ಝೆಲೆನ್‌ಸ್ಕಿ ರಷ್ಯಾದಲ್ಲಿ ಡೀಸೆಲ್ ಇಂಧನ ಘಟಕಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು : ಡೊನಾಲ್ಡ್ ಟ್ರಂಪ್

ಡೂನ್‌ಬೆಗ್: ಝೆಲೆನ್‌ಸ್ಕಿ ರಷ್ಯಾದಲ್ಲಿ ಡೀಸೆಲ್ ಇಂಧನ ಘಟಕಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು. ಬೇರೆ ಸೇನಾ ನೆಲೆಗಳ ಮೇಲೆ ದಾಳಿ ಮಾಡಲಿ, ಆದರೆ ತೈಲ ಸಂಸ್ಕರಣಾಗಾರಗಳನ್ನಲ್ಲ. ಇದು ಜಗತ್ತಿಗೆ ತೀವ್ರ ಹಾನಿ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಷ್ಯಾದ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮೋದಿ ಮತ್ತು ಕ್ಸಿ […]

ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಶಾಪ ತಟ್ಟಿದೆ : ಬಸನಗೌಡ ಪಾಟೀಲ್ ಯತ್ನಾಳ್

ಬಾಗಲಕೋಟೆ: ಸತೀಶ್ ಜಾರಕಿಹೊಳಿ ಅವರು ಎರಡ್ಮೂರು ತಪ್ಪು ಮಾಡಿದ್ರು‌. ಸಿದ್ದರಾಮಯ್ಯ ನವ್ರಿಗೆ ಕೈ ಕೊಟ್ಟಿದ್ದು ತಪ್ಪು. ಸಿದ್ದರಾಮಯ್ಯನವ್ರದು ದುರ್ದೈವ ಅಂದ್ರೆ ಎಷ್ಟು ನಂಬಿದ್ರಲ್ಲಾ ಅಷ್ಟು ಕೈ ಕೊಟ್ರು. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಮೂವರೂ ಕೈ ಕೊಟ್ರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಜಾರಿ ನಿರ್ದೇಶನಾಲಯ(ಇಡಿ)ದ ದಾಳಿಗೆ ಒಳಗಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಶಾಪ ತಟ್ಟಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ […]

ಗಣೇಶ ಚತುರ್ಥಿ : ಬದಲಾಗುತ್ತಿರುವ ಆಚರಣೆ, ಬದಲಾಗದ ಭಕ್ತಿ – ಗಣೇಶನ ಆರಾಧನೆಯಲ್ಲಿದೆ ಬದುಕಿನ ಸಂದೇಶ

ಇಂದು ಗಣೇಶ ಚತುರ್ಥಿ. ಮನೆ ಮನೆಯಲ್ಲಿ, ಬೀದಿ ಬೀದಿಯಲ್ಲಿ ಗಣಪತಿ ಬಂದಿದ್ದಾನೆ. ಆದರೆ ಗಮನಿಸಿ, ಹಬ್ಬ ಆಚರಿಸುವ ರೀತಿ ಬದಲಾಗಿದೆ, ಆದರೆ ಭಕ್ತಿ ಮಾತ್ರ ಬದಲಾಗಿಲ್ಲ. ಇದರಲ್ಲೇ ನಮ್ಮ ಬದುಕಿನ ದೊಡ್ಡ ಪಾಠ ಅಡಗಿದೆ. ಹಿಂದೆಲ್ಲ ಹೇಗಿತ್ತು ನೆನಪಿಸಿಕೊಳ್ಳಿ. ನಮ್ಮ ಅಜ್ಜ ಮಣ್ಣಿನ ಗಣಪತಿ ಮಾಡುತ್ತಿದ್ದರು. ಕೆರೆ ಮಣ್ಣು, ಅರಿಶಿನ, ಕುಂಕುಮ. ಎರಡು ಅಡಿ ಎತ್ತರ, ಪೂಜೆ ಮಾಡಿ ಮನೆಯ ಹಿಂದಿನ ಬಾವಿಯಲ್ಲೇ ವಿಸರ್ಜನೆ. ಈಗ ಹೇಗಿದೆ? 20 ಅಡಿ ಗಣಪತಿ, ಪಿ.ಓ.ಪಿ, ರಾಸಾಯನಿಕ ಬಣ್ಣ, ಡಿ.ಜೆ […]

