ಗೃಹಲಕ್ಷ್ಮಿಯಲ್ಲಿ ಬಿಗ್ ಚೇಂಜ್? : ಸರ್ವೆ ಮುಗಿಯೋವರೆಗೂ ಅಕೌಂಟ್‌ಗೆ ಹಣ ಬರಲ್ಲ – ಇಲ್ಲಿದೆ ನೋಡಿ ಮಾಹಿತಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮರು-ಪರಿಶೀಲನೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ತಾತ್ಕಾಲಿಕ ಶಾಕ್ ಎದುರಾಗಿರುವುದು ಬೆಳಕಿಗೆ ಬಂದಿದೆ.

ಗೃಹಲಕ್ಷ್ಮೀ ಮರು ಪರಿಶೀಲನೆಗೆ ಸರ್ಕಾರ ನಿರ್ಧರಿಸಿದ್ದು, ಇಂದು (ಆ.31) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಇದರ ಬೆನ್ನಲ್ಲೇ ಶಾಕ್‌ವೊಂದನ್ನು ನೀಡಲಿದೆ. ಮರು ಪರಿಶೀಲನೆಗಾಗಿ ಸರ್ವೆ ಆರಂಭವಾದರೆ ಆ ಸಮಯದಲ್ಲಿ ಫಲಾನುಭವಿಗಳ ಖಾತೆಗೆ ದುಡ್ಡು ಬರೋದು ಡೌಟ್ ಎನ್ನಲಾಗಿದೆ.

ಮನೆ-ಮನೆಗೆ ಭೇಟಿ ನೀಡಿ ಬಯೋಮೆಟ್ರಿಕ್ ಪರಿಶೀಲನೆಅನರ್ಹರು, ಮರಣ ಹೊಂದಿದವರು ಅಥವಾ ವಲಸೆ ಹೋದವರನ್ನು ಪತ್ತೆಹಚ್ಚಲು ಸರ್ಕಾರವು ಹೊಸ ಆದೇಶ ಹೊರಡಿಸಿದೆ.ಆಯಾ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳು ಅಥವಾ ನಿಯೋಜಿತ ಸಿಬ್ಬಂದಿ ಮೂಲಕ ಬಯೋಮೆಟ್ರಿಕ್ ಮತ್ತು ಫೇಶಿಯಲ್ ಅಥೆಂಟಿಕೇಷನ್ (Facial Authentication) ಪರಿಶೀಲನೆ ಕೈಗೊಳ್ಳಲಾಗುವುದು.

ಈ ತನಿಖಾ ಪ್ರಕ್ರಿಯೆ ಮತ್ತು ಸರ್ವೆ ಮುಗಿಯುವವರೆಗೂ ಕೆಲವರಿಗೆ ಹಣ ಬಿಡುಗಡೆ ತಡವಾಗಬಹುದು.2. ಆಧಾರ್ ಕಾರ್ಡ್‌ ಲಿಂಕ್ ಮತ್ತು ಬ್ಯಾಂಕ್ ಖಾತೆ ಸಮಸ್ಯೆಅನೇಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ (Aadhar Seeding) ಅಥವಾ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹಣ ಜಮಾ ಆಗುತ್ತಿಲ್ಲ.ಇತ್ತೀಚಿನ ಐಟಿ ರಿಟರ್ನ್ಸ್ (IT Returns) ಪಾವತಿದಾರರಾಗಿರುವ ಕುಟುಂಬದ ಯಜಮಾನಿಯರನ್ನು ಯೋಜನೆಯಿಂದ ಹೊರಗಿಡಲಾಗುತ್ತಿದೆ.

ತಾಂತ್ರಿಕ ಕಾರಣಗಳಿಂದಾಗಿ ಜುಲೈ ಮತ್ತು ಆಗಸ್ಟ್ ತಿಂಗಳ ಕಂತುಗಳು ವಿಳಂಬವಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಮಾಹಿತಿ ಪ್ರಕಾರ ದಸರಾ ಹಬ್ಬದ ಸಮಯದಲ್ಲಿ ಫಲಾನುಭವಿಗಳ ಖಾತೆಗೆ ಎರಡು ಕಂತುಗಳ ಹಣ ಒಟ್ಟಿಗೆ ಜಮಾ ಆಗುವ ಸಾಧ್ಯತೆ ಇದೆ

ಮುಂದೇನು ಮಾಡಬೇಕು?

ನಿಮ್ಮ ಗೃಹಲಕ್ಷ್ಮಿ ಹಣ ಸ್ಥಗಿತಗೊಳ್ಳಬಾರದು ಎಂದರೆ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಸರ್ಕಾರ ನಡೆಸುವ ಬಯೋಮೆಟ್ರಿಕ್ ಪರಿಶೀಲನೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ. ಯೋಜನೆಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಇಂದು ಗೃಹಲಕ್ಷ್ಮೀ ಮರುಪರಿಶೀಲನೆ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು, ಅದಾದ ಬಳಿಕ ಮೂರು ದಿನದಲ್ಲಿ ಸರ್ವೆ ಆರಂಭವಾಗಲಿದೆ. ಸರ್ವೆ ಆರಂಭವಾಗಿ ಅನರ್ಹರನ್ನ ಪತ್ತೆ ಹಚ್ಚಿದ ಬಳಿಕ ಗೃಹಲಕ್ಷ್ಮೀ ಹಣ ಪಾವತಿ ಆಗಲಿದೆ. ಒಂದು ತಿಂಗಳ ಒಳಗೆ ಸರ್ವೆ ಮುಗಿಸಲು ಸರ್ಕಾರ ಸೂಚನೆ ನೀಡಲಿದ್ದು, ಆದರೆ ಒಂದೇ ತಿಂಗಳಲ್ಲಿ ಮುಗಿಯೋದು ಕಷ್ಟ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others