ಟಿಎಂಸಿ ಬ್ಯಾಂಕ್ ಖಾತೆಗಳ ಜಪ್ತಿ: ತುರ್ತು ವಿಚಾರಣೆ ಕೋರಿದ್ದ ಮಮತಾ ಬ್ಯಾನರ್ಜಿ ಬಣದ ಅರ್ಜಿ ಹೈಕೋರ್ಟ್‌ನಲ್ಲಿ ತಿರಸ್ಕಾರ!

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಕಾನೂನು ವಲಯದಲ್ಲಿ ಭಾರಿ ಹಿನ್ನಡೆಯಾಗಿದೆ. ಪಕ್ಷದ ಮೂರು ಪ್ರಮುಖ ಬ್ಯಾಂಕ್ ಖಾತೆಗಳನ್ನು ಪೊಲೀಸರು ಮುದ್ರೆ ಜಪ್ತಿ (Debit Freeze) ಮಾಡಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಲ್ಲಿಸಿದ್ದ ತುರ್ತು ವಿಚಾರಣೆಯ ಕೋರಿಕೆಯನ್ನು ಕೋಲ್ಕತ್ತಾ ಹೈಕೋರ್ಟ್ ತಿರಸ್ಕರಿಸಿದೆ. ಬರೋಬ್ಬರಿ 440 ಕೋಟಿ ರೂಪಾಯಿಗಳ ನಿಧಿಯನ್ನು ಹೊಂದಿರುವ ಈ ಖಾತೆಗಳ ಜಪ್ತಿಯಿಂದಾಗಿ ಪಕ್ಷದ ದೈನಂದಿನ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ನ್ಯಾಯಾಲಯವು ಈ ಅರ್ಜಿಯನ್ನು ಸಾಮಾನ್ಯ ಪ್ರಕ್ರಿಯೆಯಡಿಯಲ್ಲೇ ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಪ್ರಕರಣದ […]

ಭಾರತ ಮತ್ತು ಸೀಶೆಲ್ಸ್ ನಡುವಿನ ಸಂಬಂಧ ಚಟ್ನಿ, ಸಮೋಸಾಗೆ ಸಾಕ್ಷಿ : ಪ್ರಧಾನಿ ನರೇಂದ್ರ ಮೋದಿ

PM Narendra Modi ವಿಕ್ಟೋರಿಯಾ : ಭಾರತ ಪ್ರಧಾನಿ ನರೇಂದ್ರ ಮೋದಿಯವರು ದೇಶ-ವಿದೇಶಗಳ ಮಟ್ಟದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಅಲ್ಲದೇ ಕೆಲವೊಮ್ಮೆ ವಿದೇಶಿಗರ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಸದ್ಯಕ್ಕೆ ಮೋದಿ ಸೀಶೇಲ್ಸ್‌ ದೇಶವನ್ನು ಹಾಡಿ ಹೊಗಳಿದ್ದಾರೆ. ಭಾರತ ಮತ್ತು ಸೀಶೆಲ್ಸ್ ನಡುವಿನ ಸಂಬಂಧ ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಚಟ್ನಿ ಮತ್ತು ಸಮೋಸಾಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸೀಶೆಲ್ಸ್‌ನ […]

ಕಲಿಯಲು ಹೋದ ಕಲಾಗೆ ಕಷ್ಟಗಳು ಕಂಟಕವಾಗಿ ಕಾಡುತ್ತಿದ್ದವು, ಯಾಕೆ ಗೊತ್ತೇ? ಈ ಸ್ಟೋರಿ ಓದಿ

ಕನಸು ಹೊತ್ತ ಸಾಕಷ್ಟು ಕಂದಮ್ಮಗಳು ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿದ ನಂತರ ಉನ್ನತ ಶಿಕ್ಷಣಕ್ಕಾಗಿ ಹುಟ್ಟೂರು ಬಿಟ್ಟು ನಗರಕ್ಕೆ ಹೋಗುತ್ತಾರೆ. ಇದೆ ರೀತಿ ಕಲಾ ಎನ್ನುವ ಯುವತಿ ಊರು ಬಿಟ್ಟು ಸಿಟಿಗೆ ಹೋಗುತ್ತಾಳೆ. ಕಲಾಳ ಶಿಕ್ಷಣದ ಜೀವನ ಮದುವೆಯಾಗಿ ಸಂಸಾರ ಮಾಡುವಷ್ಟು ಸರಳವಾಗಿರುವುದಿಲ್ಲ. ನಗರದ ಗರ್ಭದಲ್ಲಿ ಹೊಕ್ಕ ಅವಳಿಗೆ ಒದ್ದಾಟ ಹೆಚ್ಚಿನ ಮಟ್ಟದಲ್ಲಿಯೇ ಇತ್ತು. ಇಷ್ಟೆಲ್ಲಾ ಇದ್ದರೂ ಕಲಾ ಶಿಕ್ಷಣದ ಸವಿಯನ್ನು ಸವಿಯಲು ಕಾಲೇಜ್ ಸೇರಿಕೊಳ್ಳುತ್ತಾಳೆ. ಕಾಲೇಜ್ ಅಲ್ಲಿ ಅವಳಿಗೆ ಸಮಸ್ಯೆಯ ಸವಾಲುಗಳು ಸಾಲು ಗಟ್ಟಿ ನಿಂತಿರುತ್ತಿದ್ದು, […]

