ಟಿಪ್ಪು ಸುಲ್ತಾನ್ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಹೋರಾಡಿದ್ದರೆ, ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಬಿಜೆಪಿಯವರು ಮೊದಲು ತಮ್ಮ ಇತಿಹಾಸವನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಸಹಕಾರ ಚಳವಳಿ, ನಾಗರಿಕ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಅಥವಾ ದಂಡಿ ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ. ಯಾವುದೇ ದುಂಡುಮೇಜಿನ ಸಮ್ಮೇಳನಗಳಲ್ಲೂ ಅವರು ಪಾಲ್ಗೊಂಡಿರಲಿಲ್ಲ. ಅವರು ಏನನ್ನೂ ಮಾಡಿಲ್ಲ ಎಂದರು.
ರಾಜ್ಯಕ್ಕೆ ಟಿಪ್ಪು ಸುಲ್ತಾನ್ ನೀಡಿರುವ ಕೊಡುಗೆಗಳನ್ನು ನೀವು ಅಳಿಸಿಹಾಕಲು ಸಾಧ್ಯವಿಲ್ಲ. ಇದೆಲ್ಲವೂ ರಾಜಕೀಯವಷ್ಟೇ. ಮತಗಳು ಬೇಕಾದಾಗ ಅವರು ಅಲ್ಪಸಂಖ್ಯಾತರ ಪರವಾಗಿರುತ್ತಾರೆ. ಮತಗಳು ಬೇಡವಾದಾಗ ಇಂತಹ ವರ್ತನೆ ತೋರುತ್ತಾರೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ನವೆಂಬರ್ 10ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಅಧಿಕೃತವಾಗಿ ಆಚರಿಸುವ ಸಂಪ್ರದಾಯವನ್ನು ರಾಜ್ಯ ಸರ್ಕಾರ ಪುನರಾರಂಭಿಸಬೇಕು ಎಂದು ಒತ್ತಾಯಿಸಿ ತೆಹ್ರೀಕ್-ಎ-ಖುದಾದಾದ್ ಸಂಘಟನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಉದ್ದೇಶಿಸಿ ಮನವಿ ಪತ್ರ ಸಲ್ಲಿಸಿದೆ.
ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪುಸ್ತಕವೊಂದರಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಹೊಗಳಿದ್ದರು ಎಂದು ಹೇಳಿದ್ದಾರೆ.
ಆಂಗ್ಲೋ-ಮೈಸೂರು ಯುದ್ಧದ ಮಾಹಿತಿ: 18ನೇ ಶತಮಾನದ ಉತ್ತರಾರ್ಧದಲ್ಲಿ (1767 ರಿಂದ 1799ರ ನಡುವೆ) ದಕ್ಷಿಣ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮೈಸೂರು ಸಂಸ್ಥಾನದ ನಡುವೆ ನಡೆದ ನಾಲ್ಕು ಪ್ರಮುಖ ಯುದ್ಧಗಳೇ ಆಂಗ್ಲೋ-ಮೈಸೂರು ಯುದ್ಧಗಳು.
ಮೈಸೂರು ಸಂಸ್ಥಾನದ ರಾಜಕೀಯ ಪ್ರಾಬಲ್ಯವನ್ನು ತಡೆಯಲು ಮತ್ತು ತಮ್ಮ ವಾಣಿಜ್ಯ ಹಾಗೂ ಪ್ರಾಂತೀಯ ವಿಸ್ತರಣೆಯನ್ನು ಸಾಧಿಸಲು ಬ್ರಿಟಿಷರು ಹೈದರ್ ಅಲಿ ಮತ್ತು ಆತನ ಮಗ ಟಿಪ್ಪು ಸುಲ್ತಾನ್ ವಿರುದ್ಧ ಈ ಯುದ್ಧಗಳನ್ನು ನಡೆಸಿದರು.
ಮೈಸೂರಿನ ಬೆಳೆಯುತ್ತಿರುವ ಶಕ್ತಿ ಮತ್ತು ಹೈದರ್ ಅಲಿಯ ಮಹತ್ವಾಕಾಂಕ್ಷೆಗಳನ್ನು ಬ್ರಿಟಿಷರು ಸಹಿಸದೆ ಇದ್ದದ್ದು. ಬ್ರಿಟಿಷರು ಹೈದರಾಬಾದ್ ನಿಜಾಮ ಮತ್ತು ಮರಾಠರೊಂದಿಗೆ ಮೈತ್ರಿ ಮಾಡಿಕೊಂಡರು.
•ಪರಿಣಾಮ: ಹೈದರ್ ಅಲಿ ಯುದ್ಧದಲ್ಲಿ ಬ್ರಿಟಿಷರಿಗೆ ತಕ್ಕ ತಿರುಗೇಟು ನೀಡಿ ಮದ್ರಾಸ್ (ಚೆನ್ನೈ) ಸಮೀಪದವರೆಗೂ ದಾಳಿ ನಡೆಸಿದನು. 1769ರಲ್ಲಿ ಮದ್ರಾಸ್ ಒಪ್ಪಂದದೊಂದಿಗೆ ಯುದ್ಧ ಕೊನೆಗೊಂಡಿತು







ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)