ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಇನ್ನಿಲ್ಲ

ಮೈಸೂರು: ಖ್ಯಾತ ಹಿನ್ನಲೆ ಗಾಯಕಿ, ಗಾನ ಕೋಗಿಲೆ ಎಸ್.ಜಾನಕಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಎಸ್. ಜಾನಕಿ (ಶಿಷ್ಟಾಲ ಜಾನಕಿ) ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು. ತಮ್ಮ ಸುಮಧುರ ಧ್ವನಿ ಹಾಗೂ ವಿಶಿಷ್ಟ ಗಾಯನ ಶೈಲಿಯ ಮೂಲಕ ಕೋಟ್ಯಂತರ ರಸಿಕರ ಹೃದಯ ಗೆದ್ದಿರುವ ಅವರು, ದಕ್ಷಿಣ ಭಾರತದ ಪ್ರಮುಖ ಗಾನಕೋಗಿಲೆಯಾಗಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಮಾತ್ರವಲ್ಲದೆ ಜಪಾನಿ, ಅರೇಬಿಕ್, ಲ್ಯಾಟಿನ್ ನಂತಹ ವಿದೇಶಿ ಭಾಷೆಗಳನ್ನೂ ಒಳಗೊಂಡು ಒಟ್ಟು […]
KEAಯಿಂದ 4,723 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ವಿವಿಧ ಇಲಾಖೆಗಳ ಒಟ್ಟು 4,723 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ ಸೇರಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಯ 572, ಸರ್ವೆ ಇಲಾಖೆಯ 750 ಭೂಮಾಪಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುವ ಶಾಲೆಗಳ 1,087 ಶಿಕ್ಷಕರು ಹಾಗೂ 2,314 ಕೆಎಸ್ಆರ್ ಪಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ […]
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರಿಗೆ ಅನುಕೂಲವಾಗಲು ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ: DCM ಡಾ. ಜಿ. ಪರಮೇಶ್ವರ್

ಬೆಂಗಳೂರು : ಚುನಾವಣಾ ಆಯೋಗದವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ 13 ದಾಖಲೆಯನ್ನು ಕೇಳುತ್ತಾರೆ. ಅದರಲ್ಲಿ ʼನೀವು ಸ್ವಂತ ಮನೆಯಲ್ಲಿ ಇದ್ದೀರಾ?ʼ ಎಂಬ ಪ್ರಶ್ನೆಯೂ ಇದೆ. ಹಾಗಾಗಿ ನಾವು ಖಾಯಂ ನಿವಾಸ ಪ್ರಮಾಣಪತ್ರವನ್ನು ನೀಡಲು ಕ್ರಮ ವಹಿಸುವುದಾಗಿ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. ಇಂದು ತಮ್ಮ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈವರೆಗೆ ಕೇಂದ್ರ ಸರ್ಕಾರ ಯಾವುದೇ ಪ್ರಮಾಣಪತ್ರಗಳನ್ನು ನೀಡಿಲ್ಲ. ಜಾತಿ ಪ್ರಮಾಣಪತ್ರವನ್ನು ಕೂಡ ರಾಜ್ಯ ಸರ್ಕಾರವೇ ನೀಡಿದೆ. ನಾವು ಆಧಾರ್ ಕಾರ್ಡ್ ಮತ್ತು ಅಗತ್ಯ […]
ವಿಯೆಟ್ನಾಂನಲ್ಲಿ ಭೀಕರ ದುರಂತ: ಪ್ರವಾಸಿಗರ ಬೋಟ್ ಮುಳುಗಿ 15 ಭಾರತೀಯರು ಸಾವು

ಹನೋಯಿ: ದಕ್ಷಿಣ ವಿಯೆಟ್ನಾಂನ ಪ್ರಸಿದ್ಧ ‘ಫೂ ಕ್ವೋಕ್’ (Phu Quoc) ದ್ವೀಪದ ಬಳಿ ಶನಿವಾರ 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ಕು ಮಂದಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ ಬೋಟ್ (ವೇಗದ ದೋಣಿ) ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಕನಿಷ್ಠ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ವಿಯೆಟ್ನಾಂನ ಮಾಧ್ಯಮ ಸಂಸ್ಥೆ ‘ವಿಎನ್‌ಎಕ್ಸ್‌ಪ್ರೆಸ್ ಇಂಟರ್ನ್ಯಾಷನಲ್’ ವರದಿ ಮಾಡಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಅಪಘಾತಕ್ಕೆ ರಫ್ ಸೀ (ರೌದ್ರಾವತಾರ ತಳೆದ ಸಮುದ್ರ) ಕಾರಣ: ಅಪಘಾತ […]
ವಿದ್ಯಾರ್ಥಿನಿ ಆತ್ಮಹ*ತ್ಯೆ ಕೇಸ್: ಮುಖ್ಯ ಶಿಕ್ಷಕಿ ಸೇರಿ ನಾಲ್ವರ ವಿರುದ್ಧ FIR ದಾಖಲು

