ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು

ವಿಜಯನಗರ ಜಿಲ್ಲೆ ಕೂಡ್ಲಿಗಿ : ಹಾಸ್ಟೆಲ್ ಗಳು ಗುರುಕುಲ ಮಾದರಿಯಲ್ಲಿ , ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಮತ್ತು ಎಲ್ಲಾ ಹಾಸ್ಟೆಲ್ ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗಬೇಕಿದೆ ಎಂದು ಶಾಸಕ ಎನ್ ಟಿ ಶ್ರೀನಿವಾಸ್ ಕರೆ ನೀಡಿದರು.ಜೂನ್ 6 ರಂದು ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಜಿಲ್ಲಾ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ , ಬಿಸಿಎಂ ಅಧಿಕಾರಿಗಳು ಮತ್ತು ಪರಿಶಿಷ್ಟ ಪಂಗಡ ಇಲಾಖೆ ನಿಲಯ ಪಾಲಕರ ಜೊತೆ ಸಭೆಯಲ್ಲಿ ಮಾತನಾಡಿದರು. ಕೂಡ್ಲಿಗಿ […]
೩೭೦ರೂಪಾಯಿ ಚಿಕನ್ ಬಿರಿಯಾನಿ ಕೊಡ್ಸಿ, ಕಿಸ್ ಕೇಳಿದ ಪುಂಡ

ಹೆಣ್ಣಿನ ದೇಹಕ್ಕೆ ಇಲ್ಲದ ಮೌಲ್ಯ ಚಿಕನ್ ಬಿರಿಯಾನಿಗೆ ಇದೆ ಅಂತೆ ಕಣ್ರಿ, ಹೌದು ಯಾಕಪ್ಪಾ ಈ ವಿಚಾರ ಈಗ ಎನ್ನುತ್ತೀರಾ? ಕಾರಣ ಇಲ್ಲಿದೆ ನೋಡಿ. ಇತ್ತೀಚಿಗೆ ಹಿಂದಿ ಕಾರ್ಯಕ್ರಮದ ಕಾಮಿಡಿ ತುಣುಕೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಆ ವಿಡಿಯೋ ವಿಚಾರ ಏನು ಅಂದ್ರೆ ಕಾಮಿಡಿ ಹೆಸರಿನಲ್ಲಿ ಕಾಲು ಎಳೆಯುವುದು. ಹೌದು ವಿಡಿಯೋಂದರಲ್ಲಿ ಯುವಕನೊಬ್ಬ ಹೇಳುತ್ತಾನೆ. ನಾನು ನನ್ನ ಗೆಳತಿ ಹೊಟೇಲ್ ಹೋಗಿರುತ್ತೇವೆ ಆಗ ನಾನು ಅವಳಿಗೆ ೩೭೦ ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸುತ್ತೇನೆ […]
ಬಿ.ಜೆಡ್.ಜಮೀರ್ ಅಹಮದ್ ರವರಿಗೆ ಉಪ ಮುಖ್ಯಮಂತ್ರಿ ಮಾಡಿ : ಮುಸ್ಲಿಂ ಸಮುದಾಯದ ಒತ್ತಾಯ

