ಹರಿಪ್ರಸಾದ ಅವರಿಗೆ ಕನ್ನಡ ಓದಲು ಬರುವುದಿಲ್ಲ ಎಂದೆನಿಸುತ್ತದೆ : ಅಭಯ್ ಪಾಟೀಲ್

ಬೆಳಗಾವಿ: ಹರಿಪ್ರಸಾದ್ ಸಚಿವರಾಗಲು ಬಯಸಿದ್ದರು. ಆದರೆ, ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಲಾಯಿತು. ಅವರಿಗೆ ಮಾನಸಿಕ ಸಮತೋಲನ ತಪ್ಪಿದಂತಿದೆ. ಹಾಗಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಮತಗಟ್ಟೆ ಮಟ್ಟದ ಸಹಾಯಕರು–2 ಸಲ್ಲಿಸಿದ ಆಕ್ಷೇಪಣೆಗಳ ಪ್ರಕಾರ ಹೆಸರುಗಳನ್ನು ಪರಿಶೀಲಿಸುವಂತೆ ನಾವು ಚುನಾವಣಾಧಿಕಾರಿಯನ್ನು ಕೋರಿದ್ದೇವೆಯೇ ಹೊರತು, ನೇರವಾಗಿ ಹೆಸರುಗಳನ್ನು ಅಳಿಸುವಂತೆ ಕೇಳಿಲ್ಲ ಎಂದು ಶಾಸಕ ಅಭಯ ಪಾಟೀಲ ಪುನರುಚ್ಚರಿಸಿದರು. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ 2,500ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ […]
ಸೆಂದಿಲ್ ಕೋಟೆ: ಶ್ರೀರಂಗಪಟ್ಟಣ ಮರೆತುಹೋದ ಶ್ರೀಗಂಧದ ಕೋಟೆಯ ಮಹತ್ವ ಇಲ್ಲಿದೆ ನೋಡಿ

ಮೈಸೂರು ಎಂದರೆ ಅರಮನೆ, ಶ್ರೀರಂಗಪಟ್ಟಣ ಎಂದರೆ ಟಿಪ್ಪು ಕೋಟೆ ಎಂದು ಎಲ್ಲರಿಗೂ ಗೊತ್ತು. ಆದರೆ ಶ್ರೀರಂಗಪಟ್ಟಣದಲ್ಲೇ ಇರುವ ಒಂದು ಚಿಕ್ಕ ಕೋಟೆಯ ಬಗ್ಗೆ ಬಹಳ ಜನಕ್ಕೆ ಗೊತ್ತಿಲ್ಲ. ಅದೇ ಸೆಂದಿಲ್ ಕೋಟೆ. ಇದನ್ನೇ ಹಿಂದಿನ ಕಾಲದಲ್ಲಿ “ಶ್ರೀಗಂಧದ ಕೋಟೆ” ಎಂದು ಕರೆಯುತ್ತಿದ್ದರು. ಮೈಸೂರು ಗೆಜೆಟಿಯರ್ ಸಂಪುಟ-5, ಪುಟ-242 ರಲ್ಲಿ ಈ ಕೋಟೆಯ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ. ಗೆಜೆಟಿಯರ್ ಹೇಳುವ ಪ್ರಕಾರ, ಈ ಕೋಟೆ ಶ್ರೀ ರಂಗನಾಥಸ್ವಾಮಿ ದೇವಾಲಯದ ಪೂರ್ವ ದಿಕ್ಕಿನಲ್ಲಿ ಇದೆ.ಇದನ್ನು ಮೊದಲು ವಿಜಯನಗರ ಅರಸರು […]
ಏಷ್ಯನ್ ಗೇಮ್ಸ್: ಇರಾನ್ ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಮಹಿಳಾ ಬ್ರಿಗೇಡ್

ಭಾರತೀಯ ಮಹಿಳಾ ಕಬಡ್ಡಿ ತಂಡವು ಜಪಾನ್ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಇರಾನ್ ತಂಡವನ್ನು ಮಣಿಸಿ ಭರ್ಜರಿ ಚಿನ್ನದ ಪದಕ ಗೆದ್ದುಕೊಂಡಿದೆ.ಶನಿವಾರ (ಸೆಪ್ಟೆಂಬರ್ 26, 2026) ನಡೆದ ಅತ್ಯಂತ ರೋಚಕ ಹಾಗೂ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇರಾನ್ ವಿರುದ್ಧ 37-34 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿತು. ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತೀಯ ಮಹಿಳೆಯರು, 2018ರ ಜಕಾರ್ತಾ ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಇರಾನ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ […]
ನೀವು ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಉದಾಹರಣೆ ನಾನು: ಸಿಎಂ ವಿಜಯ್

