ಬೆಂಗಳೂರು: ರಾಜ್ಯಪಾಲರು ವಾಪಸ್ ಕಳುಹಿಸಿದ ಬಿಲ್ ಅನ್ನು ಈ ಕೂಡಲೇ ರದ್ದು ಮಾಡಿ. ರಿಯಲ್ ಎಸ್ಟೇಟ್ ನಿಮ್ಮ ಕನಕಪುರದಲ್ಲಿ ಇಟ್ಟುಕೊಳ್ಳಿ, ಬಿಡದಿಯಲ್ಲಿ ರಿಯಲ್ ಎಸ್ಟೇಟ್ ನಡಿತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
‘WALK IN LALBAGH, WALK FOR LALBAGH’ ಎಂಬ ಘೋಷಣೆಯೊಂದಿಗೆ ಇಂದು ಲಾಲ್‌ಬಾಗ್‌ನಲ್ಲಿ ನಡೆಯುತ್ತಿದ್ದ ಬೃಹತ್ ವಾಕಿಂಗ್ ಅಭಿಯಾನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೈಜೋಡಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್ ಏಜೆಂಟ್ ಸರ್ಕಾರದ ಚುಕ್ಕಾಣಿ ಹಿಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಹೆಬ್ಬಾಳ ಕೆರೆ ಒತ್ತುವರಿ ಮಾಡಿದ್ದಾರೆ. ಇಂದು ಲಾಲ್‌ಬಾಗ್, ಜಿಂಕೆ ಪಾರ್ಕ್, ನಾಳೆ ಎಲ್ಲಾ ಪಾರ್ಕ್‌ಗಳ ಮೇಲೆ ಕೈ ಇಡುತ್ತಾರೆ. ಕೆಂಪೇಗೌಡರು ಕೆರೆ ಕಟ್ಟಿದರು, ಅದನ್ನು ರಿಯಲ್ ಎಸ್ಟೇಟ್ ಮಾಡಿದ್ದಾಯ್ತು. ಬೆಂಗಳೂರು ಇಂದು ಯಾಕೆ ಮುಳುಗುತ್ತದೆ? ಅಂದ್ರೆ ಕೆರೆಗಳನ್ನ ನುಂಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು
ಜನಸಾಮಾನ್ಯರೇ ಅರ್ಥ ಮಾಡಿಕೊಂಡು ಪ್ರತಿಭಟನೆಗೆ ಬಂದಿದ್ದಾರೆ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಬಿಲ್ ವಾಪಸ್ ಮಾಡಿ ಎಂದು ಹೇಳಿದ್ದೆ. ರಾಜ್ಯಪಾಲರು ಬಿಲ್ ವಾಪಸ್ ಮಾಡಿದ್ದಾರೆ. ನಮ್ಮ ರಾಜ್ಯದ ಎಲ್ಲಾ ಪಾರ್ಕ್‌ಗಳನ್ನು ಉಳಿಸಬೇಕು. ಇನ್ನಷ್ಟು ಪಾರ್ಕ್‌ಗಳನ್ನ ವಿಸ್ತಾರ ಮಾಡಬೇಕು. ಸರ್ಕಾರ ಪ್ಲಾನ್ ಮಾಡಬಹುದು, ಆದರೆ ರಾಷ್ಟ್ರಪತಿಗೆ ಕಳಿಸಿದರೂ ಅದನ್ನು ವಾಪಸ್ ಕಳಿಸುವಂತೆ ಮಾಡ್ತೀವಿ ಎಂದು ಹೇಳಿದರು.
ರಾಜ್ಯಪಾಲರು ವಾಪಸ್ ಕಳುಹಿಸಿದ ಬಿಲ್ ಅನ್ನು ಈ ಕೂಡಲೇ ರದ್ದು ಮಾಡಿ. ರಿಯಲ್ ಎಸ್ಟೇಟ್ ನಿಮ್ಮ ಕನಕಪುರದಲ್ಲಿ ಇಟ್ಟುಕೊಳ್ಳಿ, ಬಿಡದಿಯಲ್ಲಿ ರಿಯಲ್ ಎಸ್ಟೇಟ್ ನಡಿತಿದೆ ಎಂದು ಶೋಭಾ ಕರಂದ್ಲಾಜೆ ಟಾಂಗ್ ನೀಡಿದರು.
1975ರಲ್ಲಿ ಕರ್ನಾಟಕದ ಪಾರ್ಕ್‌ಗಳ ಉಳಿವಿಗಾಗಿ ಪಾಸ್ ಆದ ಬಿಲ್‌ಗೆ ತಿದ್ದುಪಡಿ ತಂದಿದ್ದಾರೆ. ಈ ಬಿಲ್‌ನ ಪ್ರಕಾರ ಶೇ.5ರಷ್ಟು ಜಾಗದಲ್ಲಿ ಏನು ಬೇಕಾದರೂ ಮಾಡಬಹುದು. ಬೆಂಗಳೂರಿನ 1.5 ಕೋಟಿ ಜನರಿಗೆ 30 ಸಾವಿರ ಎಕ್ರೆ ಪಾರ್ಕ್‌ಗಳು ಬೇಕು. ಈ ಸರ್ಕಾರ ಕರ್ನಾಟಕದ ಎಲ್ಲಾ ಪಾರ್ಕ್‌ಗಳ ಶೇ.5ರಷ್ಟು ಜಾಗ ಪಡೆಯಲು ಹೊರಟಿದೆ ಎಂದು ಆರೋಪಿಸಿದರು.
ಯಾವುದೇ ಚರ್ಚೆ ಇಲ್ಲದೇ 8 ಬಿಲ್‌ಗಳನ್ನು ಸರ್ಕಾರ ಪಾಸ್ ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.





