ಸಿದ್ದರಾಮಯ್ಯರನ್ನ ಒಗ್ಗರಣೆಗೆ ಕರಿಬೇವು ಸೊಪ್ಪಿನಂತೆ ಬಳಸಿ ಸೈಡಿಗೆ ಇಟ್ಟಿದೆ; ಆರ್ ಅಶೋಕ್

ರಾಮನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ರೆಸ್ಟ್ ಗ್ಯಾರಂಟಿ ಕೊಟ್ಟಿದೆ ಈ ಕಾರಣಕ್ಕೆ ಅವರು ಕೈ ಪಕ್ಷದಿಂದ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೈ ಪಕ್ಷದ ವಿರುದ್ಧ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕರಿಬೇವು ಸೊಪ್ಪಿನಂತೆ ಒಗ್ಗರಣೆಗೆ ಬಳಸಿ ಸೈಡಿಗೆ ಇಟ್ಟಿದೆ. ಅವರ ಬಾಯಿ ಮುಚ್ಚಿಸಲಾಗಿದ್ದು, ಮೈಸೂರಿನ ಮನೆಯಲ್ಲಿ ರೆಸ್ಟ್ ಗ್ಯಾರಂಟಿ ಮಾಡುವ ಸ್ಥಿತಿಗೆ ತರಲಾಗಿದೆ. ಡಿ.ಕೆ.ಶಿವಕುಮಾರ್ ಮುಖ ನೋಡಿ ಒಕ್ಕಲಿಗರು ವೋಟ್ ಹಾಕಲ್ಲ ಎಂದು ಅವರದೇ ಪಕ್ಷದ ಕೆ.ಎನ್.ರಾಜಣ್ಣ […]
ನನ್ನ ಮುಂದೆ ಇಂಥ ಭಾಷೆ ಬಳಸಬೇಡಿ: ಕೇಂದ್ರ ಸಚಿವ ಸಿಂಧಿಯಾ ಹೀಗೆ ಹೇಳಿದ್ದೇಕೆ ಗೊತ್ತಾ?

ಗುಣ: ರಸ್ತೆಗಳ ಸಮಸ್ಯೆ ಬಗೆಹರಿಯದಿದ್ದರೆ ಇನ್ನು ಮುಂದೆ ನಿಮಗೆ ಮತ ಹಾಕುವುದಿಲ್ಲ ಎಂದು ನಾಗರಿಕರು ಹೇಳಿದ್ದಾರೆ. ಅಲ್ಲದೇ ತಮ್ಮ ನೋವಿಗೆ ಸ್ಪಂದನೆ ಮಾಡದೆ ಇದ್ದರೆ ಮತ ಹಾಕುವುದಕ್ಕೆ ಬರಲ್ಲ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ, ಇದಕ್ಕೆ ಕಾರಣ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯ ಪ್ರದೇಶದ ಗುಣ ಜಿಲ್ಲೆಗೆ ಭೇಟಿ ನೀಡಿದ್ದರು ಈ ಸಮಯದಲ್ಲಿ ಗುಲಾಬ್ಗಂಜ್ ಪ್ರದೇಶದ ನಿವಾಸಿಗಳು ಅವರನ್ನು ಭೇಟಿಯಾಗಿ ಸ್ಥಳೀಯ ರಸ್ತೆಗಳ ದುಸ್ಥಿತಿ ಹಾಗೂ ಇದರಿಂದ ತಾವು […]
ನಾನು ೨ ಬಾರಿ ಸಾಲಮನ್ನಾ ಮಾಡಿದಾಗ ಮೋದಿ, ಮನಮೋಹನ್ ಸಿಂಗ್ ಬಳಿ ಹಣ ಕೊಡಿ ಅಂತ ಕೇಳಿದ್ನಾ?: ಹೆಚ್ಡಿಕೆ

ಬೆಂಗಳೂರು: ಡಿಕೆ ಶಿವಕುಮಾರ್ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರು ಮನಸ್ಸು ಮಾಡಿದ್ರೆ, ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಇತ್ತೀಚೆಗೆ ಬಹಳ ಬದಲಾವಣೆ ಆಗಿರೋ ರೀತಿ ತೋರಿಸ್ತಾ ಇದ್ದಾರೆ. ಅದು ಕಾರ್ಯ ರೂಪಕ್ಕೆ ಇಲ್ಲಿವರೆಗೂ ಹಲವಾರು ರೀತಿ ಸಂಪಾದನೆ ಮಾಡಿರೋ ಹಣವನ್ನ ಜನರ ಪರವಾಗಿ ಕೊಟ್ಟರೆ 2028ಕ್ಕೂ, ಮುಂದೆಯೂ ನಾನೇ ಸಿಎಂ ಅಂತ ಹೇಳ್ತಾ ಇದ್ದಾರೆ. ಇದು ಮಾಡಿದ್ರೆ […]
ಮೀನುಗಾರರ ವ್ಯಾಪಾರ ಬಂದ್ ಮಾಡಿಸಲು ಯಾರು ಹೇಳಿದ್ದು? : ಅಧಿಕಾರಿಗಳ ವಿರುದ್ಧ ಸಿಎಂ ಡಿಕೆಶಿ ಗರಂ

