‘ಬಿಗ್ ಬಾಸ್ ಕನ್ನಡ ಸೀಸನ್ 11’ ಖ್ಯಾತಿಯ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಸಿಂಧೋಗಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂಲಕ ಪರಿಚಯವಾದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಇದೀಗ ತಮ್ಮ ಸಂಬಂಧಕ್ಕೆ ಹೊಸ ಹೆಸರನ್ನಿಟ್ಟಿದ್ದಾರೆ. ಒಟ್ಟಿಗೆ ಕೆಲಸ ಮಾಡುತ್ತಾ ಆರಂಭವಾದ ಪರಿಚಯ, ಸ್ನೇಹವಾಗಿ ಬೆಳೆದು, ಬಳಿಕ ಪ್ರೀತಿಗೆ ತಿರುಗಿದೆ. ಇದೀಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮೂಲಕ ಪರಿಚಯವಾದ ಇವರ ನಡುವೆ ಆರಂಭವಾದ ಸ್ನೇಹವು ನಂತರ ಪ್ರೀತಿಗೆ ತಿರುಗಿ, ಇದೀಗ ನಿಶ್ಚಿತಾರ್ಥದ ಹಂತಕ್ಕೆ ತಲುಪಿದೆ.
ನಿಶ್ಚಿತಾರ್ಥದ ಸಂಭ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್, ನಮ್ಮ ಜರ್ನಿ ಪ್ರೀತಿಯಿಂದ ಶುರುವಾಗಿದ್ದಲ್ಲ. ಒಟ್ಟಿಗೆ ಕೆಲಸ ಮಾಡುತ್ತಾ ಆರಂಭವಾದ ಪರಿಚಯ ಸ್ನೇಹವಾಯಿತು. ಸ್ನೇಹದಿಂದ ಗೌರವ ಹೆಚ್ಚಾಯಿತು, ಬಳಿಕ ಅದು ಪ್ರೀತಿಗೆ ತಿರುಗಿತು. ಪ್ರೀತಿಸಿ ಮದುವೆಯಾಗುತ್ತೇವೆ ಎಂದು ನಾವೇ ಅಂದುಕೊಂಡಿರಲಿಲ್ಲ. ಏಕೆಂದ್ರೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಆಗಿಲ್ಲ. ಆದರೆ ಐಶ್ವರ್ಯ ಬಗ್ಗೆ ನನಗೆ ವಿಶೇಷ ಭಾವನೆ ಇತ್ತು. ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯನೇ ಎಂದು ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟರು.
ಈ ವಿಚಾರದ ಬಗ್ಗೆ ಐಶ್ವರ್ಯ ಕೂಡ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ನಾವು ಮದುವೆಯಾಗುತ್ತೇವೆ ಎಂದು ಅಂದುಕೊಂಡಿರಲಿಲ್ಲ. ನಾವೇ ಯೋಚಿಸುವುದಕ್ಕೂ ಮೊದಲೇ ಎಲ್ಲರೂ ನಮ್ಮ ಮದುವೆ ಬಗ್ಗೆ ಮಾತನಾಡುತ್ತಿದ್ದರು. ಪ್ರೀತಿಯ ಕಥೆ ಶುರುವಾಗಿದ್ದು ತುಂಬಾ ತಡವಾಗಿ. ಶಿಶಿರ್ ನನಗಾಗಿ ತೋರಿಸಿದ ಕಾಳಜಿಗೆ ನಾನು ಸೋತೆ. ಆರಂಭದಲ್ಲಿ ಪ್ರೀತಿ ಇರಲಿಲ್ಲ, ಆದರೆ ಅವರ ಮಾನವೀಯ ಗುಣಗಳನ್ನ ಕಂಡು ವ್ಯಕ್ತಿಯಾಗಿ ತುಂಬಾ ಗೌರವವಿತ್ತು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ಸ್ನೇಹ, ಹೊರಜಗತ್ತಿನಲ್ಲಿ ಪ್ರೀತಿಯಾಗಿ ಅರಳಿ ಇದೀಗ ನಿಶ್ಚಿತಾರ್ಥದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಶಿಶಿರ್–ಐಶ್ವರ್ಯ ಜೋಡಿಯ ಹೊಸ ಜೀವನದ ಪಯಣಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ನವೆಂಬರ್ ಆರಂಭದಲ್ಲಿ ವಿಡಿಯೋ ಮೂಲಕ ತಾವು ಮದುವೆಯಾಗುವುದಾಗಿ ಈ ಜೋಡಿ ಅಧಿಕೃತವಾಗಿ ಘೋಷಿಸಿತ್ತು. ಇದೀಗ ಸ್ಯಾಂಡಲ್‌ವುಡ್ ಗಣ್ಯರಿಗೆ ನಿಶ್ಚಿತಾರ್ಥದ ಆಹ್ವಾನ ಪತ್ರಿಕೆ ನೀಡುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.
ನಿಶ್ಚಿತಾರ್ಥಕ್ಕೂ ಮುನ್ನ ಈ ಜೋಡಿಯು ‘ಬಿಗ್ ಬಾಸ್’ ನಿರೂಪಕ ಕಿಚ್ಚ ಸುದೀಪ್, ನಟಿಯರಾದ ತಾರಾ ಅನುರಾಧಾ, ಸುಧಾರಾಣಿ, ಆಶಾಲತಾ, ಶಾಲಿನಿ ಸೇರಿದಂತೆ ಹಲವು ಸ್ಯಾಂಡಲ್‌ವುಡ್ ತಾರೆಯರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದಿತ್ತು
ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ನಟ ಡಾಲಿ ರಾಜೇಶ್ ದಂಪತಿ ಐಶ್ವರ್ಯಾ ಅವರ ತಂದೆ-ತಾಯಿ ಸ್ಥಾನದಲ್ಲಿ ನಿಂತು ಶಾಸ್ತ್ರ ಪೂಜೆಗಳನ್ನು ನೆರವೇರಿಸಿದ್ದಾರೆ. ಎಂಗೇಜ್‌ಮೆಂಟ್ ಬಳಿಕ ಜೋಡಿ ಉಂಗುರ ತೋರಿಸಿ ಪೋಸ್ ನೀಡಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಲವ್ ಸ್ಟೋರಿ ಮತ್ತು ‘#AISHIR’ ಪಯಣ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇವರ ನಡುವೆ ಶುರುವಾದ ಸ್ನೇಹವು ನಂತರ ಪ್ರೀತಿಯಾಗಿ ಬದಲಾಗಿತ್ತು. “ಶಿಶಿರ್ ಅವರ ಕಾಳಜಿ ಮತ್ತು ಮಾನವೀಯ ಗುಣಗಳು ನನ್ನನ್ನು ಆಕರ್ಷಿಸಿದವು” ಎಂದು ಐಶ್ವರ್ಯಾ ಮನದ ಮಾತು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ನೀಡಿದ್ದ ‘#AISHIR’ ಹ್ಯಾಶ್‌ಟ್ಯಾಗ್ ಈಗ ನಿಜವಾಗಿದೆ ಎಂದು ಜೋಡಿ ಸಂತಸ ವ್ಯಕ್ತಪಡಿಸಿದೆ.









ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)