ಬೆಂಗಳೂರು: ಶಾಲಾ ಶಿಕ್ಷಕಿಯರು ನೀಡಿದ ಮಾನಸಿಕ ಕಿರುಕುಳಕ್ಕೆ ಬೇಸತ್ತು ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿಯಾಗಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕಿ ಸೇರಿದಂತೆ ನಾಲ್ವರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಮುಖ್ಯಶಿಕ್ಷಕಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು ಜುಲೈ 9 ರಂದು ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಈ […]
ಮಾಜಿ ಸಚಿವ ಜಮೀರ್ ಅಹಮದ್ ಗೆ ಲೋಕಾಯುಕ್ತ ಸಂಕಷ್ಟ!

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಜಮೀರ್ ಅಹ್ಮದ್ ವಿರುದ್ಧ ಕಾನೂನು ಕ್ರಮ ಜರುಗಿಸಲು (ಪ್ರಾಸಿಕ್ಯೂಷನ್) ಅನುಮತಿ ನೀಡುವಂತೆ ಲೋಕಾಯುಕ್ತ ಸಂಸ್ಥೆಯು ರಾಜ್ಯಪಾಲರಿಗೆ ಅಧಿಕೃತವಾಗಿ ಮನವಿ ಮಾಡಿದೆ. 25 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆ ಆರೋಪ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಆದಾಯದ ಮೂಲಗಳಿಗಿಂತ 25 ಕೋಟಿ ರೂಪಾಯಿಗೂ ಅಧಿಕ ಮೊತ್ತದ […]
ಮಾನವ ನಾಗರಿಕತೆಯಷ್ಟೇ ಪುಟ್ ಪಾತ್‌ಗೆ ಮೌಲ್ಯವಿದೆಯಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸಾಮಾನ್ಯವಾಗಿ ಮಾನವ ಎಷ್ಟೆಲ್ಲಾ ಇತಿಹಾಸ ಹೊಂದಿದ್ದಾನೋ? ಆತನಷ್ಟೇ ಚರಿತ್ರೆಯನ್ನು ಪುಟ್ ಪಾತ್ ಸಹ ಹೊಂದಿದೆ. ಹೌದು ಪುಟ್ ಪಾತ್ ಎಂದರೆ, ಅದಕ್ಕೊಂದು ಮಹತ್ವವಿದ್ದು, ಗತಿಸಿ ಹೊದ ಕಾಲಕ್ಕೆ ತಿರುವು ನೀಡುತ್ತದೆ. ಈ ಮೊದಲು ನಮ್ಮ ದೇಶವನ್ನು ಆಂಗ್ಲರು ಆಡಳಿತ ಮಾಡುತ್ತಿದ್ದರು. ಇವರು ಆಡಳಿತಕ್ಕೆ ಬರುವ ಮುನ್ನ, ನಮ್ಮ ದೇಶಕ್ಕೆ ವ್ಯಾಪಾರಕ್ಕೆಂದು ಬಂದಿದ್ದರು ಅಲ್ಲವೇ? ನಮ್ಮಗೆಲ್ಲಾ ಗೊತ್ತಿರುವಂತೆ ಈ ಬ್ರೀಟಿಷ್‌ರು ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವುದಕ್ಕೆಂದು ಬಂದು ನಮ್ಮಲ್ಲಿಯೇ ನೆಲಿಸಿ, ನಮ್ಮ ಮೇಲೆ ಸವಾರಿ ಮಾಡಿದ್ದರು. ಇದೆಲ್ಲರಿಗೂ ಗೊತ್ತಿರುವ […]
ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡೋದು ಸರಿಯಲ್ಲ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

