ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು? – ಡಿಕೆಶಿ ವಿರುದ್ಧ ಹೆಚ್‌ಡಿಕೆ ಗರಂ

ಹಾಸನ: ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು? ಆ ಅಶ್ಲೀಲ ಚಿತ್ರ ಎಲ್ಲಿಂದ ಜೈಲೊಳಗೆ ಬಂತು, ಯಾಕೆ ಬಂತು, ಯಾರು ಕೊಟ್ಟವರು? ಸಪ್ಲೈ ಮಾಡುವವರು ಯಾರು? ಎಂದು ಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗಿದ್ದಾರೆ.

ಎರಡು ವರ್ಷದಿಂದ ಆ ಹುಡುಗ (ಪ್ರಜ್ವಲ್‌ ರೇವಣ್ಣ) ಜೈಲಲ್ಲಿದ್ದಾನೆ. ಬಿಡದಿ, ಕೆಪಿಎಸ್‌ಸಿ ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್ ಸಿಕ್ಕಿದೆ. ಈಗ ಹೊಸ ಕತೆ ಕಟ್ಟುತ್ತಿದ್ದಾರೆ ಎಂದು ಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಹೊಳೆನರಸೀಪುರ ತಾಲೂಕಿನ, ಮಾವಿನಕೆರೆಯಲ್ಲಿ ಅವರು ತಮ್ಮ ತಾಯಿ ಸಮಾಧಿಗೆ ನಮಿಸಿ, ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಪ್ರತಿನಿತ್ಯ ಸೀರಿಸ್ ಬಿಡಿಸುತ್ತಿದ್ದಾರೆ, ಯಾಕೆ ಬಿಡುತ್ತಿದ್ದಾರೆ? ಹಿಂದೆ ಏಕೆ ಮಾಡಲಿಲ್ಲ, ಎರಡು ವರ್ಷದಿಂದ ಫೋನ್ ಇಲ್ವಾ ಅವನ ಹತ್ತಿರ? ಈಗ ಬಂತಾ, ಜೈಲಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು? ಆ ಅಶ್ಲೀಲ ಚಿತ್ರ ಎಲ್ಲಿಂದ ಜೈಲೊಳಗೆ ಬಂತು, ಯಾಕೆ ಬಂತು, ಯಾರು ಕೊಟ್ಟವರು? ಸಪ್ಲೈ ಮಾಡುವವರು ಯಾರು, ನಾವು ಮಾಡಿಸಿದ್ವಾ ಎಂದು ಪ್ರಶ್ನಿಸಿದ್ದಾರೆ.

ಬಿಡದಿಗೆ ವಿರೋಧ, ನೈಸ್‌ ಬಗ್ಗೆ ಕೋರ್ಟ್ ಆದೇಶ ಬಂತು, ಅದಕ್ಕೆ ಆ ಹುಡುಗನ ಹೆಸರು ಹೇಳಿ ದೇವೇಗೌಡರ ಕುಟುಂಬದ ಧ್ವನಿ ಮುಚ್ಚಿಸುತ್ತೀರಾ? ನಿಮ್ಮ ಕೈಯಲ್ಲಿ ಬಾಯಿ ಮುಚ್ಚಿಸಲು ಆಗುತ್ತಾ? ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ ಎಂದು ತಿರುಗೇಟು ನೀಡಿದರು.

ನಾವೇ ನಮ್ಮ ಎಂಪಿ ಮಾಡಿದ್ದೇವಲ್ಲ, ಮಂಡ್ಯದಲ್ಲಿ ಅವನು ಈ ಸರ್ಕಾರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ದೇವೇಗೌಡರ ಕುಟುಂಬವನ್ನು ಸರ್ವ ನಾಶ ಮಾಡೋದೆ ಮೊದಲ ಆದ್ಯತೆ ಎಂದು ಹೇಳಿದ್ದಾನೆ. ಡಿ.ಕೆ.ಶಿವಕುಮಾರ್, ಏನೇನು ತರ್ಸಿದ್ರಿ, ಎಲ್ಲಿಂದ ತರಿಸಿದ್ರಿ? 400 ರೇಪ್ ಇದೆಲ್ಲಾ ಕತೆ ತಂದ್ರಿ, ಯಾರಿಗೆ ನ್ಯಾಯ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಕುಟುಂಬದಿಂದ ಅನ್ಯಾಯ ಮಾಡಿದ್ದೇವೆ ಅಲ್ವಾ? ಎಷ್ಟು ಹೆಣ್ಣುಮಕ್ಕಳ ಕುಟುಂಬಗಳನ್ನು ಸರಿ ಮಾಡಿ ಕೊಟ್ಟಿದ್ದೀರಾ? ಆ ಹುಡುಗ ಮಾಡಿದ್ದಾನಲ್ವಾ, ಎಷ್ಟು ಹೆಣ್ಣುಮಕ್ಕಳ ಮಾನ ಕಾಪಾಡಿದ್ದೀರಿ? ಇದಕ್ಕೆಲ್ಲ ಹೆದರಿಕೊಂಡು ಹೋಗಲ್ಲ. ನ್ಯಾಯ, ಸತ್ಯಕ್ಕೆ ತಲೆ ಬಾಗುತ್ತೇನೆ. ತಪ್ಪು ಮಾಡಿದ್ರೆ ತಲೆ ಬಾಗಲು ಸಿದ್ದರಿದ್ದೇವೆ. ನಿಮ್ಮ ತರ ಎಲ್ಲಾ ಬಿಟ್ಟು ದೋಚುವ ಕೆಲಸ ಮಾಡಲ್ಲ. ಎಷ್ಟು ಕುಟುಂಬ ಹಾಳು ಮಾಡಿದ್ದೀರಿ, ಬೇಕಾದಷ್ಟು ಹೇಳಬಲ್ಲೆ ಎಂದು ಸವಾಲು ಹಾಕಿದ್ದಾರೆ.

ಆ ವ್ಯಕ್ತಿನಾ ಅರೆಸ್ಟ್ ಮಾಡಿ ನಾಲ್ಕು ದಿನ ಜೈಲಲ್ಲ ಇಟ್ರಿ, ಯಾಕೆ ಇಟ್ರಿ? ಎರಡು ವರ್ಷ ಇಲ್ಲದೇ ಇದ್ದಿದ್ದು, ಬಿಡದಿ, ಕೆಪಿಎಸ್‌ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್, ಪೆನ್‌ಡ್ರೈವ್ ಇದೆ, ಅದರಲ್ಲಿ ಅಶ್ಲೀಲ ಚಿತ್ರ ಇದೆ ಎಂಬ ವಿಚಾರ ಚರ್ಚೆ ಆಗುತ್ತಿದೆ. ಎರಡು ವರ್ಷದಿಂದ ಆ ಹುಡುಗ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ತೀರ್ಪು ಕೊಟ್ಟಿದೆ, ತೀರ್ಪು ಸ್ವೀಕರಿಸಿದ್ದೇವೆ. ಎರಡು ವರ್ಷ ಇಲ್ಲದೆ ಇದ್ದಿದ್ದು, ಈಗ ಫೋನ್ ಇಟ್ಕಂಡಿದ್ದಾನೆ ಎಂದು ಹೊಸದಾಗಿ ಕಥೆ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others