ಯಾವುದೇ ಮತದಾರ, ಮತ ರದ್ದು ಆಗಬಾರದು ಇದು ನಮ್ಮ ಉದ್ದೇಶ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

Priyank Kharge ಬೆಂಗಳೂರು: ಯಾವುದೇ ಮತದಾರ ಮತ ರದ್ದು ಆಗಬಾರದು. ಇದು ನಮ್ಮ ಉದ್ದೇಶ. ಆತಂಕ ನಮಗೆ ಇಲ್ಲ. ಸಾಮಾನ್ಯ ಪ್ರಜ್ಞೆಯಿಂದ ಬಿಜೆಪಿ ಅವರು ಮಾತಾಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಡಾಫೆ ಉತ್ತರ ಕೊಡೋದು ಬೇಡ. ಅರ್ಹರಿಗೆ ಮತ ರದ್ದು ಆಗಬಾರದು. ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಗೊಂದಲ ಆಯ್ತು. ನಾವು ಕೇಳಿದ 12 ಪ್ರಶ್ನೆಗೆ ಅವರು ಉತ್ತರ ಕೊಟ್ಟಿಲ್ಲ. ಅನುಮಾನ ಬಂದಾಗ ನಾವು ಚುನಾವಣೆ ಆಯೋಗಕ್ಕೆ ಕೇಳಬೇಕಾ? ಬಿಜೆಪಿಗೆ […]

ರಾಜ್ಯದಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು: ಸಿಎಂ ಡಿ.ಕೆ.ಶಿವಕುಮಾರ್

CM D.K. Shivakumar ಬೆಂಗಳೂರು: ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳು ಕೂಡ ನಿಮಗೆ ಈ ಅರ್ಜಿ ಸಲ್ಲಿಕೆಯಲ್ಲಿ ನೆರವು ನೀಡಬಹುದು. ಸರ್ಕಾರ ಈಗಾಗಲೇ 5.50 ಕೋಟಿ ಜನರಿಗೆ ಈಗಾಗಲೇ ಜಾತಿ ಪ್ರಮಾಣಪತ್ರ ಅಧಿಕೃತವಾಗಿ ನೀಡಿರುವ ದಾಖಲೆ ನಮ್ಮ ಬಳಿ ಇದೆ ಎಂದು ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಇದರಲ್ಲಿ 2,54,95,767 ಹಿಂದುಳಿದ ವರ್ಗದ ಪ್ರಮಾಣಪತ್ರ, 2,94,51,027 ಎಸ್ ಸಿ ಹಾಗೂ ಎಸ್ಟಿ ಪ್ರಮಾಣಪತ್ರ ವಿತರಿಸಲಾಗಿದೆ. ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು. ಜೂ. 30ರಿಂದ ರಾಜ್ಯದಲ್ಲಿ […]

ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ, ಅಗ್ನಿವೀರ ಸೈನಿಕನಾದ ಹಿರೇ ಹೆಗ್ಡಾಳ್ ಗ್ರಾಮದ ಯುವಕ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ , ಅಗ್ನಿವೀರ ಸೈನಿಕನಾಗಿ , ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಯುವಕ ಕೆ.ಅಜಯ್ ಕುಮಾರ್ ನೇಮಕವಾಗಿದ್ದು. ಸ್ವಗ್ರಾಮದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ , ನೇಮಕವಾದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸೇನಿಕನಿಗೆ. ತನ್ನೂರಲ್ಲಿ ಭವ್ಯ ಸ್ವಾಗತ ಮಾಡಿದ್ದು , ಗ್ರಾಮಸ್ಥರಿಂದ ಭಾರೀ ಅದ್ಡೂರಿ ಮೆರವಣಿಗೆ ಜರುಗಿತು. ಗ್ರಾಮದ ಯುವಕರಲ್ಲಿ ಸಂಚಲನ ಮೂಡಿಸಿದೆ , ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದ್ದು ಕುಣಿದು ಕುಪ್ಪಳಿಸಿ ವಾದ್ಯವೃಂಧಗಳ […]