ವಿ ಜಯನಗರ ಜಿಲ್ಲೆ ಕೂಡ್ಲಿಗಿ : ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರ್ , ಮಂತ್ರಿ ಮಂಡಲದಲ್ಲಿ ಬಿ.ಜೆ.ಡಿ. ಜಮೀರ್ ಅಹಮದ್ ಖಾನ್ ರವರಿಗೆ. ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿಕೊಡ , ಕೂಡ್ಲಿಗಿ ಸಮಸ್ತ ಮುಸ್ಲೀಂ ಭಾಂಧವರ ಪರವಾಗಿ. ಮುಸ್ಲೀಂ ಸಮಾಜದ ಸಂಸ್ಥೆ , ಹಾಗೂ ವಿವಿದ ಸಮುದಾಯಗಳ ಸಂಸ್ಥೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರಲ್ಲಿ ಹಾಗೂ ರಾಜ್ಯ ನಾಯಕರಲ್ಲಿ. ಮತ್ತು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಲ್ಲಿ ಮನವಿ ಮಾಡಿದ್ದಾರೆ. ಜೂನ್ 6 ರಂದು ಪಟ್ಟಣ ಹೊರವಲಯದ , ಇಸ್ಮಾಯಿಲ್ ಸಾಬ್ ರವರ ತೋಟದ […]
ವೈದ್ಯರ ದಕ್ಷತೆಯಿಂದ ಉತ್ತಮ ಆರೋಗ್ಯ ಸೇವೆ ಸಿಗುವುದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಶ್ರೀರಂಗಪಟ್ಟಣ ಶ್ರೀರಂಗನಾಯಕಿ ಸಮಾಜ ಮತ್ತು ಐಕ್ಯ ಅಲಯನ್ಸ್ ಸಂಸ್ಥೆ ವತಿಯಿಂದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಹೂ ನೀಡಲಾಯಿತು. ಉತ್ತಮ ಆರೋಗ್ಯ ಸೇವೆ ಸಿಗುವುದು ವೈದ್ಯರ ದಕ್ಷತೆಯಿಂದ ಮಾತ್ರವಲ್ಲ, ಸಿಬ್ಬಂದಿಯ ಕಾಳಜಿಯಿಂದಲೂ ಸಹ ಸಾಧ್ಯ. ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ ತಂಡ ಇದಕ್ಕೆ ನಿದರ್ಶನ. ಉತ್ತಮ ವೈದ್ಯಕೀಯ ಸೇವೆ ಒದಗಿಸುವುದರ ಜೊತೆಗೆ ಆಸ್ಪತ್ರೆಯ ಸ್ವಚ್ಛತೆಯನ್ನು ಅಚ್ಚುಕಟ್ಟಾಗಿ ಪಾಲಿಸಿರುವುದಕ್ಕಾಗಿ ಸ್ಥಳೀಯರಾದ ನಮಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿ ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ಹಾಗೂ ಲೆನಿನ್ ಸಂಸ್ಥೆ ಸಂಸ್ಥಾಪಕಿ […]
ನೊಂದ ಯುವಕರಿಗೆ ಕನ್ನಡ ಪಾಕೆಟ್ ಕಿವಿಮಾತು: ಏನು ಗೊತ್ತಾ? ಇದನ್ನು ಓದಿ..

ಪ್ರಸ್ತುತ ಸಮಾಜದಲ್ಲಿ ನಮ್ಮ ಯುವಕರು ಸಮಸ್ಯೆಗಳ ಸಂಸಾರದಲ್ಲಿ ಕಾರ್ಯನಿರತರಾಗಿದ್ದಾರೆ, ಅವರ ವ್ಯಯಕ್ತಿಕ ಜೀವನದ ಬಗ್ಗೆ ಗಮನವಿಲ್ಲದೆ, ಸಂಪಾದನೆಗಾಗಿ ಹಗಲು ರಾತ್ರಿ ಯೋಚಿಸುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ಏನು? ಇಲ್ಲಿದೆ ನೋಡಿ ಎಲ್ಲರಂತೆ ನಾವು ಸಂತಸದಿಂದ,ಸುಖದಿಂದ ಬದುಕಬೇಕು ಎನ್ನುವ ಅತಿಯಾದ ವ್ಯಾಮೋಹ, ಯಾರೋ ಒಬ್ಬರು ಕಾರ್ ತಂಗೊಂಡ್ರೆ ಆ ರೀತಿಯ ಕಾರ್ ನಾನು ತಗೆದುಕೊಳ್ಳಬೇಕು ಎನ್ನುವಂತೆ. ಈ ರೀತಿ ಸಹ ಬದಲಾಯಿಸಿಕೊಂಡರೆ, ನಮ್ಮ ಬದುಕು ಬಂಗಾರದಂತೆ ಇರುತ್ತದೆ ಅಲ್ಲವೇ? ಹೌದು ಜೀವನ ಕೆಲವೊಮ್ಮೆ ಯಾವ ಕಡೆಗೆ ಕರೆದುಕೊಂಡು ಹೋಗಬೇಕು […]
ಶೀಘ್ರವೇ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಕೆ ಆರಂಭ; ಸಾರಿಗೆ ಸಚಿವ ಭೈರತಿ ಸುರೇಶ್

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವ ಐತಿಹಾಸಿಕ ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಸಾರಿಗೆ ಸಚಿವರಾದ ಬೈರತಿ ಸುರೇಶ್ ಅವರು ಈ ವಿಷಯವನ್ನು ಘೋಷಿಸಿದ್ದಾರೆ. ಈಗಾಗಲೇ ಹಣ ಪಾವತಿ ಮಾಡಿ ಬಸ್ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳಿಗೆ ಆ ಹಣವನ್ನು ವಾಪಸ್ ನೀಡಲಾಗುವುದು ಎಂದೂ ಅವರು ವಿದ್ಯಾರ್ಥಿ ಸಮೂಹಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇದುವರೆಗೆ ವಿದ್ಯಾರ್ಥಿನಿಯರಿಗೆ ಮಾತ್ರ ಉಚಿತ ಬಸ್ […]
2027ರ ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ನಿಗದಿ: ಆಫ್ರಿಕಾ ಖಂಡದಲ್ಲಿ ಜಾಗತಿಕ ಟೂರ್ನಿ!

