‘ಇನ್ಶೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ’: ಪ್ರಯೋಗಾತ್ಮಕ ಯೋಜನೆಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ!

ನವದೆಹಲಿ: ದೇಶದ ರಸ್ತೆಗಳಲ್ಲಿ ಸಿಂಧುವಾದ ‘ಥರ್ಡ್ ಪಾರ್ಟಿ’ ವಿಮೆ ಇಲ್ಲದೆ ಚಲಿಸುವ ವಾಹನಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ವಿಮೆ ರಹಿತ ವಾಹನಗಳಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪೂರೈಕೆಯನ್ನು ತಡೆಯುವ ‘ಪ್ರಯೋಗಾತ್ಮಕ ಯೋಜನೆ’ಯನ್ನು (Pilot Project) ತಕ್ಷಣವೇ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಹಾಗೂ ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠವು ಈ ಪ್ರಮುಖ ನಿರ್ದೇಶನ ನೀಡಿದೆ. ಯೋಜನೆ ಹೇಗೆ ಕೆಲಸ ಮಾಡಲಿದೆ? ಕಟ್ಟುನಿಟ್ಟಿನ […]

ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು: ಡಾಬರ್ ಉತ್ಪನ್ನಗಳ ಮಾರಾಟಕ್ಕೆ ನಿಷೇಧಿಸಿದ FSSAI!

ನವದೆಹಲಿ: ತನ್ನ ಉತ್ಪನ್ನಗಳು ‘100 ಪ್ರತಿಶತ ಪರಿಶುದ್ಧ’ ಹಾಗೂ ‘ಸಂಪೂರ್ಣ ನ್ಯಾಚುರಲ್’ ಎಂದು ಜಾಹೀರಾತು ನೀಡಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದ ಪ್ರಮುಖ ಎಫ್‌ಎಂಸಿಜಿ ಸಂಸ್ಥೆ ‘ಡಾಬರ್ ಇಂಡಿಯಾ’ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ನಿಯಮಬಾಹಿರವಾಗಿ ಇಂತಹ ಲೇಬಲ್‌ಗಳನ್ನು ಬಳಸಿ ಮಾರಾಟ ಮಾಡುವುದನ್ನು ತಕ್ಷಣದಿಂದಲೇ ತಡೆಹಿಡಿಯುವಂತೆ ಆದೇಶಿಸಿದೆ. ಯಾವೆಲ್ಲಾ ಉತ್ಪನ್ನಗಳ ಮೇಲೆ ಕ್ರಮ? ಡಾಬರ್ ಸಂಸ್ಥೆಯು ತನ್ನ ಜೇನುತುಪ್ಪ, ಹಸುವಿನ ತುಪ್ಪ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಆಪಲ್ ಸೈಡರ್ ವಿನೆಗರ್, ಎಳನೀರು […]

ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಮದ್ರಾಸ್ ಹೈಕೋರ್ಟ್‌ ಆದೇಶ

ಚೆನ್ನೈ: ನಟಿ ತ್ರಿಶಾ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆ ಪೊಲೀಸರ ವಶಕ್ಕೆ ಪಡೆದಿದ್ದ ಡಿಎಂಕೆ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರನ್ನು ಇಂದೇ ಬಿಡುಗಡೆ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ. ಪ್ರಕರಣದ ಹಿನ್ನೆಲೆ: ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿಷಯವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದಾಗ, ನೆರೆದಿದ್ದ ಸಾರ್ವಜನಿಕರ ಪೈಕಿ ಕೆಲವರು ‘ತ್ರಿಶಾ ತ್ರಿಶಾ’ ಎಂದು ಘೋಷಣೆ ಕೂಗಿದ್ದರು. ಈ ವೇಳೆ […]

ಸಿಎಂ ಭೇಟಿ ಬಳಿಕ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಶಾಸಕ ಗೋಪಾಲಕೃಷ್ಣ ಬೇಳೂರು

ಬೆಂಗಳೂರು: ಸಿಎಂ ನೀಡಿದ ಈ ಖಡಕ್ ಎಚ್ಚರಿಕೆ ಬೆನ್ನಲ್ಲೇ ಕೈಪಾಳಯದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡು, ಆಗಸ್ಟ್ 4ರ ಮಂಗಳವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಹೇಳಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಶಾಸಕರ ಅಸಮಾಧಾನ ಶಮನ ಮಾಡಲು ತಮ್ಮದೇ ಹಳೆಯ ಉದಾಹರಣೆ ನೀಡಿದ ಡಿ.ಕೆ. ಶಿವಕುಮಾರ್, “ಹಿಂದೆ ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆ ವೇಳೆ ನನಗೂ […]