ಮಂಗಳೂರು: ಮೀನುಗಾರರ ವ್ಯಾಪಾರ ಬಂದ್ ಮಾಡಿಸಲು ಯಾರು ಹೇಳಿದ್ದು? ಯಾರಾದರೂ ಆರ್ಡರ್ ಮಾಡಿದ್ದರೆ ಅವರನ್ನ ಸಸ್ಪೆಂಡ್ ಮಾಡುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂಧರಿಗೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ಮೀನುಗಾರರ ಸಮಸ್ಯೆಗಳನ್ನ ಆಲಿಸಿದರು. ಇದೇ ವೇಳೆ ಬಂದರಿನಲ್ಲಿನ ಮೀನು ವ್ಯಾಪಾರ ಬಂದ್ ಮಾಡಿಸಿದ್ದಕ್ಕೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ ಸಿಎಂ ಡಿಕೆಶಿ, ಬಂದರಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. […]
ರಷ್ಯಾಗೆ ಟ್ರಂಪ್ ಬಿಗ್ ಶಾಕ್ : ಭಾರತ-ಚೀನಾ ಮೇಲೆ 100% ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಸಹಿ

ವಾಷಿಂಗ್ಟನ್: ಉಕ್ರೇನ್ ಮೇಲಿನ ಯುದ್ಧಕ್ಕೆ ಧನಸಹಾಯ ನೀಡುತ್ತಿರುವ ರಷ್ಯಾದ ಆದಾಯದ ಮೂಲಗಳಿಗೆ ಸಂಪೂರ್ಣವಾಗಿ ಪೆಟ್ಟು ನೀಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಆರ್ಥಿಕ ನಿರ್ಬಂಧಗಳ ಕಾಯ್ದೆಗೆ ಸಹಿ ಹಾಕಿದ್ದಾರೆ. ರಷ್ಯಾ ವಿರುದ್ಧ ವ್ಯಾಪಕ ಹೊಸ ನಿರ್ಬಂಧಗಳನ್ನು ವಿಧಿಸಲು ಅಧಿಕಾರ ನೀಡುವ ಮಸೂದೆಗೆ ಟ್ರಂಪ್ ಅವರು ಸಹಿ ಹಾಕಿದ್ದಾರೆ. ಈ ವಾರ ಅಮೆರಿಕದ ಕಾಂಗ್ರೆಸ್ನಲ್ಲಿ ಮಸೂದೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ರಂಪ್ ಸಹಿ ಮಾಡಿದ್ದಾರೆ.ಉಕ್ರೇನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ […]
20ನೇ ಶತಮಾನದ ಬೆಂಕಿ, 21ನೇ ಶತಮಾನದ ಬೆಳಕು- ಪೆರಿಯಾರ್ ಮಹತ್ವ ಇಲ್ಲಿದೆ ನೋಡಿ

ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಭಿಪ್ರಾಯವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಹಕ್ಕಿದೆ. ಈ ಹಕ್ಕನ್ನು ಕಸಿದುಕೊಳ್ಳುವುದು ಅನ್ಯಾಯ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ” ಪೆರಿಯಾರ್ 17 ಸೆಪ್ಟೆಂಬರ್ . ತಮಿಳುನಾಡು ಮಾತ್ರವಲ್ಲ, ಇಡೀ ಭಾರತದ ಸಾಮಾಜಿಕ ನ್ಯಾಯದ ಇತಿಹಾಸದಲ್ಲಿ ಮರೆಯಲಾಗದ ದಿನ. ಇ.ವಿ. ರಾಮಸಾಮಿ ಪೆರಿಯಾರ್ ಅವರ 147ನೇ ಜಯಂತಿ. ಬಿಳಿ ಗಡ್ಡ, ಕನ್ನಡಕ, ಕಪ್ಪು ಶಾಲು ಹೊತ್ತ ಈ ಮನುಷ್ಯನನ್ನು ತಮಿಳರು ಪ್ರೀತಿಯಿಂದ ‘ತಂದೆ’ ಎಂದರು, ‘ಪೆರಿಯಾರ್’ ಅಂದರೆ ದೊಡ್ಡವರು ಎಂದು ಕರೆದರು. ಅವರು ರಾಜಕಾರಣಿಯಾಗಿರಲಿಲ್ಲ,ದೇವರ ಮನುಷ್ಯನೂ ಆಗಿರಲಿಲ್ಲ. […]
ನಮಗೆ ರಾಜಕೀಯ ಮುಖ್ಯವಲ್ಲ, ಜನರ ಬದುಕು ಮುಖ್ಯ : ಸಿಎಂ ಡಿ.ಕೆ. ಶಿವಕುಮಾರ್