ಮದುರಾಂತಕಂ: ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಜಗತ್ತಿನಲ್ಲಿರುವ ಏಕೈಕ ಉದಾಹರಣೆ ನಾನು ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಚಂದ್ರಶೇಖರ್ ವಿಜಯ್ ಹೇಳಿದ್ದಾರೆ. ಮುದುರಾಂತಕಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಯಾಗಿರುವ ಮರಗತಂ ಕುಮಾರವೇಲ್ ಕೆ. ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ವಿಜಯ್ ಮಾತನಾಡಿದ್ದಾರೆ. ನೇರವಾಗಿ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತನ್ನ ವಿರುದ್ಧದ ಟೀಕೆಗಳು ಹಳೆಯವು ಎಂದು ಆ ಪಕ್ಷವು (ಡಿಎಂಕೆ) ಹೇಳಿಕೊಳ್ಳುತ್ತಿದೆ. ಹೊಸ […]
ರೈತರಿಗೆ ಫ್ರೀ ಪವರ್ ಕೊಡ್ತಾ ಇದ್ದೀವಿ, ಅದು ಸಹಾಯ ಅಲ್ಲವಾ? : ಡಿಸಿಎಂ ಪರಮೇಶ್ವರ್

ಬೆಂಗಳೂರು: ರೈತರಿಗೆ ಫ್ರೀ ಪವರ್ ಕೊಡ್ತಾ ಇದ್ದೀವಿ. ಅದು ಸಹಾಯ ಅಲ್ಲವಾ? ಬರ ಪರಿಹಾರ ವಿಚಾರದಲ್ಲಿ ವಿಪಕ್ಷಗಳುರಾಜಕೀಯ ಮಾಡ್ತಾ ಇವೆ ಅಂತ ಡಿಸಿಎಂ ಪರಮೇಶ್ವರ್ ವಿಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಕೊಟ್ಟಿರುವ ಬರ ಪರಿಹಾರ ಕಡಿಮೆ ಆಯ್ತು ಎಂಬ ವಿಪಕ್ಷಗಳ ಆರೋಪ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು,ಪರಿಹಾರದ ಮೊತ್ತ ಜಾಸ್ತಿ ಆಗುತ್ತೆ ಅಂತ ನಾನು ಈಗ ಏನು ಹೇಳೋಕೆ ಆಗೊಲ್ಲ. ಕೇಂದ್ರ ಸರ್ಕಾರ ನಮಗೆ ಯಾವ ರೀತಿ ಸಹಾಯ ಕೊಡುತ್ತದೆ ಅದರ ಮೇಲೆ ನಿರ್ಧಾರ […]
ಬೆಂಗ್ಳೂರಿಗೆ ಬಂದ MLAಗಳು ಕೂಡ ಎರಡೆರಡು ಮದುವೆ ಮಾಡ್ಕೊಂಡಿದ್ದಾರೆ : ಡಿ ಕೆ ಶಿವಕುಮಾರ್

ಬೆಂಗಳೂರು:’ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ತಮ್ಮ ಊರುಗಳಿಗೆ ಹೋಗುವುದೇ ಇಲ್ಲ. ಲಾಯರ್ ಗಳಂತೂ ವಾಪಸ್ ಹೋಗಲ್ಲ, ಇಲ್ಲಿನ ಕಾವೇರಿ ನೀರು ಹಾಗೂ ಇಲ್ಲಿನ ಹವಾಮಾನವೇ ಹಾಗಿದೆ. ಬೆಂಗಳೂರಿನ ಜನಸಂಖ್ಯೆ ಹಿಂದೆ ಶೇ. 35 ರಷ್ಟಿತ್ತು, ಈಗ ಶೇ. 47 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಳೆದ ದಿನ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರು ಕೂಡ ಆಮೇಲೆ ಈ ನಗರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ’ ಬೆಂಗಳೂರಿಗೆ ಬಂದ ಶಾಸಕರೆಲ್ಲರೂ […]
ಕನ್ನಡ ನಾಡಿನ 250 ವರ್ಷಗಳ ಬಾಹ್ಯಾಕಾಶ ಪಯಣ : ಮೈಸೂರು ರಾಕೆಟ್ನಿಂದ ಮಂಗಳ ರಾಕೆಟ್ವರೆಗಿನ ಮಾಹಿತಿ ಇಲ್ಲಿದೆ ನೋಡಿ

