ಹತ್ಯೆಗೆ ಇರಾನ್‌ ಸಂಚು : ವಿಚಾರ ತಿಳಿದು ಸಿಟ್ಟಾದ ಟ್ರಂಪ್ – ಮುಂದೇನಾಯ್ತು? ಇಲ್ಲಿದೆ ನೋಡಿ

ವಾಷಿಂಗ್ಟನ್: ಅಮೆರಿಕ, ಇರಾನ್ ನಡುವಿನ ಜಟಾಪಟಿ ಜಗತ್ತಿನ ನಿದ್ದೆಗೆಡಿಸಿದ್ದು, ಇನ್ನೇನು ಯುದ್ಧ ನಿಂತೇ ಹೋಯ್ತು ಎನ್ನುವಷ್ಟರಲ್ಲಿ ಹೊಸ ಖ್ಯಾತೆ ರೂಪುಗೊಳ್ಳತ್ತದೆ. ಹೀಗಿರುವಾಗ ಅಮೆರಿಕ, ಇರಾನ್ ಮಧ್ಯೆ ಯುದ್ಧ ಈಗ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ತನ್ನ ಹತ್ಯೆಗೆ ಇರಾನ್‌ ಸಂಚು ರೂಪಿಸಿದ ವಿಚಾರ ತಿಳಿದು ಸಿಟ್ಟಾಗಿರುವ ಟ್ರಂಪ್ ಇರಾನ್ ವಿರುದ್ಧ ಯುದ್ಧದ ತೀವ್ರ ಎಚ್ಚರಿಕೆ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಇರಾನ್‌ನಿಂದ ತಮಗೆ ಎದುರಾಗಿರುವ ಜೀವ ಬೆದರಿಕೆಯ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಅಮೆರಿಕದ ಮಿಲಿಟರಿ ಪಡೆಗಳಿಗೆ ಈಗಾಗಲೇ ಸ್ಪಷ್ಟ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅಮೆರಿಕ ಮಿಲಿಟರಿ ಪಡೆಗಳು ಇರಾನ್‌ನ ಇಂಚಿಂಚು ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಸನ್ನದ್ಧವಾಗಿವೆ. ಈ ಮಿಲಿಟರಿ ಕಾರ್ಯಾಚರಣೆಯ ಆದೇಶವು ಸದ್ಯಕ್ಕೆ ಒಂದು ವರ್ಷದ ಅವಧಿಗೆ ಜಾರಿಯಲ್ಲಿದ್ದು, ಅಗತ್ಯ ಬಿದ್ದರೆ ಇದನ್ನು ವಿಸ್ತರಿಸಲಾಗುವುದು ಎಂದು ಎಂದು ಟ್ರಂಪ್ ಇರಾನ್‌ಗೆ ನೇರ ಸಂದೇಶ ರವಾನಿಸಿದ್ದಾರೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮೇಲೆ ದಾಳಿ ಮಾಡಲು 1,000 ಕ್ಷಿಪಣಿಗಳು ಲಾಕ್ ಅಂಡ್ ಲೋಡ್ ಆಗಿ ಸಿದ್ಧವಾಗಿವೆ. ʻನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲೂ, “ನನಗೆ ಏನಾದರೂ ಸಂಭವಿಸಿದರೆ ಇರಾನ್ ಹಿಂದೆಂದೂ ಕಾಣದ ಮಟ್ಟಿಗೆ ಬಲವಾದ ಬಾಂಬ್ ದಾಳಿ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಹಾಲಿ ಅಧ್ಯಕ್ಷರನ್ನು, ಅಂದರೆ ನನ್ನನ್ನು ಹತ್ಯೆ ಮಾಡಲು ಅಥವಾ ಹತ್ಯೆಗೆ ಇರಾನ್ ಸರ್ಕಾರ ಯತ್ನಿಸಿದರೆ, ಈ ಸಾವಿರ ಕ್ಷಿಪಣಿಗಳ ಬೆನ್ನಲ್ಲೇ ಇನ್ನೂ ಸಾವಿರಾರು ಕ್ಷಿಪಣಿಗಳು ಇರಾನ್ ಮೇಲೆ ಬೀಳಲಿವೆ ಎಂದು ಸಿಡಿದ್ದೆದ್ದಿದ್ದಾರೆ,

ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸಲಾಗುವುದು ಎಂದು ಇರಾನ್ ಸರ್ಕಾರವು ಶನಿವಾರದೊಳಗೆ ಬಹಿರಂಗವಾಗಿ ಘೋಷಿಸಬೇಕು ಎಂದು ಅಮೆರಿಕ ಬಿಗಿಪಟ್ಟು ಹಿಡಿದಿದೆ.

ತಮ್ಮ ಸಾಮಾಜಿಕ ಮಾಧ್ಯಮ ಜಾಲತಾಣ ಟ್ರುತ್ ಸೋಶಿಯಲ್ ನಲ್ಲಿ ಗುಡುಗಿರುವ ಡೊನಾಲ್ಡ್ ಟ್ರಂಪ್, ಇರಾನ್ ದೇಶದ ಮೇಲೆ ದಾಳಿ ಮಾಡಲು ಅಮೆರಿಕದ 1,000 ಕ್ಷಿಪಣಿಗಳು ಸಕಲ ಸಿದ್ಧತೆಗಳೊಂದಿಗೆ ಗುರಿ ಇಟ್ಟು ನಿಂತಿವೆ ಎಂದು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others