ಮಂಗಳೂರು : ”ಮಹಾತ್ಮ ಗಾಂಧಿ ಅವರು ಉಳಿದಿದ್ದ ಮನೆಗೆ ಹೋಗಿದ್ದೆ ಅಲ್ಲಿ ಉಪಾಹಾರ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದು ಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ ಎಂದು ನಗುತ್ತಾ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಮಂಗಳೂರು ಬನ್ಸ್, ದೋಸೆ ಎಲ್ಲಾ ಸವಿದೆ. ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು. ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇದೆ ಮೊದಲ ಬಾರಿ ನಡೆಯುವ ರಾಜ್ಯ ವಿಶೇಷ ಸಚಿವ ಸಂಪ ಟ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್ […]
ಕೈ ಪಕ್ಷವು ದೇಶವಿರೋಧಿಗಳ ಪರವಾಗಿದ್ದು, ಸದಾ ದೇಶವಿರೋಧಿಗಳನ್ನು ಪ್ರೋತ್ಸಾಹಿಸುತ್ತದೆ : ಬೊಮ್ಮಾಯಿ

ಹುಬ್ಬಳ್ಳಿ: ಕಾಂಗ್ರೆಸ್ ವಿರುದ್ಧ ಇದೀಗ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.ಕಾಂಗ್ರೆಸ್ ಪಕ್ಷವು ದೇಶವಿರೋಧಿಗಳ ಪರವಾಗಿದ್ದು, ಸದಾ ದೇಶವಿರೋಧಿ ಹಾಗೂ ಸಮಾಜವಿರೋಧಿ ಶಕ್ತಿಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ ಎಂದು ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಉಮರ್ ಖಾಲಿದ್ ಪರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದರು. ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಿರುವ […]
ದೊಡ್ಮನೆಯ ದಡ್ಡರ ಸ್ಟೋರಿ – ಜನರಿಗೆ ಬೇಸರ ಮೂಡಿಸಿದ ಬಿಗ್ ಬಾಸ್ ಮಂದಿ- ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದು ಹೇಗೆ? ಇಲ್ಲಿದೆ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ ಜಗಳ, ಗಲಾಟೆಗಳು ಮುಗಿಲು ಮುಟ್ಟಿವೆ ಮಾತಿನ ಮೌಲ್ಯ ಅರಿಯದೆ ಕೆಲವು ಜನ ತಮಗೆ ಇಷ್ಟ ಬಂದತೆ ನಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದು ಕಡೆ ಈ ಶೋ ಅನ್ನು ಹಿರಿಯರಿಂದ ಹಿಡಿದು ಮಕ್ಕಳು ಸಹ ನೋಡುತ್ತಾ ಇರುತ್ತಾರೆ. ಇದೆಲ್ಲಾ ದೊಡ್ಡ ಮನೆ ಒಳಗಿರುವ ಮಂದಿಗೆ ಗೊತ್ತಿದ್ದರೂ ಸಹ ದಡ್ಡರಂತೆ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ. ಹೌದು ಸ್ಪರ್ಧಿಗಳ ನಡುವೆ ಸೌಜನ್ಯ, ಸಂಯಮ ಎನ್ನುವುದೇ ಇಲ್ಲದಂತಾಗಿದ್ದು, ಮುಖ್ಯವಾಗಿ […]
Vote chori, govt chori ಆಯ್ತು, ಈಗ ಪಾರ್ಟಿ ಚೋರಿ : ರಾಹುಲ್ ಗಾಂಧಿ

ನವದೆಹಲಿ: ಮೊದಲು ಶಿವಸೇನೆ, ನಂತರ ಎನ್ಸಿಪಿ, ಈಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಅದರ ಅಧಿಕೃತ ಚಿಹ್ನೆಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಮೊದಲು ಶಿವಸೇನೆ, ನಂತರ ಎನ್ಸಿಪಿ, ಈಗ ತೃಣಮೂಲ […]