ಯಾವ ಅಧಿಕಾರಿ ಮಾತು ಕೇಳಲ್ಲ ನನಗೆ ಹೇಳಿ, ಅವರನ್ನ ಫೈರ್‌ ಮಾಡುತ್ತೇನೆ : ಬಸವರಾಜ ರಾಯರೆಡ್ಡಿ ವಾರ್ನಿಂಗ್‌

ಕೊಪ್ಪಳ: ಯಾವ ಅಧಿಕಾರಿ ಮಾತು ಕೇಳಲ್ಲ ಹೇಳಿ, ಮಾತು ಕೇಳದ ಅಧಿಕಾರಿಗಳನ್ನ ಕೆಲಸದಿಂದ ವಜಾ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಖಡಕ್‌ ಎಚ್ಚರಿಕೆ ನೀಡಿದರು.

ಕೊಪ್ಪಳದ ಗುನ್ನಾಳ ಗ್ರಾಮದಲ್ಲಿ ಮಾತನಾಡಿದ ಯಾವ ಅಧಿಕಾರಿಗಳು ಮಾತು ಕೇಳುವುದಿಲ್ಲ ನನಗೆ ಹೇಳಿ, ಅವರನ್ನ ಫೈರ್‌ ಮಾಡುತ್ತೇನೆ ಎಂದರು. ತಹಶೀಲ್ದಾರ್ ನೀನು ನನ್ನ ಪಿಆರ್‌ಓ ಆಗಿ ಕೆಲಸ ಮಾಡಬೇಕು ಎಂದು ವೇದಿಕೆಯಲ್ಲೇ ನಿಂತು ಸೂಚಿಸಿದರು.

ಪ್ರಕಾಶ್ ನಾಶಿ ಯಲಬುರ್ಗಾ ತಹಶೀಲ್ದಾರ್ ಆಗಿದ್ದಾರೆ. ನಾನು ಫುಲ್ ಬ್ಯುಸಿ ಇರುತ್ತೇನೆ. ಹೀಗಾಗಿ ನೀನು ಪಿಆರ್‌ಓ ರೀತಿ ಕೆಲಸ ಮಾಡಬೇಕು. ಈ ಇಲಾಖೆ ಬಹಳ ಕಾರ್ಯಭಾರದ ಇಲಾಖೆ, 1.52 ಕೋಟಿ ವಿದ್ಯಾರ್ಥಿಗಳು ಓದುತ್ತಾರೆ ಎಂದರು.

96 ವಿಶ್ವವಿದ್ಯಾಲಯಗಳಿವೆ. ಈ ಇಲಾಖೆಯಲ್ಲಿ ಇಲ್ಲಿ ಏನು ಇಲ್ಲ. ಅವರು ಏನು ನಮಗೆ ಕೊಟ್ಟು ಹೋಗುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ನಾನು ಫುಲ್ ಬ್ಯುಸಿ ಇರ್ತೇನೆ. ಡಿಜಿಟಲ್ ಸಿಗ್ನೇಚರ್ ಮಾಡಿ ಲೆಟರ್ ಕೊಟ್ಟುಬಿಡಿ ಎಂದು ಪಿಎಗೆ ಸೂಚಿಸಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಯಾವುದೇ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others