Priyank Kharge ಬೆಂಗಳೂರು: ನನಗೆ ಬಿಟ್ಟರೆ ರಾಜ್ಯದ ಕೆಎಟಿ ಮತ್ತು ಕೆಪಿಎಸ್ಸಿಯನ್ನೇ ರದ್ದು ಮಾಡುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. KPSC ಅಧ್ಯಕ್ಷರ ಪುತ್ರಿಯ ಮೇಲೆ FIR ದಾಖಲು ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಕಲಿ ಆದಾಯ ಪ್ರಮಾಣ ಪತ್ರದ ದೂರು ಆಗಿದೆ. ನಿನ್ನೆ ರಾತ್ರಿ ಎಫ್‌ಐಆರ್ ದಾಖಲಾಗಿದೆ.ಇದನ್ನ ಸಂವಿಧಾನಾತ್ಮಕವಾಗಿಯೇ ಮಾಡಬೇಕಾಗುತ್ತದೆ. ಹೊಸ ಕಾನೂನು ತರಬೇಕಾಗುತ್ತದೆ ಎಂದರು. ಕೆಲವರು ಮಾಡೋಕೆ ಆಗಲ್ಲ ಅಂತಾರೆ. ಕಾನೂನು ಮಾಡೋದು ನಾವು. ಶಾಸನ ಮಾಡೋದು ನಾವು, ನಾವೆಲ್ಲರು […]
ಹತ್ಯೆಗೆ ಇರಾನ್ ಸಂಚು : ವಿಚಾರ ತಿಳಿದು ಸಿಟ್ಟಾದ ಟ್ರಂಪ್ – ಮುಂದೇನಾಯ್ತು? ಇಲ್ಲಿದೆ ನೋಡಿ

ವಾಷಿಂಗ್ಟನ್: ಅಮೆರಿಕ, ಇರಾನ್ ನಡುವಿನ ಜಟಾಪಟಿ ಜಗತ್ತಿನ ನಿದ್ದೆಗೆಡಿಸಿದ್ದು, ಇನ್ನೇನು ಯುದ್ಧ ನಿಂತೇ ಹೋಯ್ತು ಎನ್ನುವಷ್ಟರಲ್ಲಿ ಹೊಸ ಖ್ಯಾತೆ ರೂಪುಗೊಳ್ಳತ್ತದೆ. ಹೀಗಿರುವಾಗ ಅಮೆರಿಕ, ಇರಾನ್ ಮಧ್ಯೆ ಯುದ್ಧ ಈಗ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ತನ್ನ ಹತ್ಯೆಗೆ ಇರಾನ್ ಸಂಚು ರೂಪಿಸಿದ ವಿಚಾರ ತಿಳಿದು ಸಿಟ್ಟಾಗಿರುವ ಟ್ರಂಪ್ ಇರಾನ್ ವಿರುದ್ಧ ಯುದ್ಧದ ತೀವ್ರ ಎಚ್ಚರಿಕೆ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಇರಾನ್‌ನಿಂದ ತಮಗೆ ಎದುರಾಗಿರುವ ಜೀವ ಬೆದರಿಕೆಯ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಅಮೆರಿಕದ ಮಿಲಿಟರಿ ಪಡೆಗಳಿಗೆ ಈಗಾಗಲೇ ಸ್ಪಷ್ಟ […]
ಆರೋಗ್ಯವೇ ನಿಜವಾದ ಸಂಪತ್ತು, ಆರೋಗ್ಯವಿಲ್ಲದೆ ಯಾವ ಅಭಿವೃದ್ಧಿಯೂ ಇಲ್ಲ : ಯೋಜನಾಧಿಕಾರಿ ಕೆ ಬಿ ಮಂಜುನಾಥ್

ಶ್ರೀರಂಗಪಟ್ಟಣ : ನಮ್ಮ ಯೋಜನೆಯ ಮುಖ್ಯ ಉದ್ದೇಶವೇ “ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವುದು”. ಆರೋಗ್ಯವಿಲ್ಲದೆ ಯಾವ ಅಭಿವೃದ್ಧಿಯೂ ಇಲ್ಲ. ಹಾಗಾಗಿ ಆರೋಗ್ಯವೇ ನಮ್ಮ ಮೊದಲ ಆದ್ಯತೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನ ಕಡತನಾಳು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಚನೆ ಬಿಸಿ ಟ್ರಸ್ಟ್ ಪಾಂಡವಪುರದ ಯೋಜನಾಧಿಕಾರಿ ಯಶ್ವಂತ್ ತಿಳಿಸಿದರು. ಇಂದಿನ ಶಿಬಿರದಲ್ಲಿ ನಾರಾಯಣ ಹೃದಯಾಲಯ, ಮೈಸೂರುರವರಿಂದ […]