ಭಾರತದ ವಿದೇಶಾಂಗ ಮತ್ತು ರಕ್ಷಣಾ ನೀತಿಗಳಿಗೆ ಈಗ ಬಲವಾದ ಬೆನ್ನೆಲುಬು ಸಿಕ್ಕಿದೆ : ಅಮಿತ್ ಶಾ

ಮುಂಬೈ: ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ವಿರುದ್ಧ `ಶೂನ್ಯ ಸಹಿಷ್ಣುತೆ’ ನೀತಿಯನ್ನು ದೇಶ ತೋರಿಸಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿರುವ 21 ರಾಜ್ಯಗಳಲ್ಲೂ 2029ರೊಳಗೆ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸರ್ಕಾರದ ಭದ್ರತಾ ನೀತಿಯನ್ನೂ ಅಮಿತ್ ಶಾ ಇದೇ ವೇಳೆ ಪ್ರಸ್ತಾಪಿಸಿದರು. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಮತ್ತು ಆಪರೇಷನ್ […]

ನಾನು ಇಡಿಗೆ ಯಾಕೆ ಸವಾಲು ಹಾಕಲಿ? ಅದು ಒಂದು ತನಿಖಾ ಸಂಸ್ಥೆ : ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯ ಕುರಿತು ತಾವು ನೀಡಿದ ಹೇಳಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ. ತಾವು ಕೇಂದ್ರ ತನಿಖಾ ಸಂಸ್ಥೆಗೆ ಎಂದಿಗೂ ಸವಾಲು ಹಾಕಿಲ್ಲ ಎಂದು ಹೇಳಿದ ಅವರು, ಆ ರೀತಿಯ ವ್ಯಾಖ್ಯಾನ ತಪ್ಪಾಗಿದೆ ಎಂದು ಹೇಳಿದ ಅವರು, ಪ್ರಭಾವ ಬೀರಲು ಹೇಳಿಕೆಗಳನ್ನು ಬದಲಾಯಿಸುವ ಬದಲು, “ನಾನು ವಾಸ್ತವವಾಗಿ ಏನು ಹೇಳಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಮಾಧ್ಯಮಗಳಿಗೆ ಹೇಳಿದರು. ಇಡಿಗೆ ಸವಾಲು ಹಾಕಿದ್ದಾರೆ ಎಂದು ಬಿಂಬಿಸುವ […]

ಖಾಸಗಿ ಶಾಲೆಗಳು ಮುಂದಿಟ್ಟಿರುವ ವಿವಿಧ ಬೇಡಿಕೆಗಳನ್ನೂ ಪರಿಶೀಲಿಸಲಾಗುತ್ತಿದೆ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಖಾಸಗಿ ಶಾಲೆಗಳಿಗೆ ಸರ್ಕಾರಿ ಪಠ್ಯಪುಸ್ತಕಗಳನ್ನು ಒದಗಿಸಬೇಕು ಎಂಬ ಬೇಡಿಕೆಯೂ ಪರಿಶೀಲನೆಯಲ್ಲಿದೆ. ಅಗತ್ಯ ಹಣ ಪಾವತಿಸಲು ಖಾಸಗಿ ಶಾಲೆಗಳು ಸಿದ್ಧವಿದ್ದು, ಈ ಬೇಡಿಕೆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೂ ಸರ್ಕಾರಿ ನೌಕರರಿಗೆ ನೀಡಲಾಗುವ ಮನೆ ಬಾಡಿಗೆ ಭತ್ಯೆ ವಿಸ್ತರಿಸುವ ಬೇಡಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದ […]

ಯಾವುದೇ ಬಿಕ್ಕಟ್ಟು ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬ್ರಿಕ್ಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಸವಾಲುಗಳನ್ನು ಎದುರಿಸಲು ಮತ್ತು ವಿಶೇಷವಾಗಿ ಜಾಗತಿಕ ದಕ್ಷಿಣದಾದ್ಯಂತ ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸಲು ಬ್ರಿಕ್ಸ್ ಒಂದಾಗಬೇಕು ಎಂದಿದ್ದಾರೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಅವು ಸಾಮಾನ್ಯ ಜನರ ಜೀವನದ ಮೇಲೆ ಬೀರುವ ಪ್ರಭಾವದ ಬಗ್ಗೆಯೂ ಮೋದಿ ಮಾತನಾಡಿದರು. ಜಗತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳನ್ನು ಕಾಣುತ್ತಿದೆ ಮತ್ತು […]

