ಸಮಯ್ ರೈನಾ ಶೀಘ್ರದಲ್ಲೇ ಮದುವೆಯಾಗುತ್ತಾರಾ? ಹಾಸ್ಯದ ವಿವಾದದಲ್ಲಿ ಸಿಲುಕಿದ ರೈನಾ

ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಮತ್ತು ಅವರ ಹಾಸ್ಯದ ವಿವಾದದಲ್ಲಿ ಸಿಲುಕಿರುವ ಸಮಯ್ ರೈನಾ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಸಮಯ್ ರೈನಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಟಿ ಮೇಧಾ ಶಂಕರ್ ಅವರನ್ನು ಅವರು ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಡಿಸೆಂಬರ್ 2026 ರ ವೇಳೆಗೆ ಈ ಜೋಡಿ ಮದುವೆಯಾಗಲಿದೆ ಎಂದು ವರದಿಯಾಗಿದೆ. ರೆಡ್ಡಿಟ್ನಲ್ಲಿ ವೈರಲ್ ಆದ ಪೋಸ್ಟ್ನಿಂದಾಗಿ ಈ ಇಡೀ ವಿಷಯ ಪ್ರಾರಂಭವಾಯಿತು. ಈ ಪೋಸ್ಟ್ನಲ್ಲಿ, ಬಳಕೆದಾರರು ಸಮಯ್ […]
ರಾಷ್ಟ್ರೀಯ ರೇಷ್ಮೆ ದಿನ-ಮೈಸೂರು ಇತಿಹಾಸದ ರೇಷ್ಮೆಕ್ರಾಂತಿ : ಟಿಪ್ಪು ಕಂಡ ಕನಸು, ಒಡೆಯರ್ ಕಟ್ಟಿದ ಸಾಮ್ರಾಜ್ಯ ಕಥೆ

ಮೈಸೂರು ರೇಷ್ಮೆ ಟಿಪ್ಪು ಕಂಡ ಕನಸು, ಒಡೆಯರ್ ಕಟ್ಟಿದ ಸಾಮ್ರಾಜ್ಯ.ರೇಷ್ಮೆ ಬೆಳೆಯ ಮೈಸೂರು ಸಾಮ್ರಾಜ್ಯದ ಇತಿಹಾಸ 250 ವರ್ಷ ಹಳೆಯದು. ಇದು ಕೇವಲ ಕೈಗಾರಿಕೆ ಅಲ್ಲ, ಅದು ಮೈಸೂರು ಅರಸರ ದೂರದೃಷ್ಟಿಯ ಕಥೆ. ಟಿಪ್ಪು ಸುಲ್ತಾನ್ ನ ರೇಷ್ಮೆ ಕ್ರಾಂತಿ (1780-1790): ಮೈಸೂರು ರೇಷ್ಮೆಯ ಮೂಲ ಇಂದಿನ ಚೀನಾ ಅಲ್ಲ, ಮೈಸೂರಿನ ಹುಲಿ ಟಿಪ್ಪು ಸುಲ್ತಾನ್. ಇತಿಹಾಸದ ಪ್ರಕಾರ, ಚೀನಾ ರಾಯಭಾರಿಯೊಬ್ಬರು ಟಿಪ್ಪುಗೆ ನೀಡಿದ ಅಮೂಲ್ಯ ರೇಷ್ಮೆ ಬಟ್ಟೆಯ ಹೊಳಪಿಗೆ ಮನಸೋತ ಟಿಪ್ಪು, “ನನ್ನ ರಾಜ್ಯದಲ್ಲೇ ಇದನ್ನು […]
ಗಾಯದ ಮೇಲೆ ಬರೆ ಎಳೆದಂತೆ, ಪ್ರತಾಪ್ ಸಿಂಹ ಅವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ : ಬಿ.ವೈ. ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ನಡೆ ಹಿಂದೂ ಕಾರ್ಯಕರ್ತರನ್ನು ಮತ್ತಷ್ಟು ಪ್ರಚೋದಿಸುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಿಸಿರುವ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದು, ಕಾಂಗ್ರೆಸ್ ಸರ್ಕಾರದ ನಡೆ ಹಿಂದೂ ಕಾರ್ಯಕರ್ತರನ್ನು ಮತ್ತಷ್ಟು ಪ್ರಚೋದಿಸುವಂತಿದೆ ಎಂದು ಆರೋಪಿಸಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಗಣಪತಿ ವಿಸರ್ಜನಾ ಶೋಭಾಯಾತ್ರೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ, ಶಾಂತಿಗೆ ಭಂಗವಾಗದ ರೀತಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಆದರೆ, […]
ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ – ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ

ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ನಿಲ್ಲುವಂತೆ ಕಾಣುತ್ತಿಲ್ಲ ಇದರ ಪರಿಣಾಮ ಜಗತ್ತಿಗೆ ತಟ್ಟಿದರೂ ಸಹ ಅಮೆರಿಕ ಹಠ ಬಿಡುತ್ತಿಲ್ಲ ಇತ್ತ ಇರಾನ್ ಸಹ ಸೋಲುವುದಕ್ಕೆ ತಯಾರಿಲ್ಲ. ಒಂದು ಕಡೆ ಮಾಸ್ಟರ್ ಪ್ಲ್ಯಾನ್ ಮೇಲೆ ಪ್ಲ್ಯಾನ ಮಾಡುತ್ತಿರುವ ಅಮರಿಕ ಮತ್ತೊಂದು ಕಡೆ ನಾವು ಎಲ್ಲದಕ್ಕೂ ತಯಾರಿದ್ದೇವೆ ಎನ್ನುತ್ತಿರುವ ಇರಾನ್ ಇದನ್ನೆಲ್ಲಾ ಕಂಡು ಕಾಣದಂತೆ ಇರುವ ಕೆಲವು ದೇಶಗಳು ಒಟ್ಟಿನಲ್ಲಿ ಇದು ಎಲ್ಲಿವರಿಗೆ ಮುಂದುವರೆಯುತ್ತದೆ ಎನ್ನುವುದು ಗೊತ್ತಿಲ್ಲ ಆದರೆ ಇದೀಗ ಅಮೆರಿಕಾ ತನ್ನ ಷರತ್ತುಗಳನ್ನು ಒಪ್ಪದ ಹೊರತು ಜಗತ್ತಿನ ಅತ್ಯಂತ […]
ಕ್ರಿಕೆಟ್ ಜಗತ್ತಿನ ಹೊಸ ರಾಣಿ : ಸ್ಮೃತಿ ಮಂಧಾನ ಅಬ್ಬರಕ್ಕೆ ವಿಶ್ವ ದಾಖಲೆಗಳು ಧೂಳೀಪಟ

ಬುದ್ದಿವಂತಿಕೆ, ಸೌಂದರ್ಯ ಮತ್ತು ಸರಳತೆಯನ್ನು ಹೊಂದಿರುವ ಸ್ಮೃತಿ ಮಂಧಾನ ಇತಿಹಾಸ ಸೃಷ್ಟಿಸಿದ್ದಾರೆ. ಒಂದೇ ತಿಂಗಳು, ಮೂರು ಮಹಾ ದಾಖಲೆ ಮಾಡಿದ್ದು, ವಿಶ್ವ ಕ್ರಿಕೆಟ್ ಆಳುತ್ತಿರುವ ಭಾರತದ ಹೆಣ್ಣುಮಗಳು ನಮ್ಮ ಸ್ಮೃತಿ ಮಂಧಾನ ಆಗಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ನ ತಾರೆ ಸ್ಮೃತಿ ಮಂಧಾನ ಹೊಸ ಇತಿಹಾಸ ಸೃಷ್ಟಿಸುವ ಮೂಲಕ ವಿಶ್ವ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಅವರು ಕೇವಲ ಒಂದೇ ತಿಂಗಳ ಅವಧಿಯಲ್ಲಿ ಮಹಿಳಾ ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಬ್ಯಾಟಿಂಗ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಭಾರತೀಯ ಮಹಿಳಾ […]
ಪ್ರಧಾನಿ ಮೋದಿಗೆ ಮದುವೆಯೇ ಆಗಿಲ್ಲ, ತ್ರಿಪಲ್ ತಲಾಕ್ ಅಂತೆ ಇವನಿಗೆ ಯಾಕೆ ಬೇಕು? : ಬಿಕೆ ಹರಿಪ್ರಸಾದ್

ಬೆಂಗಳೂರು: ಪ್ರಧಾನಿ ಮೋದಿಗೆ ಮದುವೆಯೇ ಆಗಿಲ್ಲ, ತ್ರಿಪಲ್ ತಲಾಕ್ ಅಂತೆ ಇವನಿಗೆ ಯಾಕೆ ಬೇಕು? ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, ‘ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? ಮದುವೆಯೇ ಆಗಿಲ್ಲ ಎಂದುಟಾಂಗ್ ಕೊಟ್ಟಿದ್ದಾರೆ. ಇಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ […]
ಮುಂಗಾರು ಹಿಂತೆಗೆತ ಆರಂಭ : ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ! ಇಲ್ಲಿದೆ ಮಾಹಿತಿ

ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ವರುಣ ಎಂಟ್ರಿ ಇರಲಿಲ್ಲ ಆದರೇ ಇದೀಗ ದೇಶಾದ್ಯಂತ ಮಳೆ ಕೊರತೆ ನಡುವೆಯೇ ನೈಋತ್ಯ ಮುಂಗಾರು ದೇಶದ ವಾಯವ್ಯ ಭಾಗದಿಂದ ಹಿಂತೆಗೆದುಕೊಳ್ಳಲು ಆರಂಭಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂಗಾರು ಸಂಪೂರ್ಣವಾಗಿ ಅಂತ್ಯಗೊಳ್ಳುವ ಮುನ್ನ ದೇಶದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಮುಂದುವರಿದಿದ್ದು, ಉತ್ತರ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶವು ಸೆಪ್ಟೆಂಬರ್ 21ರ ವೇಳೆಗೆ ವಾಯುಭಾರ ಕುಸಿತವಾಗಿ, ಸೆಪ್ಟೆಂಬರ್ 22ರ ವೇಳೆಗೆ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು […]
ಕಿಚ್ಚನ ಉಗ್ರರೂಪಕ್ಕೆ ಬೆಚ್ಚಿ ಬಿದ್ದ, ಬಿಗ್ ಬಾಸ್ ಮನೆ ಮಂದಿ : ಮಾಡರ್ನ್ ಮಹಾಕವಿ ಮಂಜನಿಗೆ ಚಳಿ ಬಿಡಿಸಿಯೇ ಬಿಟ್ರು ಸುದೀಪ್

ಈ ಬಿಗ್ಬಾಸ್ ವೇದಿಕೆ ಮೇಲೆ ಅವರು ತಾಳ್ಮೆ ಕಳೆದುಕೊಂಡಿದ್ದು ಬಲು ಅಪರೂಪ. ಸಾಮಾನ್ಯವಾಗಿ ತಾಳ್ಮೆ ಕಳೆದುಕೊಂಡು ಮಾತನಾಡುವುದಿಲ್ಲ, 13ನೇ ಸೀಸನ್ನಿನ ಎರಡನೇ ವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಘಟನೆಗಳು ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಸಹ ಕಿರಿ-ಕಿರಿ ತಂದಿತ್ತು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಮಂಜ ಸೇರಿದಂತೆ ಕೆಲ ಸ್ಪರ್ಧಿಗಳು ಆಡಲು ಅಲ್ಲ ತಮ್ಮ ರೌಡಿತನ ತೋರಲು ಮನೆ ಸೇರಿದಂತೆ ವರ್ತಿಸಿದ್ದರು. ಹಾಗಾಗಿ ಸುದೀಪ್ ಅವರು ಅಂಥಹವರಿಗೆ ಅವರಿಗೆ ತಕ್ಕದಾದ ಭಾಷೆಯಲ್ಲಿಯೇ ಉತ್ತರ ನೀಡಿದರು. ವಿಶೇಷವಾಗಿ ಮಹಾಕವಿ ಮಾಡರ್ನ್ […]
ಕರ್ನಾಟಕ ಹೈಕೋರ್ಟ್ : ರಾಜ್ಯದ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ರದ್ದು – ಹೊಸ ಪಟ್ಟಿಗೆ 3 ತಿಂಗಳ ಗಡುವು

ಕಲ್ಯಾಣ ಕರ್ನಾಟಕ (ಎಚ್ಕೆ) ಮತ್ತು ಉಳಿದ ಕರ್ನಾಟಕ (ನಾನ್ ಎಚ್ಕೆ) ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಕಾರಣವಾಗಿದ್ದ ಹಳೆಯ ತಾತ್ಕಾಲಿಕ ಹಾಗೂ ಅಂತಿಮ ಆಯ್ಕೆ ಪಟ್ಟಿಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಕಲ್ಯಾಣ ಕರ್ನಾಟಕ ಭಾಗದ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್ಟಿಆರ್) ನೇಮಕಾತಿಗೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ಪೀಠವು ಮಹತ್ವದ ತೀರ್ಪು ನೀಡಿದೆ. ನಿಯಮಾನುಸಾರ ಎಲ್ಲಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ, ಮೂರು ತಿಂಗಳೊಳಗೆ ಹೊಸದಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ಪೀಠವು […]
ರೈತರಿಗೆ ಯಾವುದೇ ಹೊಸ ನೋಟಿಸ್ ನೀಡಲ್ಲ; ಡಿ.ಕೆ. ಶಿವಕುಮಾರ್

ಶಿವಮೊಗ್ಗ: ರೈತರಿಗೆ ಹೊಸದಾಗಿ ಯಾವುದೇ ನೋಟಿಸ್ ನೀಡದಂತೆ ಹಾಗೂ ಯಾವುದೇ ಹೊಸ ಒತ್ತುವರಿಗೆ ಅವಕಾಶ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಲೆನಾಡು ಪ್ರದೇಶದ ಪರಿಸರ ಪ್ರವಾಸೋದ್ಯಮ ಹಾಗೂ 364 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವನ್ನು ಒಳಗೊಂಡಂತೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಮಲೆನಾಡು ಪ್ರದೇಶದ ಕಸ್ತೂರಿರಂಗನ್ ವರದಿಯಿಂದ ಉಂಟಾಗಿರುವ ಪರಿಣಾಮ ಹಾಗೂ ಜನರ ಆತಂಕಗಳ ಕುರಿತು ಚರ್ಚಿಸಲು ತೀರ್ಥಹಳ್ಳಿಯ […]