ರಾಜ್ಯದಲ್ಲಿ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಕಡ್ಡಾಯ

ಬೆಂಗಳೂರು: ರಾಜ್ಯದ ಜನಪ್ರಿಯ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಸಾರ್ವಜನಿಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಸರ್ಕಾರದ ಯಾವುದೇ ಯೋಜನೆಗಳನ್ನು ರದ್ದು ಮಾಡುವುದಿಲ್ಲ. ಆದರೆ, ಅನರ್ಹರನ್ನು ಕೈಬಿಟ್ಟು ಕೇವಲ ನೈಜ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆ ತಲುಪಿಸಲು ಈ ಎರಡೂ ಗ್ಯಾರಂಟಿಗಳಿಗೆ ಸಾರ್ವಜನಿಕರು ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಸಿಎಂ ಪ್ರಕಟಿಸಿದ್ದಾರೆ. ವಿವಿಧ ಜಿಲ್ಲೆಗಳ ಡಿಸಿ, ಎಸ್‌ಪಿ ಹಾಗೂ ಜಿಪಂ ಸಿಇಒಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ […]

ಬೆಂಗಳೂರಲ್ಲಿ ವರುಣನ ಆರ್ಭಟ: ಮುಂದಿನ 3 ಗಂಟೆ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾರಾಂತ್ಯದ ಸಂಜೆ ವರುಣನ ಅಬ್ಬರ ಜೋರಾಗಿದೆ. ನಗರದ ಹಲವು ಭಾಗಗಳಲ್ಲಿ ದಿಢೀರನೆ ಧಾರಾಕಾರ ಮಳೆ ಸುರಿದಿದ್ದು, ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ವಾಹನ ಸವಾರರು ರಸ್ತೆಯಲ್ಲೇ ಸಿಲುಕಿಕೊಳ್ಳುವಂತಾಗಿದೆ. ಮೆಟ್ರೋ ಸಿಟಿಯಾದ್ಯಂತ ವರುಣನ ದರ್ಶನ: ನಗರದ ಪಶ್ಚಿಮ ಮತ್ತು ಉತ್ತರ ಭಾಗಗಳಾದ ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ವಿಜಯನಗರ, ಪೀಣ್ಯ ಹಾಗೂ ಜಾಲಹಳ್ಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಕೆಲವೇ ನಿಮಿಷಗಳ ಮಳೆಗೆ ರಸ್ತೆಗಳ ಮೇಲೆ ನೀರು ನಿಂತಿದ್ದು, ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಪ್ರಮುಖ […]

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

ವಿಜಯನಗರ, ಕೂಡ್ಲಿಗಿ : ಸರ್ಕಾರದ ವಿವಿದ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ. ಜೂನ್ 12ರಂದು , ವಿಜಯನಗರದ ಹಿರೇಮಠ ವಿದ್ಯಾಪೀಠ ಪ್ರೌಢಶಾಲೆಯಲ್ಲಿ. ವಿಶ್ವ ‍ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಪ್ರಯುಕ್ತ , ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಕೈಗೊಳ್ಳಲಾಯಿತು. ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳು , ಹಾಗೂ ಸಿವಿಲ್ ಕಿರಿಯ ಶ್ರೇಣಿನ್ಯಾಯಾಧೀಶರಾದ. ಹೆಚ್.ಜೆ.ಶಿಲ್ಪ ರವರು , ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಪಿಡುಗುಗಳಲ್ಲಿ , ಬಾಲ ಕಾರ್ಮಿಕ ಪದ್ದತಿ ಪ್ರಮುಖವಾಗಿದೆ. ಅನಿಷ್ಠ ಪದ್ದತಿ ನಿವಾರಣೆಗೆ […]

