ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಿತಿಗೆ ವಿವಿಧ ವಿಭಾಗಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯದ ಅಧ್ಯಕ್ಷರು ಹಾಗೂ ಕೇಂದ್ರದ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಹಾಗೂ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್ಎಂ ರಮೇಶ್ ಗೌಡರು ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರಗಳನ್ನು ಹಸ್ತಾಂತರ ಮಾಡಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮುಂದಿನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿದರು.

ವಿವಿಧ ವಿಭಾಗಗಳ ಅಧ್ಯಕ್ಷರು:

ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶೈಲಾ ಸಂತೋಜಿ ರಾವ್, ಯುವ ಜನತಾದಳ ಅಧ್ಯಕ್ಷರಾಗಿ ಆರ್. ಸ್ಯಾಮಿಯಲ್, ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಎಂ ಗೋಪಾಲ್, ಸೇವಾದ ವಿಭಾಗದ ಅಧ್ಯಕ್ಷರಾಗಿ ಪಿ.ಮಹೇಶ್, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷರಾಗಿ ವಿ.ಜನಾರ್ದನ್, ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷರಾಗಿ ಫಣಿರಾಜ್ ಹಿರಿಯಣ್ಣ ಗೌಡ, ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಫ್ರೋಜ್ ಬೇಗ್, ಕ್ರೈಸ್ತ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಚಂದ್ರನ್ ಚಾರ್ಲ್ಸ್, ಕಾನೂನು ವಿಭಾಗದ ಅಧ್ಯಕ್ಷರಾಗಿ ಆದಿತ್ಯ ಎನ್.ರಾಜ್, ಈ ವಿಭಾಗದ ಕಾರ್ಯಧ್ಯಕ್ಷರನ್ನಾಗಿ ವಿನಯ್ ಕುಮಾರ್, ಮಹಾಪ್ರದಾನ ಕಾರ್ಯದರ್ಶಿಯಾಗಿ ಚೇತನ್ ಸೂರ್ಯ ಮತ್ತು ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ಡಾ. ಎಂ.ಭರದ್ವಾಜ್ ಅವರನ್ನು ನೇಮಕ ಮಾಡಲಾಗಿದೆ.

ಗ್ರೇಟರ್ ಬೆಂಗಳೂರು ಜೆಡಿಎಸ್ ನೂತನ ಪದಾಧಿಕಾರಿಗಳು:

ಕಾರ್ಯಧ್ಯಕ್ಷರಾಗಿ ಟಿ.ಆರ್. ತುಳಸಿ ರಾಮ್, ಮಹಾಪ್ರದಾನ ಕಾರ್ಯದರ್ಶಿಯಾಗಿ ಎಸ್ ರಮೇಶ್, ಹಿರಿಯ ಉಪಾಧ್ಯಕ್ಷರುಗಳಾಗಿ ಬಿ.ಅಂದಾನಪ್ಪ, ಕೆ.ಬಾಗೇಗೌಡ, ಹೆಚ್.ಎಂ. ರಾಮಯ್ಯ ಮತ್ತು ಶ್ರೀರಾಮೇಗೌಡ ಎನ್ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಬಿ. ಭದ್ರೆಗೌಡ, ಹೆಚ್.ಜಿ. ಉಮೇಶ್, ಲಕ್ಷ್ಮೀನಾರಾಯಣ್, ಸುರೇಶ್ ನಾಗವಾರ, ಎ.ರುದ್ರಪ್ಪ, ತಾರಾ ಲೋಕೇಶ್, ಎಂ. ಚಂದ್ರೇಗೌಡ ಅವರುಗಳನ್ನು; ಪ್ರಧಾನ ಕಾರ್ಯದರ್ಶಿಗಳಾಗಿ ಆರ್. ಅಭಿಷೇಕ್, ಶ್ವೇತಾ ಯಾದವ್, ಕೆ.ಬಿ. ಶ್ರೀನಿವಾಸ್, ಹೆಚ್.ಪಿ. ರತ್ನ ರಾಜೇಗೌಡ ಅವರನ್ನು ನೇಮಿಸಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡರು ಆದೇಶ ಪತ್ರಗಳನ್ನು ಪಕ್ಷದ ಕಚೇರಿಯಲ್ಲಿ ಹಸ್ತಾಂತರ ಮಾಡಿದರು

ಸಂಘಟನೆ ಮತ್ತು ಗ್ರೇಟರ್ ಬೆಂಗಳೂರು ಚುನಾವಣೆಗೆ ತಯಾರಾಗಿ:

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಚುನಾವಣೆಗೆ ಬಿರುಸಿನ ತಯಾರಿ ನಡೆಸುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ಹೀಗಾಗಿ ನೂತನ ಪದಾಧಿಕಾರಿಗಳು ಹಾಗೂ ನಗರದ ಎಲ್ಲಾ ಮುಖಂಡರು, ಕಾರ್ಯಕರ್ತರು ಸಮರ್ಪಣಾ ಭಾವದಿಂದ ಪಕ್ಷದ ಗೆಲುವಿಗೆ ದುಡಿಮೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.

ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು; ವಾರ್ಡ್ ಹಾಗೂ ಮತಗಟ್ಟೆ ಮಟ್ಟದಲ್ಲಿ ಪದಾಧಿಕಾರಿಗಳು ಅತ್ಯಂತ ಉತ್ತಮವಾಗಿ ಪಕ್ಷವನ್ನು ಸಂಘಟಿಸಬೇಕು. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಕೆಲ ಸೂಚನೆಗಳನ್ನು ನೀಡಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಸ್ಪಷ್ಟವಾಗಿ ಆದೇಶ ಮಾಡಿದ್ದಾರೆ ಎಂದರು.

Share it :

Leave a Reply

Your email address will not be published. Required fields are marked *