Santosh Lad : ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ನಮ್ಮ ದೇಶದ ಕ್ಯಾಪಿಟಲ್ ಇನ್‌ಕಮ್ ಕಡಿಮೆ ಇದೆ – ಸಂತೋಷ್ ಲಾಡ್

ಬೆಂಗಳೂರು : ಭಾರತದ ಜಿಡಿಪಿ 7.8% ಬೆಳವಣಿಗೆ ಅನ್ನೋದೆ ಬೋಗಸ್,ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ನಮ್ಮ ದೇಶದ ಕ್ಯಾಪಿಟಲ್ ಇನ್‌ಕಮ್ ಕಡಿಮೆ ಇದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದೇಶಿ ನೇರ ಹೂಡಿಕೆ ಹಣ ದೇಶಕ್ಕೆ ಬರುತ್ತಿಲ್ಲ. ಹೇಗೆ ಲೆಕ್ಕಾಚಾರ ಮಾಡಿದ್ದೀರಿ. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ನಮ್ಮ ದೇಶದ ಕ್ಯಾಪಿಟಲ್ ಇನ್‌ಕಮ್ ಕಡಿಮೆ ಇದೆ. ನಮ್ಮ ಕರೆನ್ಸಿ ವೀಕ್ ಇದೆ ಎಂದು ಅರೋಪ ಮಾಡಿದರು.

ಇವರು ಜಿಡಿಪಿ ಘೋಷಣೆ ಮಾಡಿದ ಕೂಡಲೇ 6 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆ ಹೊರಗೆ ಹೋಗಿದೆ. ಕಳೆದ ಒಂದು ವರ್ಷದಲ್ಲಿ 2.5 ಲಕ್ಷ ಕೋಟಿ ಫಾರಿನ್ ಇನ್ವೆಸ್ಟ್‌ಮೆಂಟ್ ಹೊರಗೆ ಹೋಗಿದೆ ಎಂದರು.

ಚಿನ್ನ ಖರೀದಿ ಮಾಡಬೇಡಿ ಎಂಬ ಮೋದಿ ಕರೆಗೆ ಪ್ರತಿಕ್ರಿಯಿ, ಎಣ್ಣೆ ಕಡಿಮೆ ತಿನ್ನಿ ಬರೀ ಇಂತದ್ದೇ ಹೇಳ್ತಾರೆ. ಸಕ್ಕರೆ ಬಳಕೆ ಕಡಿಮೆ ಮಾಡಿ ಅಂತಾರೆ. ನಾವು ಮೊದಲು ಶುಗರ್ ಆಮದು ಮಾಡುತ್ತಿರಲಿಲ್ಲ. ಬೇರೆಡೆಯಿಂದ ಎಥೆನಾಲ್ ಖರೀದಿಸಬೇಕು. ಅಮೆರಿಕದಿಂದ ಬಿಲಿಯನ್‌ಗಟ್ಟಲೆ ಎಥೆನಾಲ್ ಖರೀದಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು ಏನನ್ನಾದರೂ ಹೇಳಿದರೆ ಮೋದಿ ವಿರುದ್ದ ಮಾತಾಡುತ್ತೀವಿ, ಸುಳ್ಳು ಹೇಳುತ್ತೀವಿ ಅಂತಾರೆ. ನಾವು ಮೋದಿ ವಿರುದ್ದವೇ ಮಾತಾಡಿರಬಹುದು. ಆದರೆ, ವಯಕ್ತಿಕವಾಗಿ ಅಲ್ಲ. 7.8% ಜಿಡಿಪಿ ಅನ್ನೋದೆ ಬೋಗಸ್ ಅಂತ ಕಿಡಿಕಾರಿದರು.

ಬೇರೆ ದೇಶಗಳು ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಲಾಭ ಮಾಡಿಕೊಟ್ಟಿದೆ. 7.8% ಜಿಡಿಪಿ ಇದ್ದರೆ ಸ್ಟಾಕ್ ಎಕ್ಸ್ಚೇಂಜ್ ಜಾಸ್ತಿ ಆಗಬೇಕು ಅಲ್ಲವಾ? ಜಿಡಿಪಿ ಹೆಚ್ಚಳ ಆಗಿರುವುದು ಸುಳ್ಳು , ಏಷ್ಯಾದಲ್ಲಿ ಸೆನ್ಸೆಕ್ಸ್ ಕಡಿಮೆ ಇರೋದು ಭಾರತದ್ದು. ಸ್ಟಾಕ್ ಎಕ್ಸ್ಚೇಂಜ್ ಮೈಸನ್ 3.5 ನಲ್ಲಿ ಇದೆ‌ ಎಂದು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others