ಪತ್ನಿ ನೀಡುವ ಪೊಲೀಸ್ ದೂರು ‘ಕ್ರೌರ್ಯ’ ಎನಿಸುವುದಿಲ್ಲ; ಸುಳ್ಳು ಎಂದು ಸಾಬೀತಾಗುವುದು ಅತ್ಯಗತ್ಯ: ಮದ್ರಾಸ್ ಹೈಕೋರ್ಟ್

ವೈವಾಹಿಕ ವಿವಾದಗಳು ಮತ್ತು ವಿಚ್ಛೇದನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಒಂದು ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. “ಪತ್ನಿಯು ತನ್ನ ಪತಿ ಅಥವಾ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ತಕ್ಷಣ, ಅದನ್ನು ಪತಿಯ ವಿರುದ್ಧ ಎಸಗಿದ ‘ವೈವಾಹಿಕ ಕ್ರೌರ್ಯ’ (Marital Cruelty) ಎಂದು ಪರಿಗಣಿಸಲು ಸಾಧ್ಯವಿಲ್ಲ. ಆ ದೂರು ಕಾನೂನುಬದ್ಧವಾಗಿ ಸುಳ್ಳು ಎಂದು ಸಾಬೀತಾದರೆ ಮಾತ್ರ ಅದನ್ನು ಕ್ರೌರ್ಯ ಎಂದು ಕರೆಯಬಹುದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಆರ್. ಸುಬ್ರಮಣಿಯನ್ ಮತ್ತು […]

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಗುಡ್‌ ನ್ಯೂಸ್‌ ನೀಡಿದೆ. ಜೂನ್ 13, 2026 ರಿಂದ ರಾಜ್ಯದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣಾ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. 2 ದಿನಗಳಲ್ಲಿ ವಿತರಣೆಯಾದ ಪಾಸ್‌ ವಿವರ ಸಾರಿಗೆ ಸಂಸ್ಥೆ (RTC) 12-06-2026 13-06-2026  ಒಟ್ಟು ಪಾಸ್‌ KSRTC 350 510 860 BMTC  0 268 268 KKRTC 146 495 641 NWKRTC 325 670 995 Total 821 1943 […]

ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ನೇಮಕ

ನವದೆಹಲಿ: ಭಾರತೀಯ ಭೂಸೇನೆಯ ಮುಂದಿನ ಮುಖ್ಯಸ್ಥರಾಗಿ (Chief of the Army Staff) ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಅವರು ಜೂನ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಅವರು ಜೂನ್ 30 ರಂದು ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಧೀರಜ್ ಸೇಥ್ ಅವರು ನಿಯೋಜನೆಗೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯವು, ಪ್ರಸ್ತುತ ವೈಸ್ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಜನರಲ್ […]

ಸಾವಿನ ವದಂತಿಯಿಂದ ಆತಂಕ; ಆಂಜನೇಯನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಟ ದೊಡ್ಡಣ್ಣ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವದಂತಿಗಳು ಅಭಿಮಾನಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದವು. ಈ ಬೆನ್ನಲ್ಲೇ ಕಂಟಕ ಪರಿಹಾರಕ್ಕಾಗಿ ದೊಡ್ಡಣ್ಣ ಅವರು ತಮ್ಮ ಕುಟುಂಬದವರೊಂದಿಗೆ ಮಹಾಲಕ್ಷ್ಮಿ ಲೇಔಟ್‌ನ ಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಡೆದಿದ್ದೇನು? ಶುಕ್ರವಾರ ಬೆಳಗ್ಗೆ ಕಿಡಿಗೇಡಿಗಳ ಗುಂಪೊಂದು ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆಪ್ತರು ಹಾಗೂ […]