24 ಸೆಪ್ಟೆಂಬರ್ ಇಸ್ರೋದ ಐತಿಹಾಸಿಕ ಮಂಗಳಯಾನ ಯಶಸ್ಸು ದಿನ.PSLV ರಾಕೆಟ್ ಕೇವಲ ರಾಕೆಟ್ ಅಲ್ಲ, ಇದು 250 ವರ್ಷದ ಕನ್ನಡ ನಾಡಿನ ತಂತ್ರಜ್ಞಾನದ ಮುಂದುವರಿಕೆಯಾಗಿದ್ದು, ಜಗತ್ತಿನ ಮೊದಲ ಯುದ್ಧ ರಾಕೆಟ್ ಹುಟ್ಟಿದ್ದು ಮೈಸೂರಿನಲ್ಲಿ (1780) ಎಂದು ತಿಳಿದು ಬಂದಿದೆ.ರಾಕೆಟ್ ತಂತ್ರಜ್ಞಾನದ ಮೂಲ ಚೀನಾ ಎಂದು ಎಲ್ಲರೂ ತಿಳಿದಿದ್ದಾರೆ. ಚೀನೀಯರು 13ನೇ ಶತಮಾನದಲ್ಲಿ ರಟ್ಟಿನ (cardboard) ಕೊಳವೆಯಲ್ಲಿ ಗನ್ಪೌಡರ್ ತುಂಬಿ ಹಾರಿಸುತ್ತಿದ್ದರು. ಆದರೆ ಅದು ಪಟಾಕಿಯಂತೆ, ಹೆಚ್ಚು ದೂರ ಹೋಗುತ್ತಿರಲಿಲ್ಲ, ನಿಜವಾದ ಕ್ರಾಂತಿ ಆಗಿದ್ದು ನಮ್ಮ ಮೈಸೂರಿನಲ್ಲಿ ಎನ್ನಲಾಗಿದೆ. […]
ಆಯುರ್ವೇದವು ನಮ್ಮ ಪ್ರಾಚೀನ ಕೊಡುಗೆ, ಒತ್ತಡದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ; ವಿಶಾಲಾಕ್ಷಿ ಪದ್ಮನಾಭ

ಶ್ರೀರಂಗಪಟ್ಟಣದ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿ ಹಿನ್ನಲೆ, ಆಯುರ್ವೇದ ದಿನ ಆಚರಣೆ ಸ್ತ್ರೀ ರಂಗನಾಯಕಿ ಸಮಾಜದಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀರಂಗಪಟ್ಟಣ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಸ್ತ್ರೀ ರಂಗನಾಯಕಿ ಸಮಾಜ ವತಿಯಿಂದ ಧನ್ವಂತರಿ ಜಯಂತಿ ಅಂಗವಾಗಿ ರಾಷ್ಟ್ರೀಯ ಆಯುರ್ವೇದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಧನ್ವಂತರಿ ಭಗವಾನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಆಯುರ್ವೇದದ ಮಹತ್ವವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷೆ ಬಿ ಎಸ್ ವಿಶಾಲಾಕ್ಷಿ ಪದ್ಮನಾಭ “ಆಯುರ್ವೇದವು […]
ಇನ್ನೊಬ್ಬರ ಹಕ್ಕು ಕಸಿದುಕೊಳ್ಳುವಷ್ಟು ಅತಿಯಾದ ಮಹತ್ವಾಕಾಂಕ್ಷೆಯನ್ನು ಹೊಂದಿರಬಾರದು : ಸಿ.ಪಿ ರಾಧಾಕೃಷ್ಣನ್

ನವದೆಹಲಿ: ಇನ್ನೊಬ್ಬರ ಹಕ್ಕು ಕಸಿದುಕೊಳ್ಳುವಷ್ಟು ಅತಿಯಾದ ಮಹತ್ವಾಕಾಂಕ್ಷೆಯನ್ನು ಹೊಂದಿರಬಾರದು. ಹಿಂದುತ್ವವು ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುತ್ತಲೇ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವುದಾಗಿದೆ. ಅದು ಯಾರ ವಿರುದ್ಧವೂ ಇರಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಹೇಳಿದರು. ವಿಶ್ವಸಂಚಾರ್ ಹಿಂದುತ್ವ ಕಾ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಉಪಾಧ್ಯಕ್ಷರು, 1948ರಲ್ಲಿ ಸ್ಥಾಪನೆಯಾದ ವಿವೇಕ್ ವಾರಪತ್ರಿಕೆಯ ದೀರ್ಘ ಇತಿಹಾಸ ಮತ್ತು ಮಹಾರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಅದರ ಒಳಗೊಳ್ಳುವಿಕೆಯನ್ನು ಉಲ್ಲೇಖಿಸಿದರು. ಭಾರತೀಯ ಸಂಸ್ಕೃತಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು […]
ಭಾರತದಲ್ಲಿ ಮತಗಳ್ಳತನವು ದೇಶದ ಜನರ ವಿರುದ್ಧದ ಕೃತ್ಯ : ವಿಪಕ್ಷ ನಾಯಕ ರಾಹುಲ್ ಗಾಂಧಿ

ನವದೆಹಲಿ: ನಾನು ಚುನಾವಣಾ ಆಯೋಗ ಮತ್ತು ಅದರ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಸಮಯ ಬಂದೇ ಬರುತ್ತೆ, ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ನೀವು ಮಾಡಿರುವುದು ದೇಶದ್ರೋಹ, ನಾನು ಚುನಾವಣಾ ಆಯೋಗ ಮತ್ತು ಅದರ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಸಮಯ ಬಂದೇ ಬರುತ್ತೆ, ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಿಮ್ಮನ್ನ ಹಿಡಿಯುತ್ತೇನೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಕ್ಸ್ ಖಾತೆಯಲ್ಲಿ […]