಬೀಸಿದ ಚೆನ್ನಮ್ಮ. ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಕೊಲ್ಲಲ್ಪಟ್ಟ, ಇಬ್ಬರು ಅಧಿಕಾರಿಗಳು ಸೆರೆಸಿಕ್ಕರು. ಬ್ರಿಟಿಷ್ ಪಡೆ ಚೆಲ್ಲಾಪಿಲ್ಲಿಯಾಗಿ ಓಡಿತು.
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 33 ವರ್ಷ ಮೊದಲೇ, ಬ್ರಿಟಿಷರನ್ನು ಯುದ್ಧದಲ್ಲಿ ಸೋಲಿಸಿದ ಮೊದಲ ಮತ್ತು ಏಕೈಕ ಮಹಿಳೆ ರಾಣಿ ಚೆನ್ನಮ್ಮ. ಇದು ಕೇವಲ ಕಿತ್ತೂರಿನ ಗೆಲುವಲ್ಲ, ಇಡೀ ಭಾರತದ ಮೊದಲ ಗೆಲುವು.ರಾಣಿ ಗೆದ್ದ ನಂತರವೂ ಯುದ್ಧ ಬಯಸಲಿಲ್ಲ. ಬಾಂಬೆ ಗವರ್ನರ್ ಗೆ ಪತ್ರ ಬರೆದು “ನ್ಯಾಯ ಕೊಡಿ” ಎಂದರು. ಆದರೆ ಬ್ರಿಟಿಷರು ಮೋಸ ಮಾಡಿದರು. ಕರ್ನಲ್ ಡೀಕನ್ ನೇತೃತ್ವದಲ್ಲಿ ಮತ್ತೆ ದಾಳಿ ಮಾಡಿ, ಕೆಲವು ದೇಶದ್ರೋಹಿಗಳ ಸಹಾಯದಿಂದ ಡಿಸೆಂಬರ್ 1824ರಲ್ಲಿ ರಾಣಿಯನ್ನು ಬಂಧಿಸಿದರು.
ಬೈಲಹೊಂಗಲದ ಕತ್ತಲ ಕೋಣೆ – ಬೆಳಕಾಗಿ ಉಳಿದ ಚರಿತ್ರೆಯಾಗಿದ್ದು,ಅವರನ್ನು ಬೈಲಹೊಂಗಲ ಕೋಟೆಯ ಕತ್ತಲ ಕೋಣೆಯಲ್ಲಿ ಇರಿಸಲಾಯಿತು. ಐದು ವರ್ಷಗಳ ಕಾಲ ಸೆರೆವಾಸ. 1829 ಫೆಬ್ರವರಿ 21ರಂದು ಆ ವೀರಮಣಿ ಅಲ್ಲಿಯೇ ಕೊನೆಯುಸಿರೆಳೆದರು. ಅವರ ಸಮಾಧಿ ಇಂದಿಗೂ ಬೈಲಹೊಂಗಲದಲ್ಲಿದೆ, ನಾಡಿನ ಸ್ವಾಭಿಮಾನದ ಯಾತ್ರಾಸ್ಥಳವಾಗಿದೆ.
ಭಾರತ ಸರ್ಕಾರ 2024ರಲ್ಲಿ ಅವರ 200 ವರ್ಷದ ವಿಜಯದ ನೆನಪಿಗೆ ರೂ. 200ರ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದೆ. ಇದು ಅವರಿಗೆ ಸಂದ ಗೌರವ ಮಾತ್ರವಲ್ಲ, ಇತಿಹಾಸದ ತಿದ್ದುಪಡಿಯಾಗಿದೆ.
ಇಂದಿನ ಸಂದೇಶ – ಹೊಸ ಪೀಳಿಗೆಗೆ ಹೊಸ ಕರೆ, ಶ್ರೀರಂಗಪಟ್ಟಣದಲ್ಲಿ ಆರಿದ ಸ್ವಾತಂತ್ರ್ಯದ ದೀಪ, ಕಿತ್ತೂರಿನಲ್ಲಿ ಮತ್ತೆ ಬೆಳಗಿತು. ಟಿಪ್ಪುವಿನ ರಾಕೆಟ್ ತಂತ್ರಜ್ಞಾನ ಸೋತರೂ, ಚೆನ್ನಮ್ಮನ ಸ್ವಾಭಿಮಾನದ ಖಡ್ಗ ಸೋಲಲಿಲ್ಲ.ಇಂದು ನಾವು ಅಕ್ಟೋಬರ್ 23 ಆಚರಿಸುವುದು ಕೇವಲ ಜಯಂತಿಯಲ್ಲ. ಅದು ಒಂದು ಪ್ರತಿಜ್ಞೆ.
ಇಂದಿನ ಹುಡುಗಿಯರಿಗೆ ಚೆನ್ನಮ್ಮ ಏನು ಹೇಳುತ್ತಾರೆ? ಕತ್ತಿ ಹಿಡಿಯಿರಿ ಎಂದಲ್ಲ, ಕಲಂ ಹಿಡಿಯಿರಿ, ಜ್ಞಾನ ಹಿಡಿಯಿರಿ, ಅನ್ಯಾಯ ಕಂಡಾಗ “ಕಿತ್ತೂರು ನಮ್ಮದು” ಎಂಬಂತೆ “ನನ್ನ ದೇಶ, ನನ್ನ ಹಕ್ಕು ನಮ್ಮದು” ಎಂದು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಿ ಎಂದು.
ಶ್ರೀರಂಗಪಟ್ಟಣದ ಕೋಟೆ ಇಂದು ಪ್ರವಾಸಿ ತಾಣ, ಕಿತ್ತೂರು ಕೋಟೆ ಇಂದು ಉತ್ಸವದ ತಾಣ, ಆದರೆ ಆ ಎರಡೂ ಕೋಟೆಗಳ ನಡುವೆ ಹರಿದ ರಕ್ತ ಒಂದೇ – ಸ್ವಾತಂತ್ರ್ಯದ ರಕ್ತ.ರಾಣಿ ಚೆನ್ನಮ್ಮ ಸತ್ತಿಲ್ಲ, ಆಕೆ ಪ್ರತಿ ಕನ್ನಡತಿಯ ಕಣ್ಣಲ್ಲಿ, ಪ್ರತಿ ಯುವತಿಯ ಧ್ವನಿಯಲ್ಲಿ ಬದುಕಿದ್ದಾಳೆ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.





