ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ : ಉದ್ಯೋಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ, ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಅಭಿವೃದ್ಧಿಯಾಗುತ್ತಲೇ ಇದೆ, ಆದರೆ ನಿರುದ್ಯೋಗದ ಕೊರತೆ ಯುವ ಮನಸ್ಸನ್ನು ಕಿನ್ನತೆಯತ್ತ ಸೆಳೆಯುತ್ತಿದೆ ಕಳಿಸುತ್ತಿದೆ. ಈ ಸಮಸ್ಯೆ ಇಂದು-ನಾಳೆ ಬಗೆಹರಿಯುತ್ತದೆ ಎನ್ನುವ ಭರದಲ್ಲಿ ನಮ್ಮ ಯುವ ಜನತೆ ಇದ್ದಾರೆ. ಇದರ ಬೆನ್ನಲ್ಲೇ , ರಾಜ್ಯದಲ್ಲಿ ಯುವಕರ ಉದ್ಯೋಗಾವಕಾಶ ಮತ್ತು ಗ್ರಾಮೀಣ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಹೊಸತು ಹೆಜ್ಜೆ ಇಟ್ಟಿದೆ. ಈ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಲ್ಲೇ ಪ್ರಥಮವಾದ ಖಾಸಗಿ ಉದ್ಯೋಗ ವಿನಿಮಯ ಕೇಂದ್ರದ ಸ್ಥಾಪನೆ ಪ್ರಮುಖವಾಗಿದೆ. ಖಾಸಗಿ ವಲಯದಲ್ಲಿ ಉದ್ಯೋಗಾಕಾಂಕ್ಷಿಗಳು ಈ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಹಾಗೆಯೇ, ಉದ್ಯೋಗದಾತ ಕಂಪನಿಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನುರಿತ ಮಾನವ ಸಂಪನ್ಮೂಲವನ್ನು ಇಲ್ಲಿಂದ ಪಡೆದುಕೊಳ್ಳಬಹುದು ಎಂದು ರಾಜ್ಯದ ಸಿಎಂ ತಿಳಿಸಿದ್ದಾರೆ.

ಇದು ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಸೇತುವೆಯಾಗಲಿದೆ. ಅದೇ ರೀತಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹೊಸ ಸಿಎಸ್‌ಆರ್ ನೀತಿ ಜಾರಿಗೆ ತರಲಾಗುತ್ತಿದೆ. ಸಿಟಿಗಳು ಮತ್ತು ಟೌನ್‌ಗಳಿಗೆ ವಲಸೆ ಹೋಗುವುದನ್ನು ತಡೆಯಲು ಹಳ್ಳಿಗಳಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ.

2% ಸಿಎಸ್‌ಆರ್ ಕಡ್ಡಾಯವಾಗಿ ಖರ್ಚು ಮಾಡುವ ಕಂಪನಿಗಳು, ಸರ್ಕಾರ ನೀಡುವ ಮಾದರಿಯ ಪ್ರಕಾರ ಶಾಲೆ ನಿರ್ಮಿಸಿ ಸೌಲಭ್ಯಗಳನ್ನು ಒದಗಿಸಬಹುದು. ಈ ಶಾಲೆಗಳು ಸರ್ಕಾರಿ ಶಾಲೆಗಳಾಗಿಯೇ ಉಳಿಯಲಿವೆ. ಈ ಉಪಕ್ರಮಗಳು ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿವೆ ಎಂದು ಸಿಎಂ ಡಿಕೆಶಿ ತಿಳಿದ್ದಾರೆ.

ಡಿಕೆಶಿಯವರು ಈ ನಿಲವು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬಿರುತ್ತದೆ, ಮತ್ತು ಸಿಎಸ್‌ಆರ್ ನೀತಿ ಯಾವ ದಿನ ಜಾರಿಗೆಯಾಗುತ್ತದೆ, ಒಂದು ವೇಳೆ ಆದರೂ ಸಹ ಅದರ ಕಾರ್ಯ ಎಷ್ಟರಮಟ್ಟಿಗೆ ಪರಿಣತಿ ಪಡೆದುಕೊಳ್ಳುತ್ತದೆ ಎನ್ನುವುದು ಕಾದುನೋಡಬೇಕಿದೆ.

Share it :

Leave a Reply

Your email address will not be published. Required fields are marked *