365 ದಿನವೂ ಗ್ರಾಮೀಣ ಉದ್ಯೋಗ ಖಾತ್ರಿಗೆ ಸಚಿವ ಈಶ್ವರ ಖಂಡ್ರೆ ಒತ್ತಾಯ

ನವದೆಹಲಿ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ಮಹಾತ್ಮಾ ಗಾಂಧೀ ಹೆಸರು ಕೈಬಿಟ್ಟಿರುವ ಕೇಂದ್ರ ಸರ್ಕಾರ, ಮಹಾತ್ಮಾಗಾಂಧೀ ವಿಬಿ ಜಿ ರಾಮ್ ಜೀ ಎಂದು ಮರುನಾಮಕರಣ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಆಗ್ರಹಿಸಿದ್ದಾರೆ. ದೆಹಲಿಯಲ್ಲಿಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರು ಭಾರತ ಹಳ್ಳಿಗಳ ದೇಶವಾಗಿದ್ದು, ದೇಶದ […]

ಸಾರಿಗೆ ಬಸ್ ಟೈರ್ ಸ್ಪೋಟಗೊಂಡು ಪಲ್ಟಿ: ಇಬ್ಬರು ಸ್ಥಳದಲ್ಲೇ ಸಾ*ವು, ಹಲವರಿಗೆ ಗಾಯ

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಇಂದು ಅತ್ಯಂತ ಕರುಣಾಜನಕ ರಸ್ತೆ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಟೈರ್ ದಿಢೀರನೆ ಹಾರಿಹೋದ ಪರಿಣಾಮ, ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಈ ಘೋರ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಜಾಗದಲ್ಲೇ ಪ್ರಾಣ ಕಳೆದುಕೊಂಡಿದ್ದು, 60ಕ್ಕೂ ಹೆಚ್ಚು ಮಂದಿ ರಕ್ತಸಿಕ್ತ ಗಾಯಗೊಂಡಿದ್ದಾರೆ. ತಾಲೂಕಿನ ಮಧುವನಹಳ್ಳಿ ಬೈಪಾಸ್ ಹೆದ್ದಾರಿಯ ಬಳಿ ಈ ಅವಘಡ ನಡೆದಿದೆ. ಮೃತರನ್ನು ಕೊಳ್ಳೇಗಾಲ ಮೂಲದ ಪುಟ್ಟನಂಜಮ್ಮ (60 ವರ್ಷ) ಹಾಗೂ ಕುದೇರು ಗ್ರಾಮದ […]

ತನಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ವೈವಾಹಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ದೂರಾಗುವ ದಂಪತಿಗಳ ಜೀವನಾಂಶ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ಪತಿಗಿಂತಲೂ ಹೆಚ್ಚಿನ ವೇತನ ಗಳಿಸುತ್ತಾ ಆರ್ಥಿಕವಾಗಿ ಸದೃಢವಾಗಿರುವ ಪತ್ನಿಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಹೈಕೋರ್ಟ್ ನ್ಯಾಯಪೀಠವು ಈ ಆದೇಶ ಹೊರಡಿಸಿದ್ದು, ಪತ್ನಿಗೆ ಪ್ರತಿ ತಿಂಗಳು ಜೀವನಾಂಶ ಪಾವತಿಸುವಂತೆ ಕೆಳಹಂತದ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ವಜಾಗೊಳಿಸಿದೆ. ಪ್ರಕರಣದ ಹಿನ್ನೆಲೆ ಏನು? ಇತ್ತೀಚಿನ ವರ್ಷಗಳಲ್ಲಿ […]

ರಾಜ್ಯಕ್ಕೆ ವಿದ್ಯುತ್ ಪೂರೈಸಲು ಇಂಧನ ಇಲಾಖೆ ಖಾಸಗಿಗಿಂತ ಬಲಿಷ್ಠ, ಖಾಸಗೀಕರಣವಿಲ್ಲ: ಸಚಿವ ಕೆ.ಜೆ ಜಾರ್ಜ್

ಬೆಂಗಳೂರು : ರಾಜ್ಯದ ಜನರಿಗೆ ವಿದ್ಯುತ್ ಪೂರೈಸಲು ಇಂಧನ ಇಲಾಖೆ ಬಲಿಷ್ಠವಾಗಿದ್ದು, ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್ ಗಳ ಒಕ್ಕೂಟ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇಂಧನ ಸಚಿವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಟಾಟಾ ಪವರ್ ಕಂಪನಿಯು ಕರ್ನಾಟಕದಲ್ಲಿ ವಿದ್ಯುತ್‌ ಸರಬರಾಜು (ವಿತರಣೆ) ಮಾಡಲು ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ […]