ಮಾನವೀಯತೆ ಇಲ್ಲದ ರೂಲ್ಸ್‌ ರೂಪಾಯಿಗಾಗಿಯೇ? ಒಂದೊಮ್ಮೆ ಈ ಸ್ಟೋರಿ ಓದಿ

ಪ್ರಸ್ತುತ ನಮ್ಮ ಸಮಾಜದಲ್ಲಿ ಹಣದ ಅಧಿಕಾರ ಅದ್ಧೂರಿಯಾಗಿ ಆಡಳಿತ ನಡೆಸುತ್ತಿದೆ. ಹಣದ ಮುಂದೆ ಜನಸಮಾನ್ಯರ ಜೀವನ ಬೀದಿಪಾಲಾಗುತ್ತಿದೆ, ಮಾನವೀಯತೆ ಮರೆಯಾಗಿ ಕಾಸು ಕೈಲಾಸ ಎನ್ನುವ ಮನಸ್ಥಿಗೆ ಬಂದು ತಲುಪಿದೆ. ಹೌದು ಇತ್ತಿಚಿಗೆ ನಮ್ಮ ಕಣ್ಣು ಮುಂದೆ ಕೆಲ ಕೆಟ್ಟ ಘಟನೆಗಳನ್ನು ನೋಡುತ್ತೇವೆ ಆ ದೃಶ್ಯಗಳು ತಪ್ಪು ಎಂದು ತಿಳಿದರೂ ಸಹ ನಮ್ಮ ಕೈಯಲ್ಲಿ ಏನು ಮಾಡುವುದಕ್ಕೆ ಆಗುವುದಿಲ್ಲ ಸನ್ನಿವೇಶವನ್ನು ನೋಡಿಯೂ, ಸಹ ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುತ್ತೇವೆ..

ತಪ್ಪು-ಸರಿ ಅರಿವಿನ ಜ್ಞಾನ ನಮಗಿದ್ದರೂ, ಕೆಲ ವೇಳೆ ಬಾಯಿಗೆ ಬೀಗಹಾಕಿಕೊಳ್ಳಬೇಕಾಗುತ್ತದೆ. ಮತ್ತೊಂದು ಕಡೆ ಹಲವು ಅಧಿಕಾರಿಗಳಂತೂ ಹಣಕ್ಕಾಗಿ, ಅಮಾಯಿಕರನ್ನು ಬಡೆದು ಬಾಯಿಗೆ ಹಾಕಿಕೊಳ್ಳುತ್ತಾರೆ. ಸರ್ಕಾರ, ನಿಯಮದ ಹೆಸರಿನಲ್ಲಿ ಬಡಜನರ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ದೃಶ್ಯ ನಮ್ಮ ಕಣ್ಣು ಮುಂದೆ ಎದುರಾಗಿದೆ. ಸದ್ಯಕ್ಕೆ ಸಮಾಜಿಕ ಜಾಲತಾಣದಲ್ಲಿ ಮನ ಕರಗುವ ವಿಡಿಯೋಂದು ಭಾರೀ ಸದ್ದು ಮಾಡುತ್ತಿದ್ದು, ಆ ವಿಡಿಯೋ ವಿಚಾರ ಏನಪ್ಪಾ ಅಂದ್ರೆ ಇಲ್ಲಿದೆ ನೋಡಿ..

