ನಾನು ೨ ಬಾರಿ ಸಾಲಮನ್ನಾ ಮಾಡಿದಾಗ ಮೋದಿ, ಮನಮೋಹನ್ ಸಿಂಗ್ ಬಳಿ ಹಣ ಕೊಡಿ ಅಂತ ಕೇಳಿದ್ನಾ?: ಹೆಚ್‌ಡಿಕೆ

ಬೆಂಗಳೂರು: ಡಿಕೆ ಶಿವಕುಮಾರ್‌ ವಿರುದ್ಧ ಹೆಚ್‌.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್‌ ಅವರು ಮನಸ್ಸು ಮಾಡಿದ್ರೆ, ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಇತ್ತೀಚೆಗೆ ಬಹಳ ಬದಲಾವಣೆ ಆಗಿರೋ ರೀತಿ ತೋರಿಸ್ತಾ ಇದ್ದಾರೆ. ಅದು ಕಾರ್ಯ ರೂಪಕ್ಕೆ ಇಲ್ಲಿವರೆಗೂ ಹಲವಾರು ರೀತಿ ಸಂಪಾದನೆ ಮಾಡಿರೋ ಹಣವನ್ನ ಜನರ ಪರವಾಗಿ ಕೊಟ್ಟರೆ 2028ಕ್ಕೂ, ಮುಂದೆಯೂ ನಾನೇ ಸಿಎಂ ಅಂತ ಹೇಳ್ತಾ ಇದ್ದಾರೆ. ಇದು ಮಾಡಿದ್ರೆ ಅದೂ ಆಗಬಹುದು ಎಂದು ಭವಿಷ್ಯ ನುಡಿದರು

ಬೆಂಗಳೂರು ಸುತ್ತಮುತ್ತ ಸಾವಿರಾರು ಕೋಟಿ ಆಸ್ತಿ ನುಂಗಲು ಹೊರಟಿದ್ದಾರೆ. ʻನೈಸ್ʼ ಹೆಸರಿನಲ್ಲಿ ಸಾವಿರಾರು ಕೋಟಿ ನುಂಗೋಕೆ ಹೊರಟಿದ್ದಾರೆ. ಮನಸ್ಸು ಮಾಡಿದ್ರೆ ಡಿಕೆಶಿ ತಮ್ಮ ಕೈಯಿಂದಲೇ ಸಾಲ ಮನ್ನಾ ಮಾಡಬಹುದು. ವೈಯಕ್ತಿಕವಾಗಿಯೇ ಸಾಲ ಮನ್ನಾ ಮಾಡಬಹುದು ಎಂದರು.

ಇನ್ನು ಸಾಲಮನ್ನಾಗೆ ಮೋದಿ ಸಹಕಾರ ಬೇಕು ಎಂದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಎರಡು ಬಾರಿ ಸಾಲಮನ್ನಾ ಮಾಡಿದಾಗ ಮೋದಿ, ಮನಮೋಹನ್ ಸಿಂಗ್ ಅವರ ಬಳಿ ಹಣ ಕೊಡಿ ಅಂತ ಕೇಳಿದ್ನಾ? ನಮ್ಮ ತೆರಿಗೆ ಹಣದಿಂದ ಸಾಲಮನ್ನಾ ಮಾಡಿದ್ದೇನೆ. ಪೊಳ್ಳು ಘೋಷಣೆಗಳನ್ನ ಸಿಎಂ ಮೊದಲು ಬಿಡಲಿ. ಎಷ್ಟು ಕೆಲಸ ಆಗುತ್ತೋ ಅಷ್ಟು ಸಾಲ ಮಾಡಿ ಎಂದು ಹೇಳಿದ್ದಾರೆ.

ಸಿಎಂ ಅವರು ಕಸ್ತೂರಿ ರಂಗನ್ ವರದಿ ಮತ್ತು ಬರಗಾಲದ ಬಗ್ಗೆ ಅಧಿವೇಶನ ಅಂತ ಹೇಳ್ತಾ ಪ್ರಚಾರ ಮಾಡಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು ಅಂತ ಎಲ್ಲರ ನಿಲುವು ಇದೆ. ನಮ್ಮ ಪಕ್ಷದ ನಿಲುವು ಇದೆ. ಒಂದು ಧ್ವನಿಯಾಗಿ ಈ ವಿಚಾರದಲ್ಲಿ ನಾವು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಇನ್ನೂ ಸೋಮವಾರದಿಂದ ವಿಶೇಷ ಕ್ಯಾಬಿನೆಟ್ ವಿಚಾರವಾಗಿ ಮಾತನಾಡಿ, ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಚರ್ಚೆ ಆಗಲಿ ಸಂತೋಷ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಎಲ್ಲಾ ಪಕ್ಷಗಳ ಧ್ವನಿ ಒಂದೇ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ ಎಲ್ಲಾ ರೈತರು, ಜನರು ವರದಿ ಜಾರಿ ಬೇಡ ಅಂತ ಹೇಳ್ತಾ ಇದ್ದಾರೆ. ಅನೇಕ ವರ್ಷಗಳಿಂದ ಹೋರಾಟ ಮಾಡ್ತಾ ಇದ್ದಾರೆ ಎಂದರು.

ಡಿಕೆ ಶಿವಕುಮಾರ್ ಅವರು ಮನಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು. ರೈತರು ಸಾಲಮನ್ನಾ ಆಗಬೇಕು ಅಂತ ಹೇಳ್ತಿದ್ದಾರೆ. ಸಿಎಂ ಕೂಡಾ ʻʻಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲಿ ಸಾಲ ಮನ್ನಾ ಆಗಿದೆ. ನಾನು ಸಾಲಮನ್ನಾ ಮಾಡಿಲ್ಲ ಅಂದ್ರೆ 2028 ಚುನಾವಣೆಗೆ ಕಷ್ಟ ಆಗುತ್ತೆ ಅಂತ ಹೀಗಾಗಿ ದುಡ್ಡು ಹೊಂದಿಸಿʼʼ ಅಂತ ಹೇಳ್ತಾರೆ. ಡಿಕೆ ಶಿವಕುಮಾರ್ ಮನಸು ಮಾಡಿದ್ರೆ ಸಾಲ ಮನ್ನಾ ಮಾಡೋಕೆ ಆರ್ಥಿಕ ಇಲಾಖೆ ಬೇಕಿಲ್ಲ ಎಂದು ಕುಟುಕಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others