ಯತ್ನಾಳ್ ದ್ವೇಷ ಭಾಷಣದ ಪಿತಾಮಹರು : ಯತ್ನಾಳ್ ವಿರುದ್ಧ ಕೈ ಶಾಸಕ ಗರಂ

ರಾಜ್ಯದ ರಾಜಕಾರಣದಲ್ಲಿ ದಿನಕ್ಕೊಂದು ಬಣ್ಣ ಬದಲಾಗುತ್ತಲೇ ಇರುತ್ತೆ, ಒಬ್ಬರ ಮೇಲೆ ಒಬ್ಬರು ಟೀಕೆ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಸದ್ಯಕ್ಕೆ ಪ್ರದೀಪ್‌ ಈಶ್ವರ್‌ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ, ಕೈ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಗೃಹ ಸಚಿವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಛಲವಾದಿ ನಾರಾಯಣಸ್ವಾಮಿಯನ್ನು ಪ್ರದೀಪ್‌ ಈಶ್ವರ್‌ ದೇಶದ್ರೋಹಿ ಎಂದಿರುವುದರ ಜತೆಗೆ ದ್ವೇಷ ಭಾಷಣ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹಾಗೂ . ಸಚಿವರಿಗೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಲೇಟರ್‌ ಬರೆದಿರುವುದು […]

‘29’ movie review: ಲವ್‌ ಸೈಡ್‌ ಅಲ್ಲಿ ಇಟ್ಟು ಸಾಧನೆ ಮಾಡು

ಸಿನಿ ಲೋಕದಲ್ಲಿ ಸಾಕಷ್ಟು ಚಿತ್ರಗಳು ಬಂದು ಹೋಗುತ್ತವೆ. ಕೆಲ ಮೂವಿಗಳು ಮನಸ್ಸಿನಲ್ಲಿ ಉಳಿದರೆ, ಇನ್ನು ಕೆಲ ಚಿತ್ರಗಳು ಸದ್ದಿಲ್ಲದೆ ಮರೆಯಾಗುತ್ತವೆ. ಇತ್ತೀಚಿಗೆ ತಮಿಳು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸೌಂಡ್‌ ಮಾಡುತ್ತಿದೆ. ಹೌದು, 29 ಎಂಬ ತಮಿಳು ಸಿನೆಮಾ ಯುವಕರ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರದಲ್ಲಿ ರತ್ನ ಕುಮಾರ್‌, ಪ್ರೀತಿ ಅಸ್ರಾಣಿ ಎನ್ನುವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರೇಮ ಕಥೆ ಇದೆ. ಆಫೀಸ್‌ಯೊಂದರಲ್ಲಿ ನಾಯಕ ಕೆಲಸ ಮಾಡುತ್ತಾ ಇರುತ್ತಾನೆ ಈ ಆಫೀಸ್‌ ಗೆ ಹೊಸದಾಗಿ […]

ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

ಬೆಂಗಳೂರು: ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿರುವ ಸೋಲದೇವನಹಳ್ಳಿ ರೈಲು ನಿರ್ವಹಣಾ ಘಟಕದ (Train Maintenance Depot) ನಿರ್ಮಾಣಕ್ಕಾಗಿ ಬೆಂಗಳೂರು ಇಂಟಿಗ್ರೇಟೆಡ್ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (Bi-RIDE) ಟೆಂಡರ್ ಆಹ್ವಾನಿಸಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ (BSTP) ಮಹತ್ವದ ಮೈಲಿಗಲ್ಲಾಗಿರುವ ಈ ನಿರ್ವಹಣಾ ಘಟಕದ ಟೆಂಡರ್‌ಗೆ ಜಿಎಸ್‌ಟಿ (GST) ಹೊರತುಪಡಿಸಿ ₹200.03 ಕೋಟಿ ನಿಗದಿಪಡಿಸಲಾಗಿದೆ. ಹಾಗೆಯೇ, ಈ ಟೆಂಡರ್‌ ಕಾಮಗಾರಿಗೆ ಬಿಡ್ ಸಲ್ಲಿಸಲು ಆಗಸ್ಟ್ 12, 2026 ಕಡೆಯ ದಿನಾಂಕವಾಗಿದೆ. ಚೆನ್ನೈನ ಇಂಟೆಗ್ರಲ್ […]