ಮಂತ್ರಿಗಿರಿ ಸಿಗದಿದ್ದಕ್ಕೆ ರಾಜೀನಾಮೆ ಬೆದರಿಕೆಯೊಡ್ಡಿದ ಶಾಸಕರಿಗೆ ಈ ಶಾಕ್ ಕೊಟ್ಟ ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್‌ ಅಂಗಳದಲ್ಲಿ ಅಸಮಾಧಾನದ ಪರ್ವ ಆರಂಭವಾಗಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಂಗಾಲಾಗಿರುವ ಹಲವು ಹಿರಿಯ ಶಾಸಕರು ಬಹಿರಂಗವಾಗಿಯೇ ತಮ್ಮ ಆಕ್ರೋಶ ಹೊರಹಾಕುತ್ತಿದ್ದು, ಕೆಲವರಂತೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ರವಾನಿಸಿದ್ದಾರೆ. ಆದರೆ, ಪಕ್ಷದೊಳಗಿನ ಈ ಶಾಸಕರ ಬಂಡಾಯಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದು, “ಯಾರಾದರೂ ರಾಜೀನಾಮೆ ನೀಡಿದರೆ ತಕ್ಷಣವೇ ಅಂಗೀಕರಿಸಲಾಗುವುದು” ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ರಾಜೀನಾಮೆ ನೀಡಿದರೆ ತಕ್ಷಣವೇ ಅಂಗೀಕಾರ: […]

Clouded Leopard Day: ಕಾಡಿನಿಂದ ಊರಿಗೆ ಬಂದ ಕ್ಲೌಡೆಡ್ ಚಿರತೆ – “ಇಂದು ಕ್ಲೌಡೆಡ್ ಚಿರತೆ ದಿನ”

ನಮ್ಮ ಪೂರ್ವಜರು ಹೇಳುತ್ತಿದ್ದರು – “ಕಾಡು ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ”. ಆದರೆ ಇತ್ತೀಚಿನ ದಿನಗಳಲ್ಲಿ ಕಾಡು ಕುಗ್ಗಿ, ಕಾಡಿನ ರಾಜರುಗಳು ನೇರವಾಗಿ ನಮ್ಮ ಊರುಗಳ ಬೀದಿಗೆ ಇಳಿದು ಬರುತ್ತಿದ್ದಾರೆ. ಅದರಲ್ಲೂ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಕ್ಲೌಡೆಡ್ ಚಿರತೆಯಾಗಿದೆ (Clouded Leopard). ಕ್ಲೌಡೆಡ್ ಚಿರತೆಯ ಬಗ್ಗೆ ತಿಳಿಯುವುದಾದರೆ,ಹುಲಿ ಮತ್ತು ಚಿರತೆಯ ನಡುವಿನ ಸುಂದರ ಸೇತುವೆಯಂತೆ ಕಾಣುವ ಈ ಪ್ರಾಣಿ ಭಾರತದ ಈಶಾನ್ಯ ರಾಜ್ಯಗಳು, ಪಶ್ಚಿಮ ಘಟ್ಟ ಮತ್ತು ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ವಾಸಿಸುತ್ತದೆ. ದೇಹದ ಮೇಲೆ ಮೋಡದ ಆಕಾರದ […]

MC Sudhakar: ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಮನ್ನಣೆ ಸಿಕ್ಕಿಲ್ಲ – ಡಿಕೆಶಿ ವಿರುದ್ಧ ಸುಧಾಕರ್ ಗರಂ

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿರುವ ಬೆನ್ನಲ್ಲೇ ಮಾಜಿ ಸಚಿವ ಎಂಸಿ ಸುಧಾಕರ್ ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ ಆಂತರಿಕ ಅಸಮಾಧಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹೈಕಮಾಂಡ್ ನಡೆಗೆ ಮಾಜಿ ಸಚಿವ ಎಂಸಿ ಸುಧಾಕರ್ ಭಾರೀ ಅಸಮಾಧಾನಗೊಂಡಿದ್ದಾರೆ. ಸಿಎಂ ಹೆಸರನ್ನು ನೇರವಾಗಿ ಉಲ್ಲೇಖಿಸದೇ “ಸರ್ಕಾರದ ಮುಖ್ಯಸ್ಥರು” ಎಂದು ವಾಗ್ದಾಳಿ ನಡೆಸಿದ ಅವರು, ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ […]

D.K Shivakumar: ಸಿದ್ದರಾಮಯ್ಯ ಅವರಿಗೆ ಯಾವ ಅಸಮಾಧಾನವೂ ಇಲ್ಲ : ಸಿಎಂ ಡಿಕೆಶಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಇದ್ದಿದ್ದರಿಂದ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಕಾರಣಕ್ಕೆ ಅವರು ಮನೆಯಲ್ಲಿದ್ದು,ಪ್ರಮಾಣ ವಚನಕ್ಕೆ ಬಂದಿಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವೇಳೆ, ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿ ಅದಲು-ಬದಲು ವಿಚಾರವಾಗಿ, ಹೈಕಮಾಂಡ್ ಕಳಿಸಿದ ಪಟ್ಟಿಯಂತೆ ಸ್ಥಾನ ಸಿಕ್ಕಿದೆ. ತಾಂತ್ರಿಕ ಸಮಸ್ಯೆಯಾಗಿ ಗಾಯತ್ರಿ ಶಾಂತೇಗೌಡರನ್ನು ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರಾಜಕೀಯ ಹೇಳಿಕೆಗಳನ್ನು ಅವರು ನೀಡಿರಲಿಲ್ಲ. ಹೀಗಿದ್ದರೂ ಮೊದಲ ಸಂಪುಟ […]

Actress Ramya: ಕೆಲವರಿಗೆ ಮೋದಿ ದೇವರಂತಿದ್ದಾರೆ, ಈ ಕಾರಣಕ್ಕೆ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ- ಕಂಗನಾ ವಿರುದ್ಧ ಸಿಡಿದೆದ್ದ ರಮ್ಯಾ

ನವದೆಹಲಿ: ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸಂಸದೆ, ನಟಿ ರಮ್ಯಾ ಗುಡುಗಿದ್ದಾರೆ ಹೌದು ಮೋದಿ ವಿಚಾರಕ್ಕೆ ಬಂದರೆ ಸಾಕು ನಟಿ ಕಂಗನಾ ರಣಾವತ್ ರಿಯಾಕ್ಟ್‌ ಆಗುತ್ತಲೆ ಇರುತ್ತಾರೆ. ಮೊನ್ನೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಯುವಕರು ಧರಣಿ ನಡೆಸಿದ್ದರು. ಈ ವಿಚಾರಕ್ಕೆ ನಟಿ ಕಂಗನಾ ರಣಾವತ್ ಟಾಂಗ್‌ ಕೊಟ್ಟಿದ್ದರು. ಇದರ ಬೆನ್ನಲೇ ನಟಿ ಕಂಗನಾ ರಣಾವತ್ ವಿರುದ್ಧ ಕೆಲವು ನಟ-ನಟಿಯರು ಮಾತಿನ ಛಾಟಿ ಬಿಸಿದ್ದಾರೆ. ಗೌರವದ ಬಗ್ಗೆ ಉಪದೇಶ ನೀಡುವ ಮೊದಲು ತಮ್ಮ ಹಿಂದಿನ ಹೇಳಿಕೆ ನೆನಪಿಸಿಕೊಳ್ಳಬೇಕು […]

ಅಮೆರಿಕ-ಇರಾನ್ ನಡುವೆ ಮತ್ತೆ ಶಾಂತಿ ಮಾತುಕತೆ ಆರಂಭ: ಇರಾನ್‌ ಮುಂದಿರೋದು ಎರಡೇ ಆಯ್ಕೆ ಎಂದ ಟ್ರಂಪ್‌

ವಾಷಿಂಗ್ಟನ್‌: ಸಾಕಷ್ಟು ದಿನಗಳಿಂದ ಅಮೆರಿಕ ಮತ್ತು ಇರಾನ್‌ ನಡುವೆ ಯುದ್ಧ ಆರಂಭವಾಗಿತ್ತು ಇನ್ನೇನು ಯುದ್ಧ ಶಾಂತಿಯತ್ತ ಸಾಗುತ್ತದೆ ಎನ್ನುವಷ್ಟರಲ್ಲಿಯೇ ಯುದ್ಧ ಮತ್ತೆ ಆರಂಭವಾಗುತ್ತಿತ್ತು. ಆದರೆ ಈಗ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ಮತ್ತೆ ಆರಂಭಗೊಳ್ಳಲಿದ್ದು, ಇರಾನ್ ಮೇಲಿನ ದಾಳಿಗಳನ್ನು ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇಕಡಾ 5 ಕ್ಕೂ ಹೆಚ್ಚು ದಿಢೀರ್ ಕುಸಿತ ಕಂಡಿದ್ದು, ಹಾರ್ಮುಜ್ ಜಲಸಂಧಿ ತೆರೆಯುವ ಭರವಸೆಯಿಂದ ಭಾರತೀಯ ಷೇರು […]