ಗೌರಿ-ಗಣೇಶ ಹಬ್ಬದ ಆಚರಣೆ ಮತ್ತು ಮಹತ್ವ – ಇಲ್ಲಿದೆ ನೋಡಿ

ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಅದರಷ್ಟು ಅದೃಷ್ಟ ಎಲ್ಲಿಯೂ ಸಿಗುವುದಿಲ್ಲ ಕಾರಣ ಹೆಣ್ಣು ಮಕ್ಕಳು ಮನೆಗೆ ಶಾಂತಿ ಮತ್ತು ಹಬ್ಬಕ್ಕೆ ಪ್ರಮುಖ ಪಾತ್ರ ಹೆಣ್ಣು ಮಕ್ಕಳದ್ದೇ ಆಗಿರುತ್ತದೆ. ಹೆಚ್ಚಾಗಿ ಗೌರಿ ಹಬ್ಬವನ್ನು ಕರ್ನಾಟಕದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುವಂತಹ ಹಬ್ಬವಾಗಿದೆ. ಗೌರಿ ಹಬ್ಬವು ಗಣೇಶ ಚತುರ್ಥಿಯೊಂದಿಗೆ ಸಂಬಂಧವನ್ನು ಹೊಂದಿರುವ ಹಬ್ಬವಾಗಿದೆ. ಗೌರಿ ಹಬ್ಬವು ಪಾರ್ವತಿ ದೇವಿಗೆ ಸಮರ್ಪಿತವಾದ ಗೌರಿ ದೇವಿಯ ರೂಪವನ್ನು ಪೂಜಿಸುವಂತಹ ದಿನವಾಗಿದೆ. ಮಹಿಳೆಯರು ಸುಖಮಯ ದಾಂಪತ್ಯ ಜೀವನಕ್ಕಾಗಿ ಗೌರಿ ದೇವಿಯ ಆಶೀರ್ವಾದವನ್ನು ಪಡೆಯಲು ‘ಸ್ವರ್ಣ ಗೌರಿ ವ್ರತ’ವನ್ನು […]

ಅಮೆರಿಕ ಮತ್ತು ಇಸ್ರೇಲ್‌ನ ಒತ್ತಡಕ್ಕೆ ಇರಾನ್ ಎಂದಿಗೂ ಶರಣಾಗುವುದಿಲ್ಲ – ಮಸೂದ್ ಪೆಜೆಶ್ಕಿಯನ್

ಅಮೆರಿಕ ಮತ್ತು ಇಸ್ರೇಲ್‌ನ ಒತ್ತಡಕ್ಕೆ ಇರಾನ್ ಎಂದಿಗೂ ಶರಣಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ತಿಳಿಸಿದ್ದಾರೆ. ಇರಾನ್‌ನ ಸೇನಾ ಪಡೆಗಳನ್ನು ಗುರಿಯಾಗಿಸುವ ಬದಲು ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಮತ್ತು ಜನರ ಜೀವನೋಪಾಯಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್‌ನ ಒತ್ತಡಕ್ಕೆ ಇರಾನ್ ಎಂದಿಗೂ ಶರಣಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹೇಳಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ವ್ಯಾಪಕ ಅಂತರರಾಷ್ಟ್ರೀಯ ನಿಗಾ ಇರಿಸಲಾಗಿತ್ತು ಮತ್ತು ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ […]

ಲಂಡನ್ ಕಾರ್ ರೇಸ್ – ಅಜಿತ್ ಕುಮಾರ್ ಸಿಎಂ ವಿಜಯ್ ಅಪ್ಪುಗೆ – ಕುಚಿಕು,ಕುಚಿಕು ಫೋಟೋ ಫುಲ್ ವೈರಲ್

ಯುನೈಟೆಡ್ ಕಿಂಗ್ಡಮ್ ಪ್ರವಾಸದಲ್ಲಿರುವ ತಮಿಳುನಾಡಿನ ಸಿಎಂ ಮತ್ತು ನಟ ವಿಜಯ್ ಅವರು ಅಜಿತ್ ಕುಮಾರ್ ಭಾಗವಹಿಸಿದ್ದ ‘ಮೈಕೆಲಿನ್ ಲೆ ಮ್ಯಾನ್ಸ್ ಕಪ್’ ಕಾರು ರೇಸ್‌ಗೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು. ಸಿಲ್ವರ್‌ಸ್ಟೋನ್‌ನಲ್ಲಿ ಎರಡು ಗಂಟೆಗಳ ಸ್ಪರ್ಧೆಗೆ ‘ದಳಪತಿ’ ವಿಜಯ್ ಹಸಿರು ನಿಶಾನೆ ತೋರಿಸಿದ್ದಾರೆ. ಕಾರುಗಳು ವೇಗವಾಗಿ ಟ್ರ್ಯಾಕ್‌ಗೆ ಇಳಿಯುತ್ತಿದ್ದಂತೆ ವಿಜಯ್ ರೇಸ್‌ಗೆ ಚಾಲನೆ ನೀಡುತ್ತಿರುವ ವಿಡಿಯೋವನ್ನು ‘ಮಿಚೆಲಿನ್ ಲೆ ಮಾನ್ಸ್ ಕಪ್’ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ ವಿಶೇಷ ಅತಿಥಿ […]