ಯುವತಿಯೊಬ್ಬಳು ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರೆ ರೈಲು ಟಿಕೆಟ್ ಪರೀಕ್ಷಕ ಎಂಟ್ರಿ ಆಗಿದ್ದಾರೆ. ಇದೇ ಸಮಯದಲ್ಲಿ ಯುವತಿಯ ಹತ್ತಿರ ಟಿಕೆಟ್ ಇಲ್ಲವೆಂದು ಅರಿತಾಗ, ಆಕೆಯನ್ನು ತರಾಟೆಗೆ ತಗೆದುಕೊಂಡು, ರೈಲಿನಿಂದ ಇಳಿಯುವಂತೆ ಹೇಳಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ, ಇದೆಷ್ಟೇಅಲ್ಲದೇ ಇದೇ ಸಮಯದಲ್ಲಿ ಭಾರೀ ಮಳೆ ಸುರಿಯುತ್ತಿದೆ ಸ್ಥಿತಿಯಲ್ಲಿಯೂ ಯುವತಿ ಬ್ಯಾಗ್‌ ತಗೆದುಕೊಂಡು ರೈಲ್‌ನಿಂದ ಕೆಳಗೆ ಇಳಿಯುತ್ತಿದ್ದಾಳೆ.

ಈ ದೃಶ್ಯವನ್ನು ಕಂಡು ಸಹ ಪ್ರಯಾಣಿಕರು ವಿಡಿಯೋ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಚಾರ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದ್ದು, ಅನೇಕ ಬಳಕೆದಾರರ ಸನ್ನಿವೇಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತು ಇದರ ಬಗ್ಗೆ ಸರ್ಕಾರ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬಹುದೇ ಎಂದು ಪ್ರಶ್ನಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಟಿಕೆಟ್ ಪರಿಶೀಲನೆಯ ಹಿಂದಿನ ಸಂದರ್ಭಗಳು ಸ್ಪಷ್ಟವಾಗಿಲ್ಲವಾದರೂ, ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗಮನಾರ್ಹ ಗಮನ ಸೆಳೆದಿವೆ. ವೈರಲ್ ವೀಡಿಯೋ ಕುರಿತು ಅಧಿಕಾರಿಗಳು ಈ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಎನ್ನಲಾಗುತ್ತಿದೆ, ಈ ಮನಕರಗುವ ದೃಶ್ಯ ಕಂಡು ಮುದ್ದಾದ ಮನಸ್ಸುಗಳು ಬೇಜಾರ್ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಹಣವಿದ್ದರೆ ಮಾತ್ರ ಐಷಾರಾಮಿ ಜೀವನ, ಜನರಲ್‌ ರೈಲ್‌ನಲ್ಲಿ ಪ್ರಯಾಣಿಸುವವರ ಸ್ಥಿತಿಯನ್ನು ನಾವು ಕಂಡಿದ್ದೇವೆ. ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುವುದಕ್ಕೂ, ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಾಸು ಇದ್ದರೆ, ಖಾಸಗಿ ಬಸ್‌, ಕೈಲಾಸ ಎಂಬಂತಾಗಿದೆ. ಎಲ್ಲಾ ವಿಷಯದಲ್ಲಿಯೂ ರೂಲ್ಸ್ ಇರುವುದು ಬಡವರಿಗೆ ಮಾತ್ರ ಎನಿಸುತ್ತಿದೆ. ಆ ರೈಲು ಟಿಕೆಟ್ ಪರೀಕ್ಷಕ ತನ್ನ ಕೆಲಸವನ್ನು ತಾನು ಮಾಡಿದ ಆದರೇ, ಆ ಹೆಣ್ಣು ಮಗಳ ಹತ್ತಿರ ದುಡ್ಡು ಇಲ್ಲ ತಪ್ಪೇ? ಪರಿಸ್ಥಿತಿ ಪರಿಹಾರಕ್ಕೆ ಪೈಸಾ ಸೂಕ್ತವೇ? ಬದಲಾಗಬೇಕಿದೆ ಬಡವರಿಗಾಗಿ ಸರ್ಕಾರದ ಮನಸ್ಸು, ಸರ್ಕಾರ ಕಷ್ಟಗಳಿಗೆ ಕಾರಣವಾಗಬೇಕಿದೆ ಸಹ ಸಮಾಜದ ಕೊರಿಕೆಯಾಗಿದೆ.

Share it :

Leave a Reply

Your email address will not be published. Required fields are marked *