ದುಬೈ: ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ (ICC ODI World Cup) ಮಹಾಸಮರಕ್ಕೆ ತಾತ್ಕಾಲಿಕ ದಿನಾಂಕಗಳು ನಿಗದಿಯಾಗಿವೆ. ಪ್ರತಿಷ್ಠಿತ ಈ ಟೂರ್ನಿಯು ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ಜಂಟಿಯಾಗಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ದೇಶಗಳಲ್ಲಿ ನಡೆಯಲಿದೆ ಎಂದು ‘ಇಎಸ್‌ಪಿಎನ್ ಕ್ರಿಕ್‌ಇನ್ಫೋ’ ವರದಿ ಮಾಡಿದೆ. ಕಳೆದ ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ (ICC) ಬೋರ್ಡ್ ಸಭೆಯಲ್ಲಿ ಈ ದಿನಾಂಕಗಳ ಕುರಿತು ಸಹಮತ […]
ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯಷ್ಟೇ, ಸ್ಥಗಿತವಿಲ್ಲ: MLC ದಿನೇಶ್ ಗೂಳಿಗೌಡ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯನ್ನು ದುರುಪಯೋಗದಿಂದ ತಡೆದು, ಅರ್ಹರಿಗೆ ಮಾತ್ರ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಪರಿಷ್ಕರಣೆಗೆ ಆಗ್ರಹಿಸಲಾಗಿದೆಯೇ ಹೊರತು, ಯೋಜನೆಯನ್ನು ನಿಲ್ಲಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷದ ವರು ಗೃಹಲಕ್ಷ್ಮಿ ಯೋಜನೆ ಕುರಿತು ಇಲ್ಲದ ಅಪಪ್ರಚಾರಗಳನ್ನು ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು […]
ಉಡಾನ್ ಯೋಜನೆಯಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗ ಸೇರಿಸಿ: ಕೇಂದ್ರ ಸರ್ಕಾರಕ್ಕೆ ಸಚಿವ ಎಂ.ಬಿ.ಪಾಟೀಲ ಪತ್ರ

ಬೆಂಗಳೂರು: ನಷ್ಟದ ಕಾರಣಕ್ಕಾಗಿ ಸದ್ಯಕ್ಕೆ ಸ್ಥಗಿತಗೊಂಡಿರುವ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆಯನ್ನು ಸದ್ಯದಲ್ಲೇ ನಡೆಯಲಿರುವ ಉಡಾನ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸಬೇಕು. ವಿಮಾನಸೇವೆಯ ಪುನಾರಂಭವು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಗತಿಗೆ ನಿರ್ಣಾಯಕವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಈ ಸಂಬಂಧವಾಗಿ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವು 2023ರ ಫೆಬ್ರವರಿಯಲ್ಲಿ ಕಾರ್ಯಾರಂಭ ಮಾಡಿತು. ಇದಾದ ಮೇಲೆ ಇಂಡಿಗೋ ಸಂಸ್ಥೆಯು ಶಿವಮೊಗ್ಗ-ಬೆಂಗಳೂರು ನಡುವೆ […]
ಮುಂಗಾರು ಆರಂಭವಾದ್ರೂ ಮಂಡ್ಯದಲ್ಲಿಲ್ಲ ಮಳೆ: 81 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ!

ಮಂಡ್ಯ: ಮುಂಗಾರು ಮಾರುತಗಳು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದರೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆಯ ಅಭಾವದಿಂದಾಗಿ ಸಕ್ಕರೆ ನಾಡಿನ ಜೀವನಾಡಿ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಒಣಗುತ್ತಿದ್ದು, ಬರಿದಾಗುವ ಹಂತ ತಲುಪಿದೆ. ಜೂನ್ ತಿಂಗಳು ಆರಂಭವಾದರೂ ವರುಣದೇವ ಕೃಪೆ ತೋರದಿರುವುದು ಕೃಷಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ದಾಖಲೆಯ ರಣ ಬಿಸಿಲಿನ ಬೆನ್ನಲ್ಲೇ ಮುಂಗಾರು ಮಳೆಯೂ ಕೈಕೊಟ್ಟಿರುವುದರಿಂದ ಜಲಾಶಯದ ಒಳಹರಿವು ಸಂಪೂರ್ಣವಾಗಿ ಕುಸಿದಿದೆ. ಸದ್ಯ ಹನಿ ಹನಿಯಾಗಿ ನೀರು ಖಾಲಿಯಾಗುತ್ತಿರುವುದು ರೈತರ ನಿದ್ದೆ ಗೆಡಿಸಿದೆ. ಬಂಡೆಗಳು, […]